ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಅಪ್ಪು ಇಲ್ಲದೆ 37 ದಿನಗಳೆ ಕಳೆದಿದೆ ಇದೇ ಮೊದಲ ಬಾರಿಗೆ ಮೀಡಿಯಾ ಜೊತೆ ಮಾತಾಡಿದ ಅಶ್ವಿನಿ ಹೇಳಿದ್ದೇನು, ಗೊತ್ತೆ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಆತ್ಮೀಯ ಓದುಗರೇ ವಿಧಿ ಅಟ್ಟಹಾಸ ಮೆರೆಯದೆ ಹೋಗಿದ್ದರೆ, ಅದೃಷ್ಟ ಕೈಕೊಡದೇ ಹೋಗಿದ್ದರೆ, ನಮ್ಮ ನಿಮ್ಮೆಲ್ಲರ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ತಮ್ಮ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುತ್ತಿದ್ದರು. ಆದರೆ, ದುರ್ವಿಧಿಯ ಲೆಕ್ಕಾಚಾರವೇ ಬೇರೆ ಆಗಿತ್ತು. ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ಪುನೀತ್ ರಾಜ್‌ಕುಮಾರ್ ದಿಢೀರನೆ ತೆರಳೇಬಿಟ್ಟರು. ಈ ಸಂದರ್ಭದಲ್ಲಿ ಅಪ್ಪು ತೀರಿಕೊoಡು 37 ದಿನಗಳ ನಂತರ ಇದೇ ಮೊದಲ ಬಾರಿಗೆ ಮೀಡಿಯಾ ಜೊತೆ ಮಾತಾಡಿದ ಅಶ್ವಿನಿ ಹೇಳಿದ್ದೇನು? ಈ ಲೇಖನದಲ್ಲಿ ನೋಡೋಣ.

ಅಭಿಮಾನಿಗಳ ಪಾಲಿನ ಪ್ರೀತಿಯ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಟುಂಬದ ಪಾಲಿನ ಪ್ರೀತಿಯ ಅಪ್ಪು ಅಗಲಿ ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ. ಅಪ್ಪು ಎಂತಹ ಫ್ಯಾಮಿಲಿ ಮ್ಯಾನ್ ಎನ್ನುವುದು ನಮಗೆ ಗೊತ್ತಿದೆ ಎಷ್ಟೇ ಬ್ಯುಸಿ ಇದರು, ಏನೇ ಕೆಲಸ ಇದ್ದರು ಅಪ್ಪು ಅವರು ಫ್ಯಾಮಿಳಿಗಾಗಿ ಸಮಯ ಕೊಡುವುದನ್ನು ಕಡಿಮೆ ಮಾಡುತ್ತಿರಲಿಲ್ಲ. ಎಲ್ಲರಿಗು ಅಪ್ಪು ಅವರು ಹೇಳುತ್ತಿದ್ದಿದ್ದು ಒಂದೇ ಮಾತು ಮೊದಲು ನಿಮ್ಮ ಫ್ಯಾಮಿಲಿನ ಪ್ರೀತಿಸಿ, ನಂತರ ನನ್ನನ್ನ ಪ್ರೀತಿಸಿ ಅಂತ.

ಅಪ್ಪು ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾದರು. ಇವರದ್ದು ಲವ್ ಮ್ಯಾರೇಜ್ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನುವ ವಿಚಾರ ನಮಗೆ ಗೊತ್ತಿದೆ. ಅಪ್ಪು ಅವರು ಇಲ್ಲವಾಗಿ ಒಂದು ತಿಂಗಳು ಕಳೆದ ನಂತರ ಅಪ್ಪು ಮತ್ತು ಅಶ್ವಿನಿ ಅವರ ಮದುವೆ ವಾರ್ಷಿಕೋತ್ಸವ ದಿನ ಬಂದಿತು. ಡಿಸೆಂಬರ್ 1, 2021 ಕ್ಕೆ ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು 22 ವರ್ಷಗಳು ಉರುಳಿವೆ. ಅನ್ಯೋನ್ಯವಾಗಿ ಇತರರಿಗೆ ಮಾದರಿ ದಂಪತಿಯಾಗಿ ಇಷ್ಟು ದಿನ ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಜೀವನ ಸಾಗಿಸಿದ್ದರು.

