ರಾಘಣ್ಣ ಮನೆ ಸೊಸೆಯನ್ನ ತಾಯಿ ಅಂದಿದ್ಯಾಕೆ, ಅಷ್ಟಕ್ಕೂ ಮಗ ಯುವರಾಜ್ ಮದುವೆಯಾಗಿರೋದು ಯಾರನ್ನ ನೋಡಿ..

0 5

ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳ ಅಪ್ಪು ಪುನೀತ್ ರಾಜಕುಮಾರ್ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ, ಆ ಸಂದರ್ಭದಲ್ಲಿ ರಾಜಕುಮಾರ್ ಅವರ ಸಂಪೂರ್ಣ ಕುಟುಂಬ ಶೋಕಸಾಗರದಲ್ಲಿ ಮುಳುಗಿಹೋಗಿತ್ತು ಅವರ ಅಂತಿಮ ಸಂಸ್ಕಾರಕ್ಕಾಗಿ ಒಂದಷ್ಟು ಧಾರ್ಮಿಕ ವಿಧಿ-ವಿಧಾನಗಳು ನಡೆಯಬೇಕಾಗಿತ್ತು ಹೀಗೆ ಎಲ್ಲರೂ ಕಂಗಾಲಾಗಿದ್ದ ಸಂದರ್ಭದಲ್ಲಿ ಅಲ್ಲಿದ್ದ ಒಬ್ಬ ಹೆಣ್ಣುಮಗಳು ಮಾತ್ರ ತಾನು ಎಲ್ಲಾ ಕಾರ್ಯಕ್ಕೂ ಮುಂದಾಳತ್ವವನ್ನು ವಹಿಸಿಕೊಂಡು ಅಲ್ಲಿಯೇ ಮುಂದೆ ನಿಂತು ಎಲ್ಲಾ ಕಾರ್ಯಗಳನ್ನು ಹಾಗೂ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದು ಕಂಡುಬಂದಿತ್ತು ಹಾಗಾದ್ರೆ ಆಕೆ ಯಾರು? ಈ ಪ್ರಶ್ನೆಯ ಬಹುತೇಕ ಎಲ್ಲರಲ್ಲೂ ಮೂಡಿತ್ತು. ಈ ಪ್ರಶ್ನೆಗೆ ಇವತ್ತು ನಾವು ಉತ್ತರವನ್ನು ನೀಡಲಿದ್ದೇವೆ.

ಅಂದು ಅಲ್ಲಿ ಓಡಾಡುತ್ತಿದ್ದ ಆ ಹುಡುಗಿ ಬೇರೆ ಯಾರೂ ಅಲ್ಲ ಅವಳು ರಾಘವೇಂದ್ರ ರಾಜಕುಮಾರ್ ಅವರ ಮಗನಾದ ಯುವರಾಜ್ ಅವರ ಮಡದಿ ಶ್ರೀದೇವಿ ಭೈರಪ್ಪ.ಹಾಗಾದ್ರೆ ಈ ಶ್ರೀದೇವಿ ಭೈರಪ್ಪ ಯಾರು ಅವರ ಬ್ಯಾಗ್ರೌಂಡ್ ಏನು ಎಂಬುದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಶ್ರೀದೇವಿ ಭೈರಪ್ಪ ಅವರು ರಾಘವೇಂದ್ರ ರಾಜಕುಮಾರ್ ಅವರ ಕುಟುಂಬಕ್ಕೆ ಬಹಳ ಆತ್ಮೀಯರಾದ ಒಂದು ಕುಟುಂಬದಿಂದ ಬಂದವರು,ಇವರು ಮೂಲತಃ ಮೈಸೂರಿನವರು, ತಮ್ಮ ಬಾಲ್ಯಜೀವನವನ್ನು ಮೈಸೂರಿನಲ್ಲಿಯೇ ಕಳೆದಂತಹ ಇವರು ತಮ್ಮ ಉನ್ನತ ವ್ಯಾಸಂಗವನ್ನು ದೆಹಲಿಯಲ್ಲಿ ಮುಗಿಸಿಕೊಂಡು ನಂತರದಲ್ಲಿ ಅವರು ದೆಹಲಿಯಿಂದ ಹಿಂದಿರುಗಿ ರಾಜ್ ಕುಮಾರ್ ಕುಟುಂಬದ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಕೆಲಸವನ್ನು ಪ್ರಾರಂಭಿಸಿದರು

ಇಷ್ಟೇ ಅಲ್ಲದೆ ಈ ಶ್ರೀದೇವಿ ಭೈರಪ್ಪ ಕೂಡ ರಾಜಕುಮಾರ್ ಫ್ಯಾಮಿಲಿಗೆ ಒಬ್ಬ ಒಳ್ಳೆಯ ಸ್ನೇಹಿತೆಯಾಗಿ ಮತ್ತು ಹಿತೈಷಿಯಾದರು, ಅವರು ಹೀಗೆ ವಜ್ರಶ್ವರಿ ಕಂಬೈನ್ಸ್ ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವರಾಜ್ ಕುಮಾರ್ ಅವರೊಂದಿಗೆ ಇವರ ಪ್ರೇಮ ಅಂಕುರವಾಗಿತ್ತು.

