ಅಪಾರ್ಟ್ಮೆಂಟ್ ಹಾಗೂ ಇಂಡಿಪೆಂಡೆಂಟ್ ಮನೆ ಇದರಲ್ಲಿ ಯಾವುದು ಉತ್ತಮ ಇಲ್ಲಿದೆ ಮಾಹಿತಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮೊದಲು ಮಾನವ ಅಲೆಮಾರಿ ಜೀವನವನ್ನು ನಡೆಸುತ್ತಿದ್ದ ನಂತರ ಕಾಲಕ್ರಮೇಣ ಅಲೆಮಾರಿ ಜೀವನವನ್ನು ಮುಕ್ತಾಯಗೊಳಿಸಿ ಒಂದು ಕಡೆ ಸ್ಥಿರವಾಗಿ ನೆಲೆಸುವುದನ್ನು ಕಲಿತ ಆದರೆ ಇಂದಿನ ದಿನಮಾನದಲ್ಲಿ ಅಪಾರ್ಟ್ ಮೆಂಟ್ ಹಾಗೂ ಸ್ವಂತ ಮನೆಗಳಾಗಿ ರೂಪುಗೊಂಡಿದೆ ನಗರ ಪ್ರದೇಶಗಳಲ್ಲಿ ವಸತಿ ನಿವೇಶನಗಳ ಅಭಾವದಿಂದ ಅಪಾರ್ಟ್ ಮೇಂಟ್ ಹೆಚ್ಚಾಗಿ ಕಂಡು ಬರುತ್ತದೆ ಆದರೆ ಇದೊಂದು ಅಗ್ರಿಮೆಂಟ್ ರೀತಿಯ ಮನೆಯಾಗಿರುತ್ತದೆ ಹೇಗಿರುತ್ತದೆ ಎಂದರೆ ಒಂದು ರೀತಿಯ ವ್ಯವಹಾರದ ಹಾಗೆ ಅಪಾರ್ಟ್ಮೆಂಟ್ ವೆಚ್ಚವು ಅದರ ಸ್ಥಳವನ್ನು ನಿರ್ಧರಿಸಿದೆ

ಮೆಟ್ರೋ ನಿಲ್ದಾಣಗಳಿಗೆ ಹತ್ತಿರ ಕೇಂದ್ರ ಮುಖ್ಯ ಸಾರಿಗೆ ಕೇಂದ್ರಗಳು ಇರುವ ಕಡೆ ಅಪಾರ್ಟ್ಮೆಂಟ್ ಇದ್ದರೆ ಹೆಚ್ಚು ಹಣವನ್ನು ನೀಡಬೇಕು ಮತ್ತು ಇಂತಹ ವ್ಯವಸ್ಥೆ ಕಚೇರಿಗಳಿಗೆ ಹೆಚ್ಚು ಪ್ರಯೋಜನವಾಗಿದೆ.ಸ್ವಂತ ಮನೆ ಕಟ್ಟುವುದು ಸುಲಭದ ಮಾತಲ್ಲ ಆದರೆ ಪ್ರತಿಯೊಬ್ಬರಿಗೂ ಚಿಕ್ಕದಾರದು ಒಂದು ಸ್ವಂತ ಮನೆಯಿರಬೇಕು ಆಸೆ ಇದ್ದೇ ಇರುತ್ತದೆ ಸ್ವಂತ ಮನೆಯಲ್ಲಿ ಇರುವ ನೆಮ್ಮದಿ ಅಪಾರ್ಟ್ಮೆಂಟ್ ಗಳಲ್ಲಿ ಸಿಗಲು ಸಾಧ್ಯ ವಿಲ್ಲ ಹಾಗೆ ನಾವು ಈ ಲೇಖನದ ಮೂಲಕ ಅಪಾರ್ಟ್ಮೆಂಟ್ ಹಾಗೂ ಸ್ವಂತ ಮನೆಗಳ ಅನುಕೂಲ ಹಾಗೂ ಅನಾನುಕುಲದ ಬಗ್ಗೆ ತಿಳಿದುಕೊಳ್ಳೋಣ.

