ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಗೊಂದಲವಿದೆ ಆ ಕುರಿತಾಗಿ ಅವರ ಕುಟುಂಬದವರು ಈಗಾಗಲೇ ಹಲವಾರು ಬಾರಿ ಮಾದ್ಯಮಗಳಲ್ಲಿ ಸಂದರ್ಶನಗಳಲ್ಲಿ ಆ ಕುರಿತಾಗಿ ಮಾತನಾಡಿದ್ದಾರೆ ಆದರೂ ಕೂಡ ನಾವು ನಿಮಗೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ಅಭಿಮಾನಿಗಳಿಗಾಗಿ ಮತ್ತೊಮ್ಮೆ ಆ ಕುರಿತು ಏನು ಹೇಳಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಮೂವತ್ತು ಡಿಸೆಂಬರ್ ಎರಡು ಸಾವಿರದ ಒಂಬತ್ತರಂದು ಡಾಕ್ಟರ್ ವಿಷ್ಣುವರ್ಧನ್ ಅವರು ಶಾರೀರಿಕವಾಗಿ ನಮ್ಮನ್ನೆಲ್ಲಾ ತೊರೆದು ಹೋಗಿದ್ದಾರೆ. ಆ ಸಮಯದಲ್ಲಿ ಮುಖ್ಯಮಂತ್ರಿಗಳಾಗಿದ್ದಂತಹ ಎಚ್ ಡಿ ಕುಮಾರಸ್ವಾಮಿಯವರು ಅನಿರುದ್ಧ ಅವರಿಗೆ ಕರೆಯನ್ನು ಮಾಡಿ ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವನ್ನು ಎಲ್ಲಿ ಮಾಡುತ್ತೀರೆಂದು ಪ್ರಶ್ನೆಯನ್ನು ಕೇಳುತ್ತಾರೆ.
ಆಗ ಅನಿರುದ್ಧ್ ಅವರು ಬೆಂಗಳೂರಿನ ಬನಶಂಕರಿಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ಮಾಡುವುದಾಗಿ ಹೇಳುತ್ತಾರೆ ಆಗ ಕುಮಾರಸ್ವಾಮಿಯವರು ವಿಷ್ಣುವರ್ಧನ್ ಅವರು ಒಬ್ಬ ದೊಡ್ಡ ವ್ಯಕ್ತಿ ಅವರಿಗೆ ಸಕಲ ಸರ್ಕಾರಿ ಗೌರವಗಳು ಸಲ್ಲಬೇಕು ಹಾಗಾಗಿ ತಾವು ಹೇಳುವ ಸ್ಥಳದಲ್ಲಿ ಅಂತ್ಯಸಂಸ್ಕಾರವನ್ನು ಮಾಡುವಂತೆ ಕೇಳಿಕೊಳ್ಳುತ್ತಾರೆ ನಂತರ ಅವರು ಹೇಳಿದ ಅಭಿಮಾನ್ ಸ್ಟುಡಿಯೋದಲ್ಲಿ ಯಾವುದೇ ರೀತಿಯ ಅಡಚಣೆ ಆಗದೆ ವಿಷ್ಣುವರ್ಧನ್ ಅವರಿಗೆ ಅಗ್ನಿ ಸಂಸ್ಕಾರ ನೆರವೇರಿತು.
ಅದರ ಮಾರನೆಯ ದಿನ ಕುಟುಂಬದವರಿಗೆ ತಿಳಿದಿದ್ದು ಆ ಜಾಗದ ಮೇಲಿನ ಕೇಸು ಕೋರ್ಟಿನಲ್ಲಿದೆ ಎಂದು. ನಂತರ ಇವರು ಕೂಡ ಕೋರ್ಟಿಗೆ ಹೋಗಿ ಅಲ್ಲಿ ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದಿರುವಂತಹ ಜಾಗದ ಎರಡು ಎಕರೆ ಜಾಗವನ್ನು ಬಿಟ್ಟುಕೊಡುವಂತೆ ಮತ್ತು ಅಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಟ್ಟುವುದಾಗಿ ಹೇಳುತ್ತಾರೆ ಅದಕ್ಕಾಗಿ ಸರ್ಕಾರ ಕೂಡ ಎರಡು ಕೋಟಿ ಹಣವನ್ನು ಅನುದಾನ ಮಾಡಿತ್ತು.