ಅಷ್ಟು ಮಾತ್ರವಲ್ಲದೆ ಇವರು ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಬಿಡುಗಡೆಯಾಗುವಂತಹ ಚಿತ್ರಗಳಿಗೆ ಪ್ರಚಾರವನ್ನು ಭರ್ಜರಿಯಾಗಿ ನೀಡುತ್ತಿದ್ದರು. ಇವರ ಈ ಕಾರ್ಯಕ್ಷಮತೆಯನ್ನು ರಾಜ್ ಕುಮಾರ್ ಅವರ ಕುಟುಂಬ ಗಮನಿಸದೆ ಇರದು. ಅಷ್ಟು ಮಾತ್ರವಲ್ಲದೆ ಬೆಂಗಳೂರಿನ ಚಂದ್ರ ಲೇಔಟ್ನಲ್ಲಿ ಇರುವಂತಹ ಪ್ರತಿಷ್ಠಿತ ಡಾಕ್ಟರ್ ರಾಜಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ ಹಿಂದಿನ ರೂವಾರಿ ಕೂಡ ಇವರೇ,

ಹೌದು ಶ್ರೀದೇವಿ ಭೈರಪ್ಪ ಅವರು ತಮ್ಮ ಕರ್ನಾಟಕದ ಬಹುತೇಕ ಮಕ್ಕಳು ದೆಹಲಿ ಅಥವಾ ಹೈದರಾಬಾದ್ ಗೆ ಹೋಗಿ ತರಬೇತಿ ಪಡೆದು ಕೊಳ್ಳುವಷ್ಟು ಸೌಲಭ್ಯ ಇಲ್ಲದವರಾಗಿದ್ದರು, ಇಂತಹ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ತಾವು ಯಾವುದೇ ಕಾರಣಕ್ಕೂ ಹಿಂದುಳಿಯಬಾರದು ಎಂಬ ಮನೋಭಾವನೆಯಿಂದ ಹೀಗೊಂದು ಸಿವಿಲ್ ಸರ್ವಿಸ್ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಬೇಕು ಅದು ರಾಜಕುಮಾರ್ ಅವರ ಹೆಸರಿನಲ್ಲಿ ಪ್ರಾರಂಭಿಸಬೇಕು ಎಂಬ ಮಾತನ್ನು ರಾಘವೇಂದ್ರ ರಾಜಕುಮಾರ್ ಅವರ ಮುಂದೆ ಇಟ್ಟರು.

ಮೊದಮೊದಲು ರಾಘವೇಂದ್ರ ರಾಜಕುಮಾರ್ ಅವರು ಈ ವಿಷಯದಲ್ಲಿ ಹಿಂದೇಟು ಹಾಕಿದ್ದರು ಕೂಡ, ನಂತರದಲ್ಲಿ ಅದಕ್ಕೆ ಒಪ್ಪಿದರು, ಆನಂತರದಲ್ಲಿ ಬಂದಿದ್ದೆ ಪ್ರತಿಷ್ಠಿತ, ಇಂದು ಬಹುತೇಕ ಐಎಎಸ್ ಐಪಿಎಸ್ ಅಧಿಕಾರಿಗಳನ್ನು ಭಾರತಕ್ಕೆ ನೀಡುತ್ತಿರುವ ಡಾಕ್ಟರ್ ರಾಜಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ, ಹೀಗೆ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವರಾಜನ ಜೊತೆಗೂಡಿ ಇವರು ಮಾಡುತ್ತಿದ್ದ ಅಂತಹ ಕಾರ್ಯಗಳನ್ನು ಗಮನಿಸಿದ ರಾಜ್ ಫ್ಯಾಮಿಲಿಗೆ ಇವರ ನಡುವಿನ ಪ್ರೀತಿ ಅರ್ಥ ಆಗದೆ ಇರದು.

ಇವರ ಪ್ರೀತಿಯ ವಿಷಯ ತಿಳಿದ ನಂತರ ರಾಜ್ ಫ್ಯಾಮಿಲಿ ಆಕೆಯನ್ನು ಮನಃಸ್ಪೂರ್ತಿಯಾಗಿ ಒಪ್ಪಿ ರಾಜಕುಟುಂಬದ ಒಬ್ಬ ಸದಸ್ಯನಾಗಿ ಅಂದರೆ ಯುವ ರಾಜಕುಮಾರ್ ಅವರ ಪತ್ನಿಯಾಗಿ ಬರಮಾಡಿಕೊಂಡರು. ಅಂದಿನಿಂದ ಇಂದಿನವರೆಗೂ ಶ್ರೀದೇವಿ ಭೈರಪ್ಪ ಅವರು ಡಾಕ್ಟರ್ ರಾಜಕುಮಾರ್ ಅವರ ಫ್ಯಾಮಿಲಿಗೆ ಒಳ್ಳೆಯ ಸೊಸೆಯಾಗಿ ಯುವರಾಜ್ ಕುಮಾರ್ ಅವರಿಗೆ ಒಬ್ಬ ಒಳ್ಳೆಯ ಮಡದಿಯಾಗಿ ಅವರ ಕುಟುಂಬದ ಗೌರವ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply

Your email address will not be published.