ನಗರ ಪ್ರದೇಶಗಳಲ್ಲಿ ಸೈಟ್ ಖರೀದಿ ಮಾಡಲು ತುಂಬಾ ಹಣ ಬೇಕಾಗುತ್ತದೆ ಎಸ್ಟೆಂದರೆ ಕೋಟಿ ಕೋಟಿ ಹಣ ಬೇಕಾಗುತ್ತದೆ ಆದರೆ ಅಪಾರ್ಟ್ ಮೆಂಟ ಅಲ್ಲಿ ವಾಸಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ ಹೇಗೆ ಅಂದ್ರೆ ಅಪಾರ್ಟ್ಮೆಂಟ್ ಅಲ್ಲಿ ಯಾವುದೇ ಸಮಸ್ಯೆಯಾದರೂ ಅಲ್ಲಿಯೇ ಎಲೆಕ್ಟ್ರಿಷಿಯನ್ ಹಾಗೂ ಇನ್ನಿತರ ಸಮಸ್ಯೆಯಾದರು ಸಹ ಕಾಲ್ ಮಾಡಿದ್ದರೆ ಬರುತ್ತಾರೆ ಹಾಗೂ ನಿರ್ವಹಣೆ ಮಾಡುವುದು ಸುಲಭವಾಗಿದೆ ಆದರೆ ಸ್ವಂತ ಮನೆಯಲ್ಲಿ ನೀರಿನ ನಳ ಕಿತ್ತಿದರು ಹಾಗೂ ಕರೆಂಟ್ ವೈಯರ್ ಅಲ್ಲಿ ಹಾಗೂ ಇನ್ನಿತರ ಯಾವುದೇ ಸಮಸ್ಯೆಯಾದರೂ ಸಹ ಮನೆಯ ಯಜಮಾನರಿಗೆ ನೋಡಿಕೊಳ್ಳಬೇಕು

ಮನೆಯ ಎಲ್ಲ ನಿರ್ವಹಣೆ ಮನೆಯವರೇ ನೋಡಿಕೊಳ್ಳಬೇಕು ಅಪಾರ್ಟ್ಮೆಂಟ್ ತೆಗೆದುಕೊಳ್ಳುವಾಗ ಆಫೀಸ್ ಹತ್ತಿರ ಅಥವಾ ಶಾಲೆ ಫಿಲ್ಮ್ ಟೆತರ ಹೀಗೆ ಇನ್ನಿತರ ಸಾರ್ವಜನಿಕ ಸ್ಥಳಗಳ ಹತ್ತಿರ ತೆಗೆದುಕೊಂಡರೆ ಪೆಟ್ರೋಲ್ ಮತ್ತು ಸಮಯವನ್ನು ಉಳಿತಾಯ ಮಾಡಬಹುದು ತುಂಬಾ ದೂರದಲ್ಲಿ ಅಪಾರ್ಟ್ಮೆಂಟ್ ತೆಗೆದುಕೊಂಡರೆ ಪ್ರಯಾಣವು ದೂರವಾಗಿರುತ್ತದೆ ಸಮಯವು ವ್ಯರ್ಥವಾಗುತ್ತದೆ ಹಾಗೂ ಅಪಾರ್ಟ್ಮೆಂಟ್ ಅಲ್ಲಿ ಸೆಕ್ಯುರಿಟಿ ಇರುತ್ತದೆ ಆದರೆ ಸ್ವಂತ ಮನೆಯಲ್ಲಿ ಯಾವುದೇ ಸೆಕ್ಯುರಿಟಿ ಇರುವುದಿಲ್ಲ ಹಾಗೂ ಯಾವುದೇ ರೀತಿಯ ಕಮ್ಯುನಿಕೇಶನ್ ಇರುವುದಿಲ್ಲ ಅಪಾರ್ಟ್ಮೆಂಟ್ ಗಳಲ್ಲಿ ಸ್ವಿಮ್ಮಿಂಗ್ ಫುಲ್ ಹಾಗೂ ಆಟದ ಮೈದಾನ ಹೀಗೆ ಇನ್ನಿತರ ಸೌಲಭ್ಯಗಳಿರುತ್ತದೆ ಆದರೆ ಸ್ವಂತ ಮನೆಯಲ್ಲಿ ಯಾವುದೇ ಸೌಲಭ್ಯಗಳಿರುವುದಿಲ್ಲ

ಮನೆಯವರ ಜೊತೆ ಬೆರೆಯಲು ಅಪಾರ್ಟ್ಮೆಂಟ್ ಗಳು ಪ್ರಯೋಜನಕಾರಿ ಹೇಗೆಂದರೆ ಸಮಯದ ಸದುಪಯೋಗವನ್ನು ಪಡೆಯಬಹುದು ಆಫೀಸ್ ಗೆ ಹತ್ತಿರದಲ್ಲಿ ಅಪಾರ್ಟ್ಮೆಂಟ್ ಗಳು ಇದ್ದಾಗ ಮಾತ್ರ ಸಮಯದ ಸದುಪಯೋಗವಾಗುತ್ತದೆ ಸ್ವಂತ ಮನೆಯಲ್ಲಿ ಇದ್ದಾಗ ತಮ್ಮ ಕುಟುಂಬದವರ ಜೊತೆ ತುಂಬಾ ಸಮಯ ಕಳೆಯಲು ಆಗುವುದಿಲ್ಲ