ಆದರೆ ಕೋರ್ಟ್ ಎರಡು ಎಕರೆ ಜಾಗವನ್ನು ಬೇರ್ಪಡಿಸುವುದಕ್ಕೆ ಒಪ್ಪಿಕೊಳ್ಳಲಿಲ್ಲ. ಆ ಸ್ಥಳದ ಮೇಲೆ ಕೇಸನ್ನು ಹಾಕಿರುವಂತಹ ಗೀತಾ ಬಾಲಿ ಅವರು ಕೇಸನ್ನು ಹಿಂಪಡೆದರೆ ಮಾತ್ರ ಹಾಗೆ ಬೇರ್ಪಡಿಸುವುದಕ್ಕೆ ಸಾಧ್ಯವಿತ್ತು ಆದರೆ ಗೀತಾ ಬಾಲಿ ಅವರು ಕೇಸನ್ನು ಹಿಂಪಡೆಯುವುದಕ್ಕೆ ಒಪ್ಪಿಕೊಳ್ಳಲಿಲ್ಲ. ಹಲವಾರು ಬಾರಿ ಅವರ ಮನವೊಲಿಸುವುದಕ್ಕೆ ಕುಟುಂಬದವರು ಪ್ರಯತ್ನಿಸುತ್ತಾರೆ ಅಂಬರೀಶ್ ಅವರು ಕೂಡ ಅವರನ್ನು ಮನೆಗೆ ಕರೆಸಿ ಮಾತನಾಡುತ್ತಾರೆ ಆದರೂ ಅವರ ಮನವೊಲಿಕೆ ಆಗುವುದಿಲ್ಲ ಸರ್ಕಾರದಿಂದಲೂ ಕೂಡ ಪ್ರಯತ್ನ ಮಾಡಲಾಗುತ್ತದೆ.
ಈ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರ ಡಾಕ್ಟರ್ ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್ ಅಂತ ನಿರ್ಮಾಣ ಮಾಡುತ್ತದೆ. ಆ ಸಮಯದಲ್ಲಿ ಆ ಟ್ರಸ್ಟಿನ ಅಧ್ಯಕ್ಷರು ಮಾನ್ಯ ಮುಖ್ಯಮಂತ್ರಿಗಳೇ ಆಗಿದ್ದರು. ಅದರಲ್ಲಿ ವೈಯಕ್ತಿಕ ಮಾಲಿಕತ್ವ ಇರುವುದಿಲ್ಲ ಎಲ್ಲ ಸರ್ಕಾರದ್ದೆ ಆಗಿರುತ್ತಿತ್ತು. ಕುಟುಂಬದ ಸದಸ್ಯರಿಗೆ ವಿಶೇಷವಾದ ಆದ್ಯತೆ ಇತ್ತು. ಸ್ಮಾರಕ ನಿರ್ಮಾಣಕ್ಕಾಗಿ ಈ ಪ್ರತಿಷ್ಠಾನಕ್ಕೆ ಸರ್ಕಾರ ಹನ್ನೊಂದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು.
ಒಬ್ಬರು ಪ್ರಿನ್ಸಿಪಲ್ ಸೆಕ್ರೆಟರಿ ಅವರು ವಿಷ್ಣುವರ್ಧನ್ ಅವರ ಕುಟುಂಬದವರಿಗೆ ಹೇಳುತ್ತಾರೆ ನಾವು ಆ ಜಾಗವನ್ನು ವಶಪಡಿಸಿಕೊಳ್ಳುತ್ತೇವೆ ಯಾಕೆಂದರೆ ಬಾಲಣ್ಣ ಅವರ ಕುಟುಂಬದವರು ಸರ್ಕಾರದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಹಾಗಾಗಿ ನಾವು ಇದನ್ನು ವಶಪಡಿಸಿಕೊಳ್ಳಬಹುದು ವಶಪಡಿಸಿಕೊಂಡು ಅದರಲ್ಲಿ ಎರಡು ಎಕರೆ ಜಾಗವನ್ನು ನಿಮಗೆ ಕೊಡುವುದಾಗಿ ಹೇಳುತ್ತಾರೆ ರಾತ್ರೋರಾತ್ರಿ ಅವರ ವರ್ಗಾವಣೆ ಕೂಡ ಆಗುತ್ತದೆ.
