ಮನಕ್ಕೆ ನೆಮ್ಮದಿ ಬೇಕು ಅನಿಸಿದಾಗ ಮಕ್ಕಳೊಂದಿಗೆ ಬೆರೆತರೆ ಕ್ಷಣದಲ್ಲಿ ಗೊತ್ತೆ ಆಗದಂತೆ ನಾವು ಮಕ್ಕಳಾಗಿ ನಮ್ಮ ದುಗುಡ, ನೋವು, ಸಮಸ್ಯೆ, ಜಂಜಾಟಗಳನ್ನೆಲ್ಲ ಮರೆತುಬಿಡುತ್ತೆವೆ. ಮಕ್ಕಳೊಂದಿಗೆ ಅಡುವುದರಲ್ಲಿ ಸಮಯದ ಪರಿವೆಯು ತಿಳಿಯುವುದಿಲ್ಲ. ಹಾಗೆಯೇ ಇಲ್ಲಿ ಅನುಪ್ರಭಾಕರ್ ಮುಖರ್ಜಿಯವರು ಮಗಳಾದ ನಂದನಳ ಆಟ, ಪಾಠಗಳಲ್ಲಿ ಕಳೆದುಹೋಗಿದ್ದಾರೆ.
ರಘು ಮುಖರ್ಜಿ ಹಾಗೂ ಅನುಪ್ರಭಾಕರ್ ಮುಖರ್ಜಿಯ ಮಗಳಾದ ನಂದನ ತನ್ನ ತೊದಲು ನುಡಿಗಳಿಂದ ಮನೆಯವರ ಮುಖದಲ್ಲಿ ನಗು ಅರಳಿಸಿದ್ದಾಳೆ. ಮುಂದಿನ ಶನಿವಾರ ಏನು ಕೇಳಿದರೆ ಹ್ಯಾಪಿ ಟು ಯು ನಂದನ ಎಂದು ಕುಣಿಯುತ್ತ ತನ್ನ ಹುಟ್ಟಿದ ಹಬ್ಬಕ್ಕೆ ತನಗೆ ತಾನೆ ಶುಭ ಹಾರೈಸುತ್ತಾಳೆ.
ಹೆಸರು ಏನು ಕೇಳಲು ನಂದನ ಎಂದು ಮೂರು ನಾಲ್ಕು ಬಾರಿ ಒತ್ತಿ ಹೇಳುವ ನಂದನ. ಹೇಳುವ ರೀತಿಯಲ್ಲಿ ಎಲ್ಲರನ್ನೂ ನಗಿಸುತ್ತಾಳೆ. ಯುಗಾದಿಯಲ್ಲಿ ಬೇವು ಬೆಲ್ಲದ ತಟ್ಟೆಯನ್ನೆ ಹಿಡಿದು ಕುಳಿತ ನಂದನ ತಾನು ತಿನ್ನುತ್ತಾ ಮನೆಯವರಿಗೂ ತಿನ್ನಿಸುತ್ತಾಳೆ. ತಾಯಿ ಅನುಪ್ರಭಾಕರ್ ಮುಖರ್ಜಿ ಬೇವು ಬೆಲ್ಲ ಎಷ್ಟು ಸಲ ತಿಂದೆ ಎಂಬ ಪ್ರಶ್ನೆಗೆ ನಂದನಳಿಂದ ಬಂದ ಉತ್ತರ ಹ್ಯಾಪಿ ಹ್ಯಾಪಿ ಇಷ್ಟೆ. ಬೇವು ಬೆಲ್ಲ ಮತ್ತು ಬೇಕ ಎಂಬ ಪ್ರಶ್ನೆಗೆ ಮತ್ತು ಬೇಕು ಎಂದು ಬಾಯಿ ಚಪ್ಪರಿಸುತ್ತಾ ತಿನ್ನುತ್ತಿದ್ದ ನಂದನ ನೋಡಲು ಅಷ್ಟೇ ಮುದ್ದು. ಮಕ್ಕಳು ಏನು ಮಾಡಿದರು ಚೆಂದವೇ ಅಲ್ಲವೇ.