ಈ ಲೇಖನದ ಮೂಲಕ ನಾವು ತನ್ನ ಕಾರ್ ಡ್ರೈವರ್ ಗೆ 12 ಲಕ್ಷ ರೂಪಾಯಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ಕೊಟ್ಟ ಕನ್ನಡದ ನಟಿ ಒಬ್ಬರ ಬಗ್ಗೆ ತಿಳಿದುಕೊಳ್ಳೋಣ. ದೊಡ್ಡ ದೊಡ್ಡ ಸ್ಟಾರ್ ನಟ ಹಾಗೂ ನಟಿಯರ ಮನೆಯಲ್ಲಿ ಅವರ ಮನೆ ಕೆಲಸಕ್ಕೆ ಅಂತಲೇ ಸಾಕಷ್ಟು ಕೆಲಸಗಾರರು ಇರುತ್ತಾರೆ ಹಾಗೂ ಕಾರು ಓಡಿಸುವುದರ ಸಲುವಾಗಿ ಕೂಡ ಜನರು ಇರುತ್ತಾರೆ. ಆದರೆ ಕೆಲವು ಸ್ಟಾರ್ ಗಳು ಮಾತ್ರ ತಮಗಾಗಿ ತಮ್ಮ ಮನೆಯಲ್ಲಿ ಕೆಲಸ ಮಾಡುವವರ ಸಲುವಾಗಿ ಗೌರವ ಕೊಡುತ್ತಾರೆ ಹಾಗೂ ಅವರನ್ನು ಸಂತೋಷವಾಗಿ ಇರಿಸುತ್ತಾರೆ. ಅದರಲ್ಲೂ ಕೆಲವೊಂದು ನಟ ನಟಿಯರು ತುಂಬಾ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸೌಂದರ್ಯ ಅವರು. ಸೌಂದರ್ಯ ಅವರು ತಮ್ಮ ಶೂಟಿಂಗ್ ಮುಗಿದ ತಕ್ಷಣ ಲೈಟ್ ಮ್ಯಾನ್ ಹಾಗೂ ಇತರರಿಗೆ ಹಣ ನೀಡುತ್ತಿದ್ದರಂತೆ. ಹಾಗೆ ಅದೇ ರೀತಿಯಾಗಿ ಇನ್ನೊಬ್ಬ ನಟಿ ಕೂಡ ಅವರು ತನ್ನ ಕಾರ್ ಡ್ರೈವರ್ ಗೆ 12 ಲಕ್ಷ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರಂತೆ. ಇವರ ಮೂಲ ಹೆಸರು ಸ್ವೀಟಿ ಶೆಟ್ಟಿ. ಇವರ ಹೆಸರಿನ ಹಾಗೆ ಇವರ ಹೃದಯ ಕೂಡಾ ತುಂಬಾ ಸ್ವೀಟ್. ತನ್ನ ಕಾರ್ ಡ್ರೈವರ್ಗೆ 12 ಲಕ್ಷ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ನಟಿ ಬೇರೆ ಯಾರು ಅಲ್ಲ ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ.

ಯಾವಾಗಲೂ ತನ್ನ ಸುತ್ತಮುತ್ತ ಇರುವ ಜನರನ್ನು ಅವರ ಕಷ್ಟಗಳನ್ನು ತನ್ನವರು ಹಾಗೂ ತನ್ನ ಕಷ್ಟ ಎಂದು ಭಾವಿಸುವ ನಟಿ ಅನುಷ್ಕಾ ಶೆಟ್ಟಿ ತನ್ನನ್ನು ಯಾವಾಗಲೂ ಪ್ರೀತಿಯಿಂದ ನೋಡಿಕೊಳ್ಳುವ ತನ್ನ ಕಾರ್ ಡ್ರೈವರ್ಗೆ 12 ಲಕ್ಷ ಬೆಲೆಬಾಳುವ ಹೊಸ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅನುಷ್ಕಾ ಶೆಟ್ಟಿ ಅವರ ಕಾರ್ ಡ್ರೈವರ್ ಅವರು ಕಷ್ಟಪಟ್ಟು ಮಾಡುವ ರೀತಿ ಹಾಗೂ ತನ್ನನ್ನು ನೋಡಿಕೊಳ್ಳುವ ರೀತಿ ಇಷ್ಟವಾಗಿದೆ ಹಾಗಾಗಿ ಈ ಕಾರಣಕ್ಕಾಗಿ ತಾನು 12 ಲಕ್ಷ ಬೆಲೆಬಾಳುವ ಕಾರನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದೇನೆ. ಇದರಿಂದ ನನಗೂ ಬಹಳ ಖುಷಿಯಾಗಿದೆ ಎಂದು ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ. ಒಬ್ಬ ಕಾರ್ ಡ್ರೈವರ್ ಆಗಿ ತನ್ನ ಬಗ್ಗೆ ಇಷ್ಟೊಂದು ಕಾಳಜಿ ಪ್ರೀತಿಯನ್ನು ತೋರಿಸಿದ ಅನುಷ್ಕಾ ಶೆಟ್ಟಿ ಅವರನ್ನು ಕಂಡು ಕಾರ್ ಡ್ರೈವರ್ ತುಂಬಾ ಸಂತೋಷವಾಗಿದ್ದಾರೆ. ತನ್ನ ಜೊತೆ ಕೆಲಸ ಮಾಡುವವರಿಗೆ ಸರಿಯಾಗಿ ಸಂಬಳವನ್ನು ನೀಡದೇ ಇರುವ ಜನ ಇರುವ ಈ ಕಾಲದಲ್ಲಿ ತನ್ನ ಕಾರ್ ಡ್ರೈವರ್ ಗೆ 12 ಲಕ್ಷ ಬೆಲೆಬಾಳುವ ಅಷ್ಟು ದುಬಾರಿ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ ಅವರ ಬಗ್ಗೆ ಅವರ ಅಭಿಮಾನಿಗಳಿಗೆ ಗೌರವ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಈ ಮೂಲಕ ತನ್ನ ಸಂತೋಷವನ್ನು ತನ್ನ ಜೊತೆಯಲ್ಲಿ ಇರುವವರೆಗೂ ಹಂಚಿ ಅವರ ಸಂತೋಷದಲ್ಲಿ ತಾವು ಸಂತೋಷ ಪಡುತ್ತಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

Leave a Reply

Your email address will not be published. Required fields are marked *