ಎಲ್ಲೋ ಒಂದು ಕಡೆ ಗೀತಾಬಾಲಿ ಅವರ ಮನಸ್ಸು ಬದಲಾಗುತ್ತಿದೆ ಎನ್ನುವ ಸಮಯದಲ್ಲಿ ಕೆಲವರು ಹೋಗಿ ಅವರ ಕಿವಿ ಉದಿದ್ದುಂಟು. ಸರ್ಕಾರದಿಂದಲೂ ಕೆಲವರು ಹೋಗಿ ಅಡಚಣೆ ಮಾಡಿದ್ದುಂಟು ಎಂದು ಅನಿರುದ್ಧ್ ಅವರು ಹೇಳುತ್ತಾರೆ. ಆಗ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಆಗುವುದಿಲ್ಲ ಎಂದು ತಿಳಿಯುತ್ತದೆ ಆರೂವರೆ ವರ್ಷದಲ್ಲಿ ವಿಷ್ಣುವರ್ಧನ್ ಅವರ ಕುಟುಂಬದವರು ಅನೇಕ ಬಾರಿ ಗೀತಾಬಾಲಿ ಅವರನ್ನು ಭೇಟಿ ಮಾಡುತ್ತಾರೆ ಬಾಲಣ್ಣ ಅವರ ಕುಟುಂಬದವರನ್ನು ಭೇಟಿ ಮಾಡುತ್ತಾರೆ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ ಆದರೆ ಯಾವುದೇ ಪ್ರಯೋಜನ ಆಗುವುದಿಲ್ಲ.
ಅಭಿಮಾನ್ ಸ್ಟುಡಿಯೋದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಜನ್ಮದಿನ ಮತ್ತು ಅವರ ಪುಣ್ಯ ಸ್ಮರಣೆಯ ದಿನ ಜನರಿಗೆ ಉಪಯೋಗವಾಗುವಂತಹ ಉಚಿತ ವೈದ್ಯಕೀಯ ತಪಾಸಣೆ ಪರಿಸರ ಸಂಬಂಧಿ ಚಟುವಟಿಕೆಗಳನ್ನು ನಡೆಸಲಾಗಿತ್ತು. ವಿಷ್ಣುವರ್ಧನ್ ಅವರ ಹೆಸರಿನಿಂದ ಹತ್ತಾರು ಜನಕ್ಕೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಅಲ್ಲಿ ಮಾಡಲಾಗಿತ್ತು. ಸರ್ಕಾರವೂ ಕೂಡ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗುವುದಿಲ್ಲ ನೀವು ಬೇರೆ ಸ್ಥಳವನ್ನು ನೋಡಿಕೊಳ್ಳಿ ಎಂದು ಹೇಳುತ್ತದೆ.
ಅದರ ಪಕ್ಕದಲ್ಲಿ ಇರುವ ಸ್ಥಳದಲ್ಲಿ ಸ್ಮಾರಕ ಮಾಡುವಂತೆ ಸೂಚನೆ ನೀಡುತ್ತದೆ ಅಲ್ಲೂ ಕೂಡ ಪ್ರಯತ್ನಿಸುತ್ತಾರೆ ಅಲ್ಲಿಯೂ ಕೂಡ ಸಮಸ್ಯೆ ಎದುರಾಗುತ್ತದೆ ಇದೇ ರೀತಿ ಅನೇಕ ಜಾಗಗಳನ್ನು ನೋಡಿದಾಗಲೆಲ್ಲ ಒಂದಲ್ಲ ಒಂದು ರೀತಿಯ ಸಮಸ್ಯೆ ಉಂಟಾಗುತ್ತಿತ್ತು. ಆ ಸಮವಯಲ್ಲಿ ಭಾರತಿ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಜಾಗವನ್ನು ಹುಡುಕೋಣ ಅಲ್ಲಿ ಈ ರೀತಿ ಅಡಚಣೆಗಳು ಉಂಟಾಗುವುದು ಕಡಿಮೆ ಎಂದು ಹೇಳುತ್ತಾರೆ ಮೈಸೂರಿನಲ್ಲಿಯೂ ಕೂಡ ಸ್ಥಳವನ್ನು ಹುಡುಕಾಟ ನಡೆಸುತ್ತಾರೆ ಅಲ್ಲಿ ಕೂಡ ಸಮಸ್ಯೆ ಉಂಟಾಗುತ್ತದೆ ಆದರೆ ಒಂದು ಸ್ಥಳದಲ್ಲಿ ಅಂತಿಮವಾಗಿ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಈಗಾಗಲೇ ಹೇಳಿರುವಂತೆ ಸರ್ಕಾರ ಬಿಡುಗಡೆ ಮಾಡಿರುವ ಹನ್ನೊಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಲ್ಲಿ ವಿಷ್ಣುವರ್ಧನ್ ಅವರ ಏಳುನೂರಕ್ಕೂ ಅಧಿಕ ಫೋಟೋಗಳ ಗ್ಯಾಲರಿಯನ್ನು ಪ್ರದರ್ಶನ ಮಾಡಲಾಗುತ್ತದೆ ಪುತ್ತಳಿಯನ್ನು ನಿರ್ಮಿಸಲಾಗುತ್ತದೆ ಈಗಾಗಲೇ ವಿಷ್ಣುವರ್ಧನ್ ಸಂಸ್ಕಾರ ನಡೆದ ವಿಭೂತಿಯನ್ನು ಕುಟುಂಬದವರು ಸಂಗ್ರಹಿಸಿಟ್ಟುಕೊಂಡಿದ್ದಾರೆ ಅದನ್ನು ಅಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ.