ತಮ್ಮ 22ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲೇ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರು. ತಮ್ಮ ಪ್ರೀತಿಯ ಪತಿ, ಮನದೊಡೆಯ ಪುನೀತ್ ಇಲ್ಲದೆ ಇಂದಿನ ವಿವಾಹ ವಾರ್ಷಿಕೋತ್ಸವದ ಸಂದರ್ಭದಂದು ಪತ್ನಿ ಅಶ್ವಿನಿ ಮಂಕಾಗಿದ್ದಾರೆ. ಅಪ್ಪು ಅಶ್ವಿನಿ ಅವರ ದಾಂಪತ್ಯ ಜೀವನಕ್ಕೆ 22 ವರ್ಷಗಳು ತುಂಬಿದೆ. 22 ವರ್ಷಗಳಿಂದ ಅಪ್ಪು ಅವರ ಜೊತೆ ಇದ್ದರು ಅಶ್ವಿನಿ. ಪ್ರತಿವರ್ಷ ಮದುವೆ ವಾರ್ಷಿಕೋತ್ಸವವನ್ನು ಬಹಳ ಸಂತೋಷದಿಂದ ಆಚರಿಸುತ್ತಿದ್ದರು. ಪ್ರತಿವರ್ಷ ಫಾರಿನ್ ಗೆ ಹೋಗಿ ಅಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸುತ್ತಿದ್ದರು. ಇಲ್ಲದೆ ಹೋದರೆ ಮನೆಯಲ್ಲಿ ಸರಳವಾಗಿ ಮಕ್ಕಳ ಜೊತೆ, ಕೆಲವು ಸ್ನೇಹಿತರ ಜೊತೆ ಆಚರಣೆ ಮಾಡುತಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಪುನೀತ್ ವಿವಾಹದ ಎರಡು ಫೋಟೋಗಳು ವೈರಲ್ ಆಗಿದೆ. ಅದರಲ್ಲಿ ಒಂದು ಫೋಟೋದಲ್ಲಿ ಅಣ್ಣಾವ್ರು ಅಪ್ಪು ಮದುವೆ ದಿನ ಜನ ಜೋಡಿಗೆ ಆಶೀರ್ವಾದ ಮಾಡುತ್ತಿರುವ ಕ್ಷಣ ನೋಡಲು ಖುಷಿ ನೀಡುತ್ತಿದೆ. ಅಪ್ಪು ಮತ್ತು ಅಶ್ವಿನಿ ಇಬ್ಬರು ಸಹ ಒಂದೆರಡು ವರ್ಷಗಳ ಹಿಂದೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಆಗ ಮನಬಿಚ್ಚಿ ಮಾತನಾಡಿದ್ದರು ಅಶ್ವಿನಿ ಅವರ ಜೊತೆ ನಾವು ಮಾಲ್ ಗಳಿಗೆ ಹೋದರೆ ಜನ ಅವರ ಜೊತೆ ನಮ್ಮನ್ನು ಗುರುತು ಹಿಡಿಯುತ್ತಾರೆ.

