ತಮಿಳು ನಟ ಸೂರ್ಯ ಅವರು ಎರಡು ಬಾರಿ ಮದುವೆ ಯಾಕಾದರೂ, ಯಾರೊಂದಿಗೆ ಮದುವೆ ಆಯಿತು, ಅವರ ಸಿನಿ ಪ್ರಯಾಣದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ತಮಿಳಿನ ಟಾಪ್ ನಟ ಸೂರ್ಯ ಖ್ಯಾತ ನಟ ಶಿವಕುಮಾರ ಅವರ ಮಗ. ಶಿವಕುಮಾರ ಅವರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಅವರ ಬಳಿ ಯಾವಾಗಲೂ ಹಣವಿರುತ್ತಿರಲಿಲ್ಲ. ಅದಕ್ಕೆ ಕಾರಣ ಶಿವಕುಮಾರ ಅವರ ಅತಿಯಾದ ಒಳ್ಳೆತನ ನಿರ್ಮಾಪಕರಿಗೆ ಹಿಂಸೆ ಕೊಡದೆ ಅವರು ಕೊಟ್ಟಷ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದರು. ನಿರ್ಮಾಪಕರು ಕಷ್ಟದಲ್ಲಿದ್ದರೆ ಶಿವಕುಮಾರ ಅವರು ಫ್ರೀಯಾಗಿ ಸಿನಿಮಾ ಮಾಡುತ್ತಿದ್ದರು. ಅವರ ಮಗ ಸೂರ್ಯನಿಗೆ ನಟನೆ ಅಂದರೆ ಇಷ್ಟವಿರಲಿಲ್ಲ. ಆದರೆ ತಂದೆಗೆ ಮಗನನ್ನು ಹೀರೊ ಮಾಡಬೇಕೆಂಬ ಆಸೆ ಇತ್ತು. ಬಿಸಿನೆಸ್ ಮಾಡುತ್ತೇನೆಂದ ಸೂರ್ಯ ಇಮ್ ಪೋರ್ಟ್ ಎಕ್ಸಪೋರ್ಟ್ ಕಂಪನಿ ಶುರುಮಾಡಿ ದಿನಕ್ಕೆ 200 ಕಿ.ಮೀ ಸುತ್ತಾಡಿ 18 ಗಂಟೆಗಳು ಕೆಲಸ ಮಾಡಿ ಕಂಪನಿಯನ್ನು ಅಭಿವೃದ್ಧಿ ಮಾಡಲು ಬಹಳ ಶ್ರಮ ಪಟ್ಟರು ಆದರೆ ಅದರಲ್ಲಿ ಹಣ ಬರಲಿಲ್ಲ. ಆಗ ಮನೆಯವರ ಒತ್ತಾಯಕ್ಕೆ ಮಣಿದು ಸಿನಿಮಾ ಮಾಡಲು ಸೂರ್ಯ ಒಪ್ಪಿಕೊಂಡರು. ಮೊದಲ ಚಿತ್ರಕ್ಕೆ 50,000ರೂ ಸಂಭಾವನೆ ಪಡೆದು ನಟಿಸಿದರು. ನಂತರ ನಟಿ ಜ್ಯೋತಿಕಾ ಜೊತೆ ಸತತವಾಗಿ 3 ಸಿನಿಮಾಗಳಲ್ಲಿ ನಟಿಸಿದರು. ಇದರಿಂದ ಸೂರ್ಯ ಮತ್ತು ನಟಿ ಜ್ಯೋತಿಕಾಗೂ ಅಫೇರ್ ಇದೆ ಎಂದು ಗಾಸಿಪ್ ಹರಡಿಸಿದರು ಮೀಡಿಯಾದವರು. ಅಲ್ಲಿಯವರೆಗೂ ಜ್ಯೋತಿಕಾ ಅವರೊಂದಿಗೆ ನಟನೆಯ ಹೊರತುಪಡಿಸಿ ಬೇರೆ ಮಾತನಾಡದ ಸೂರ್ಯ ಅವರು ಗಾಸಿಪ್ ಬಗ್ಗೆ ಮಾತನಾಡಲು ಶುರುಮಾಡಿದರು.

ನಂತರದ ದಿನಗಳಲ್ಲಿ ಅವರಿಬ್ಬರ ನಡುವೆ ಲವ್ ಶುರುವಾಯಿತು. ಮನೆಯಲ್ಲಿ ತಂದೆ ಸ್ಟ್ರಿಕ್ಟ್ ಇದ್ದ ಕಾರಣ ಲವ್ ವಿಷಯ ಹೇಳಲು ಹೆದರಿದ ಸೂರ್ಯ ಒಂದು ದಿನ ಮನೆಯಲ್ಲಿ ತಿಳಿಸಿದಾಗ ಸುತಾರಾಂ ಒಪ್ಪಲಿಲ್ಲ. ತಂದೆಗೆ ಇವರ ಮದುವೆ ಇಷ್ಟವಿರಲಿಲ್ಲ ಆದರೆ ಜ್ಯೋತಿಕಾಗೆ ಕೊಟ್ಟ ಮಾತಿನಂತೆ ಸೂರ್ಯ ತಂದೆಯ ವಿರುದ್ಧ ರಹಸ್ಯವಾಗಿ ಜ್ಯೋತಿಕಾ ಅವರಿಗೆ ತಾಳಿ ಕಟ್ಟಿದರು. ಆಗ ವಿಧಿಯಿಲ್ಲದೆ ಅಧಿಕೃತವಾಗಿ ಮತ್ತೊಮ್ಮೆ ಮದುವೆ ಮಾಡಿದರು ಸೂರ್ಯ ಮನೆಯವರು. ಹೀಗೆ ಎರಡು ಬಾರಿ ಸೂರ್ಯ ಅವರು ಮದುವೆಯಾದರು ಎಂದು ಆಗಿನ ಮಾದ್ಯಮಗಳಲ್ಲಿ ಪ್ರಕಟವಾಗಿತ್ತು.

Leave a Reply

Your email address will not be published. Required fields are marked *