ಸುಮಾರು ಎರಡುನೂರಾ ನಲವತ್ತು ಜನರಿಗೆ ಅನುಕೂಲವಾಗುವ ಹಾಗೆ ಒಂದು ಸಭಾಂಗಣವನ್ನು ಮಾಡಲಾಗುತ್ತದೆ. ಚಿತ್ರೋತ್ಸವಗಳನ್ನ ಮಾಡುವುದಕ್ಕೆ ನಾಟಕಗಳನ್ನು ಮಾಡುವುದಕ್ಕೆ ಅವಕಾಶವಾಗುತ್ತದೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಶಿಬಿರಗಳನ್ನು ಮಾಡುವುದಕ್ಕೆ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಜನರಿಗೂ ಕೂಡ ಉಪಯೋಗವಾಗುವಂತಹ ಕೆಲವು ಕಾರ್ಯಗಳನ್ನು ಅಲ್ಲಿ ನಡೆಸಲಾಗುತ್ತದೆ. ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು ಮುಂದಿನ ವರ್ಷ ಸೆಪ್ಟೆಂಬರ್ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಮೂಲಕ ಅನಿರುದ್ಧ್ ಅವರು ಕೇಳಿಕೊಳ್ಳುವುದು ಏನೆಂದರೆ ವಿಷ್ಣುವರ್ಧನ್ ಅವರ ಸ್ಮಾರಕದ ನಿರ್ಮಾಣ ವಿಷಯದ ಕುರಿತಂತೆ ಕುಟುಂಬದವರು ತುಂಬಾ ಪ್ರಯತ್ನಿಸುತ್ತಿದ್ದಾರೆ ಅಭಿಮಾನಿಗಳಲ್ಲಿ ದ್ವೇಷ ಮೂಡಿಸುವ ಕಾರ್ಯವನ್ನು ಯಾರು ಮಾಡಬೇಡಿ ನಾವು ಅದಕ್ಕಾಗಿ ತುಂಬಾ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದ ಅವರು ಕೂಡ ಅದಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.
ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಕುಟುಂಬದವರು ಅನೇಕ ಪ್ರಯತ್ನಗಳನ್ನು ಪಟ್ಟಿದ್ದಾರೆ ಅನೇಕ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಅವರ ಕಾಲ ಚಪ್ಪಲಿಗಳನ್ನು ಸವೆಸಿದ್ದಾರೆ ಅವರ ಸತತ ಪ್ರಯತ್ನದಿಂದಾಗಿ ವಿಷ್ಣುವರ್ಧನ್ ಅವರ ಸ್ಮಾರಕ ಅಂತಿಮವಾಗಿ ಮೈಸೂರಿನಲ್ಲಿ ನಿರ್ಮಾಣಗೊಳ್ಳುತ್ತಿದೆ ಅದು ಯಶಸ್ವಿಯಾಗಲಿ ವಿಷ್ಣುವರ್ಧನ್ ಅವರ ಸ್ಮಾರಕ ನೋಡುವ ಭಾಗ್ಯ ಅವರ ಅಭಿಮಾನಿಗಳಿಗೆ ಸಿಗಲಿ ಎಂದು ನಾವು ಬೇಡಿಕೊಳ್ಳೋಣ. video Credit For third Eye