ನನಗೂ ಮಕ್ಕಳಿಗೂ ಅದು ತುಂಬಾ ಮುಜುಗರ ಆಗುತ್ತೆ. ಅದರಿಂದ ನಾವು ಅವರ ಜೊತೆ ಮಾಲ್ ಗಳಿಗೆ ಹೆಚ್ಚಾಗಿ ಹೋಗಲ್ಲ ಎಂದು ಹೇಳಿದ್ದರು. ಇಂತಹ ಕಷ್ಟದ ಸಮಯದಲ್ಲಿ ಕೂಡ ಅಶ್ವಿನಿ ಅವರು ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪುನೀತ್ ಅವರು ನಮನ್ನು ಆಗಲಿ ಇವತ್ತಿಗೆ 35 ದಿನ, ನಾನು ಅವರನ್ನು ಮದುವೆಯಾಗಿ ಇವತ್ತಿಗೆ 22 ವರ್ಷವಾಗಿದೆ. ಪ್ರತಿ ವರ್ಷ ನಮ್ಮ ಮದುವೆ ವಾರ್ಷಿಕೋತ್ಸವದಂದು ನಾವು ವಿದೇಶಕ್ಕೆ ಪ್ರವಾಸಕ್ಕೆ ಹೋಗುತ್ತಿದ್ವಿ, ನಾನು ಅವರಿಲ್ಲ ಎಂದು ಇವತ್ತಿನ ವರೆಗೆ ಅಂದುಕೊಂಡಿಲ್ಲ, ಇಲ್ಲೇ ನಮ್ಮ ಜೊತೆಯಲ್ಲಿ ಅಪ್ಪು ಸದಾ ಇರುತ್ತಾರೆ, ಇದಕ್ಕಿಂತ ಹೆಚ್ಚು ನಾನು ಏನು ಮಾತನಾಡುವುದಿಲ್ಲ ಎಂದು ಹೇಳಿ ಅಶ್ವಿನಿ ಅವರು ಭಾವುಕರಾಗಿದ್ದಾರೆ.

ಆಗಾಗ ಅವರು ನಮ್ಮನ್ನ ಸಿನಿಮಾಗೆ ಕರೆದುಕೊಂಡು ಹೋಗ್ತಾರೆ, ಕಾಫಿ ಕುಡಿತೀವಿ ಸಿನಿಮಾ ನೋಡ್ತೀವಿ, ಆಗಾಗ ಮನೆ ಹತ್ತಿರ ಇರುವ ಪಾರ್ಕ್ ಗೆ ವಾಕಿಂಗ್ ಗೆ ಕರೆದುಕೊಂಡು ಹೋಗ್ತಾರೆ ನಮಗೆ ಸಮಯ ಕೊಡ್ತಾರೆ. ಪುನೀತ್ ಮತ್ತು ಮಕ್ಕಳು ಇಬ್ಬರಿಗೂ ಮನೆಯಲ್ಲಿ ಫೋಟೋಗೆ ಪೋಸ್ ಕೊಡೋದು ಅಂದ್ರೆ ಇಷ್ಟ ಇಲ್ಲ. ಮಕ್ಕಳ ಜೊತೆ ಮನೆಯಲ್ಲಿ ಆಟ ಆಡ್ತಾ ಇರ್ತಾರೆ ಎಂಜಾಯ್ ಮಾಡ್ತಾರೆ ನಮಗೂ ಅದು ಸಂತೋಷ ಕೊಡುತ್ತೆ” ಎಂದು ಅಶ್ವಿನಿ ಹೇಳಿದ್ದಾರೆ.

ಇನ್ನು ಅಪ್ಪು ಅವರಿಗೆ ಅಶ್ವಿನಿ ಅವರಿಗೆ ನೀವು ಏನ್ ಮಾಡಿದ್ದೀರಿ ಅಂತ ಕೇಳಿದಾಗ, ನಾನು ಅವರಿಗೋಸ್ಕರ ಏನು ಮಾಡಿಲ್ಲ ಅವರಿಗೆ ನಾನು ಸಮಯ ಕೊಟ್ರೆ ಅವರು ಸಂತೋಷ ಪಡ್ತಾರೆ ಎಂದು ನಗುತ್ತಾ ಹೇಳಿದ್ರು ಅಪ್ಪು. ಕಳೆದ ವಿವಾಹ ವಾರ್ಷಿಕೋತ್ಸವ ದಲ್ಲಿ ಅಶ್ವಿನಿ ಅವರಿಗೆ 3 ಕೋಟಿ ರೂಪಾಯಿಯ ಕಾರ್ ಗಿಫ್ಟ್ ನೀಡಿದ್ದರು. ಆದರೆ ಈಗ ಅಷ್ಟು ಪ್ರೀತಿಸುತ್ತಿದ್ದ ಗಂಡ ಜೊತೆ ಇಲ್ಲದೆ ಅಶ್ವಿನಿ ಅವರ ಮನಸ್ಥಿತಿ ಹೇಗಾಗಿರುತ್ತದೆ ಎಂದು ಊಹಿಸಲು ಸಹ ಕಷ್ಟವಾಗಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *