ಪತ್ನಿ ಅಶ್ವಿನಿ ಬೇಜಾರ್ ಅಥವಾ ಕೋಪಗೊಂಡಾಗ ಅಪ್ಪು ಹಾಡುತ್ತಿದ್ದ ರೊಮ್ಯಾಂಟಿಕ್ ಹಾಡು ಇದೆ

0 2

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಮೂರು ತಿಂಗಳುಗಳು ಕಳೆದು ಹೋಗಿವೆ ಆದರೆ ಈ ಕ್ಷಣಕ್ಕೂ ಅವರು ಇಲ್ಲ ಎನ್ನುವ ಸತ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ಮಾಡಿರುವ ಸಹಾಯಗಳು ಹಾಗೂ ಒಳ್ಳೆಯ ಕೆಲಸಗಳಿಂದ ಅವರು ಸದಾ ಅಮರರಾಗಿರುತ್ತಾರೆ. ರಾಜಕುಮಾರ್ ಅವರು ತಮ್ಮ ಮಕ್ಕಳಿಗೆ ಸಿನಿಮಾರಂಗಕ್ಕೆ ಪ್ರವೇಶಿಸುವ ಮೊದಲು ಎಲ್ಲರೂ ಮದುವೆಯಾಗಬೇಕು ಎಂದು ತಿಳಿಸಿದ್ದರು ಆ ಪ್ರಕಾರವಾಗಿ ಪುನೀತ್ ರಾಜಕುಮಾರ್ ಅವರು ತಾವು ನಾಯಕನಾಗಿ ಬೆಳ್ಳಿತೆರೆಗೆ ಆಗಮಿಸುವ ಮೊದಲೇ ಅಶ್ವಿನಿ ಅವರನ್ನ ಮದುವೆಯಾಗಿದ್ದರು.

ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹವಾಗಿದ್ದು ಪುನೀತ್ ರಾಜಕುಮಾರ್ ಅವರ ಆಪ್ತ ಸ್ನೇಹಿತರಿಂದ ಅವರಿಗೆ ಅಶ್ವಿನಿ ಅವರ ಪರಿಚಯವಾಗುತ್ತದೆ. ಇವರ ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿ ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕೆ ಪ್ರಾರಂಭಿಸುತ್ತಾರೆ ನಂತರ ಇಬ್ಬರೂ ಕೂಡ ಭಯ ಪಡುತ್ತವೆ ತಮ್ಮತಮ್ಮ ಮನೆಗಳಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ತಿಳಿಸುತ್ತಾರೆ.

ಆದರೆ ಎರಡೂ ಕುಟುಂಬದವರು ಯಾವುದೇ ತಕರಾರನ್ನು ಮಾಡದೆ ಇವರಿಬ್ಬರ ಮದುವೆಗೆ ಒಪ್ಪಿಗೆ ನೀಡುತ್ತಾರೆ. ಇಬ್ಬರೂ ಕೂಡ ಮದುವೆಯಾಗುತ್ತಾರೆ. ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿಯವರನ್ನು ಬಹಳ ಹತ್ತಿರದಿಂದ ನೋಡಿದವರು ಹೇಳುವ ಪ್ರಕಾರ ನಾವು ಈ ದಿನಗಳಲ್ಲಿ ಪ್ರೀತಿ ಪ್ರೇಮ ಅನ್ಯೋನ್ಯತೆಯನ್ನು ಕೇವಲ ಟಿವಿಗಳಲ್ಲಿ ಮಾತ್ರ ನೋಡುತ್ತಿದ್ದೆವು ಆದರೆ ಪುನೀತ್ ರಾಜಕುಮಾರ ಹಾಗೂ ಅಶ್ವಿನಿ ಅವರು ನಿಜ ಜೀವನದಲ್ಲಿ ಕೂಡ ಅಷ್ಟೇ ಪ್ರೀತಿ ಅನ್ಯೋನ್ಯತೆಯಿಂದ ಇರುತ್ತಿದ್ದರು ಎಂದು ಹೇಳುತ್ತಾರೆ.

ಇನ್ನು ಕೆಲವೊಮ್ಮೆ ಅಶ್ವಿನಿ ಅವರು ಚಿಕ್ಕ ಪುಟ್ಟ ವಿಚಾರಗಳಿಗೆ ಬೇಸರಪಟ್ಟುಕೊಂಡಾಗ ಅಪ್ಪು ಅವರು ತಮ್ಮ ಇಷ್ಟದ ಒಂದು ಹಾಡನ್ನು ಹೇಳಿ ಅಶ್ವಿನಿ ಅವರನ್ನು ಸಮಾಧಾನ ಮಾಡುತ್ತಿದ್ದರಂತೆ ಪುನೀತ್ ರಾಜಕುಮಾರ್ ಅವರು ಬಹಳ ಇಷ್ಟಪಡುತ್ತಿದ್ದದ್ದು ಅಪ್ಪಾಜಿಯವರ ರವಿಚಂದ್ರ ಚಿತ್ರದ ಎಂಥ ಸೌಂದರ್ಯ ಕಂಡೆ ಎನ್ನುವ ಹಾಡನ್ನು ಹೇಳಿ ಅಶ್ವಿನಿ ಅವರನ್ನು ಸಮಾಧಾನ ಮಾಡುತ್ತಿದ್ದರಂತೆ. ಇನ್ನು ಕೆಲವೊಮ್ಮೆ ಅಶ್ವಿನಿ ಅವರನ್ನು ಹೋಟೆಲಿಗೆ ಕರೆದುಕೊಂಡು ಹೋಗಿ ಅವರಿಗೆ ಇಷ್ಟವಾದ ಊಟವನ್ನ ಆರ್ಡರ್ ಮಾಡಿ ಅವರೊಟ್ಟಿಗೆ ಸಮಯವನ್ನು ಕಳೆಯುವ ಮೂಲಕ ಅವರನ್ನು ಸಮಾಧಾನ ಮಾಡುತ್ತಿದ್ದರಂತೆ.

ಪುನೀತ್ ರಾಜಕುಮಾರ್ ಅವರು ತಮ್ಮ ಸಿನಿ ಜೀವನದ ಜೊತೆಗೆ ತಮ್ಮ ಕುಟುಂಬದ ನೆಮ್ಮದಿಯನ್ನು ಕೂಡ ಚೆನ್ನಾಗಿ ಕಾಪಾಡಿ ಕೊಂಡು ಹೋಗುತ್ತಿದ್ದರು ಕುಟುಂಬದವರೊಡನೆ ಸಮಯವನ್ನು ಕಳೆಯುವ ಮೂಲಕ ಅವರಿಗೂ ಕೂಡ ಖುಷಿಯನ್ನು ನೀಡುತ್ತಿದ್ದರು. ಈಗ ಪುನೀತ್ ರಾಜಕುಮಾರ್ ಅವರು ಇಲ್ಲದಿರುವುದು ಅವರ ಕುಟುಂಬದವರಿಗೂ ಕೂಡ ತಡೆಯಲಾರದಷ್ಟು ನೋವನ್ನು ತಂದುಕೊಟ್ಟಿದೆ. ದೇವರು ಅವರ ಕುಟುಂಬದವರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ನಾವೆಲ್ಲರೂ ದೇವರಲ್ಲಿ ಕೇಳಿಕೊಳ್ಳೋಣ.

Leave A Reply

Your email address will not be published.