ಹೇಗೆ ಅಂದರೆ ಕೆಲಸ ಮಾಡುವ ಕಚೇರಿಗಳು ತುಂಬಾ ದೂರದಲ್ಲಿ ಇರುವ ಕಾರಣವಾಗಿ ಮನೆಯವರ ಜೊತೆ ಬೆರೆಯಲು ಆಗುವುದಿಲ್ಲ ಹಾಗೆಯೇ ಅಪಾರ್ಟ್ಮೆಂಟ್ ಗಳಲ್ಲಿ ಹಲವಾರು ಕುಟುಂಬಗಳು ವಾಸಮಾಡುವ ಕಾರಣ ಆಚಾರ ವಿಚಾರ ಉಡುಗೆ ತೊಡುಗೆ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಪರಸ್ಪರ ಜನರ ನಡುವೆ ಸಂವಹನವಾಗುತ್ತದೆ ಹಾಗೂ ಹಬ್ಬಹರಿದಿನಗಳಲ್ಲಿ ತುಂಬಾ ಸುಂದರವಾಗಿ ಆಚರಿಸಬಹುದು ಹಾಗೂ ಸ್ವಂತ ಮನೆಯಲ್ಲಿ ಸಾಕಷ್ಟು ರೀತಿಯ ಜಾಗಗಳು ಇರುತ್ತದೆ ಅಪಾರ್ಟ್ಮೆಂಟ್ ಗಳಲ್ಲಿ ಸಣ್ಣ ಜಾಗವನ್ನು ಹೊಂದಿರುತ್ತದೆ.

ಅಪಾರ್ಟ್ಮೆಂಟ್ ಗಳ ಅನಾನುಕೂಲ ಎಂದರೆ ಖರೀದಿಗು ಮುನ್ನ ದಾಖಲೆಗಳ ಸಮಗ್ರ ಪರಿಶೀಲನೆ ಮಾಡಬೇಕು ಇಲ್ಲವಾದಲ್ಲಿ ಆಸ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಇದೊಂದು ದುಡ್ಡಿನ ಲೆಕ್ಕಾಚಾರ ಸ್ವಲ್ಪ ಎಡವಿದರೂ ಅಪಾಯಕಾರಿಯಾಗಿದೆ ನಿರ್ಮಾಣ ಹಂತದಲ್ಲಿರುವ ಫ್ಲ್ಯಾಟ್ ಖರೀದಿ ಮಾಡುವುದಿದ್ದರೆ ದಾಖಲೆಗಳ ಸಂಪೂರ್ಣ ಪರಿಶೀಲನೆ ಮಾಡಬೇಕಾಗುತ್ತದೆ.

ಇಲ್ಲವಾದಲ್ಲಿ ಹಣಕಾಸಿನ ತೊಂದರೆಗೆ ಒಳಗಾಗುವ ಅಪಾಯವಿರುತ್ತದೆ ಮೊದಲು ಬಿಲ್ಡರ್ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಅಗತ್ಯ ಅನುಮೋದನೆಗಳನ್ನು ಪಡೆದುಕೊಂಡಿದ್ದಾರೋ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಇಲ್ಲವಾದರೆ ಅದು ಅಸಿಂಧುವಾಗುತ್ತದೆ

ಬಹುತೇಕ ಅಪಾರ್ಟ್‌ಮೆಂಟ್ ಪ್ರಾಜೆಕ್ಟ್‌ಗಳು ಅರ್ಧಕ್ಕೇ ನಿಂತಿರುತ್ತವೆ ಏಕೆಂದರೆ ಅಗತ್ಯ ಅನುಮತಿಗಳು ಸಿಗದಿರುವಾಗ ಇಂಥ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಒಂದು ವೇಳೆ ಪ್ರಾಜೆಕ್ಟ್ ಪೂರ್ಣಗೊಂಡಿದ್ದರೂ ಸಹ ಅಲ್ಲಿ ವಾಸ ಮಾಡಲು ಅನುಮತಿ ಸಿಗುವುದಿಲ್ಲ. ಹೀಗಾಗಿ ಸಂಪೂರ್ಣವಾಗಿ ದಾಖಲೆಗಳನ್ನು ಪರೀಕ್ಷಿಸದೆ ಮನೆ ಬುಕ್ ಮಾಡುವುದು ಸರಿಯಲ್ಲ ಹಾಗೂ ನಿರ್ವಹಣಾ ವೆಚ್ಚವನ್ನು ಭರಿಸಲೆಬೇಕು.ಹೀಗೆ ಅಪಾರ್ಟ್ಮೆಂಟ್ ಹಾಗೂ ಸ್ವಂತ ಮನೆಯ ಉಪಯೋಗ ಹಾಗೂ ಅನಾನುಕೂಲಗಳನ್ನು ಹೊಂದಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *