ಈಗಾಗಲೆ ಚಂದ್ರಲೋಕಕ್ಕೆ ಹೋಗಿ ಅಲ್ಲಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ. ಇದೀಗ ಚಂದ್ರನ ಮೇಲೆ ಗುಡಿಸಲಿನಂತೆ ಕಾಣುವ ಪೋಟೊ ವೈರಲ್ ಆಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಚಂದ್ರನ ಮೇಲೆ ಗುಡಿಸಲಿನಂತೆ ಕಂಡು ಬಂದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಜ್ಞಾನಿಗಳು ಪೋಟೊ ಶೇರ್ ಮಾಡಿದ್ದಾರೆ. ಫೋಟೊ ನೋಡಿ ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ. ಪೋಟೋ ನೋಡಿದ ಪ್ರತಿಯೊಬ್ಬರಿಗೂ ಏನಿದು ಚಂದ್ರನ ಮೇಲೆ ಜನರು ವಾಸಿಸುತ್ತಿದ್ದಾರಾ ಎಂಬ ಪ್ರಶ್ನೆ ಕಾಡಿದೆ. ಈ ಫೋಟೊ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ.

ಚೀನಾದ ಯುಟು-2 ರೋವರ್, ಯುಟು 2 ರೋವರ್ ನ ವಿಜ್ಞಾನಿಗಳು ಚಂದ್ರನ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾಗ ಚಂದ್ರನ ಮೇಲೆ ಗುಡಿಸಲು ಆಕಾರದ ವಸ್ತುವನ್ನು ಪತ್ತೆ ಮಾಡಿದ್ದಾರೆ. ಈ ವಸ್ತುವು ಚಂದ್ರನ ದೂರದ ಪ್ರದೇಶವಾದ ವಾನ್ ಕರ್ಮನ್ ಕ್ರೇಟರ್ ಬಳಿ ಗೋಚರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಚೀನಾ ದೇಶದ ವಿಜ್ಞಾನಿಗಳು ಗುಡಿಸಲು ಆಕಾರದಲ್ಲಿ ಕಂಡ ಆ ವಸ್ತುವನ್ನು ಮಿಸ್ಟರಿ ಹಟ್ ಎಂದು ಹೆಸರಿಸಿದ್ದಾರೆ. ಹಾಗಾದರೆ ಗುಡಿಯಾಕಾರದ ಈ ವಸ್ತು ಯಾವುದು ಎಂಬುದನ್ನು ನೋಡಬೇಕು. ಈ ನಿಗೂಢ ಆಕೃತಿಯು ಒಂದು ದೊಡ್ಡ ಕಲ್ಲಿನ ತುಂಡಾಗಿರಬಹುದು ಎಂದು ಅನೇಕ ತಜ್ಞರು ಹೇಳುತ್ತಾರೆ. ರೋವರ್ ಆ ಸ್ಥಳವನ್ನು ಸಮೀಪಿಸಿದ ನಂತರ ಈ ರಹಸ್ಯವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಿಜ್ಞಾನಿಗಳು ಸ್ವಾಭಾವಿಕವಾಗಿ ಈ ವಸ್ತುವಿನ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. 2019 ರ ಜನವರಿ 3 ರಂದು ಸೌರಶಕ್ತಿ ಚಾಲಿತ ಯುಟು 2 ಮತ್ತು ಚೇಂಜ್ 4 ಲ್ಯಾಂಡರ್ ಚಂದ್ರನ ಅಂತ್ಯಂತ ದೂರ ಪ್ರದೇಶದ ಮೇಲೆ ಲ್ಯಾಂಡ್ ಮಾಡಿತು. ಈ ವೇಳೆ ಯುಟು-2 ಚಂದ್ರನ ಮೇಲೆ 186 ಕಿಲೋಮೀಟರ್‌ಗಳಷ್ಟು ಹರಡಿ ವಾನ್ ಕರ್ಮನ್ ಕ್ರೇಟರ್ ಅನ್ನು ತನಿಖೆ ಮಾಡುತ್ತಿದೆ.

ಯುಟು ಎಂದ ಪದದಲ್ಲಿ ಕುತೂಹಲಕಾರಿಯಾದ ವಿಷಯ ಹಾಗೂ ಚೈನೀಸ್ ಭಾಷೆ ಇದೆ. ಈ ಪದಕ್ಕೆ ಚೈನೀಸ್ ಭಾಷೆಯಲ್ಲಿ ಮಹತ್ವವಿದೆ. ಪೂರ್ವ ಏಷ್ಯಾದ ಜಾನಪದದಲ್ಲಿ ಯುಟು ಚಂದ್ರನ ಮೇಲೆ ವಾಸಿಸುವ ಮೊಲವಾಗಿದೆ. ಚೀನಿ ಪುರಾಣದಲ್ಲಿ ಯುಡು ಅಥವಾ ಯುಟು ಭೂಗತ ಜಗತ್ತಿನ ರಾಜಧಾನಿಯಾಗಿದೆ. ಈ ಮಾಹಿತಿ ಅಪರೂಪವಾಗಿದ್ದು ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!