ಆ ಎರಡು ಗ್ರಾಮಗಳು ಗುಡ್ಡಗಾಡು ಪ್ರದೇಶದಲ್ಲಿ ಇರುವಂತವು ಆದ್ರೆ ಆ ಗ್ರಾಮಕ್ಕೆ ಸರಿ ಸುಮಾರು 1947 ರಲ್ಲಿ ಸ್ಥಳೀಯ ಸರ್ಕಾರಕ್ಕೆ ರಸ್ತೆ ನಿರ್ಮಿಸುವ ಕುರಿತು ಕೇಳಿಕೊಳ್ಳಲಾಯಿತು ಆದ್ರೂ ಕೂಡ ಪ್ರಯೋಜನವಿಲ್ಲ. ಆದ್ರೆ ಇದೀಗ ಈ ೨ ಗ್ರಾಮದ ಜನರು ಮನೆಗೆ ೨ ಸಾವಿರ ರೂಗಳಂತೆ ಸುಮಾರು ೨೦ ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ.

ಈ ಹಣದಿಂದ ತಮ್ಮ ಊರಿನ ರಸ್ತೆಯನ್ನು ಸ್ವತಃ ತಾವೇ ನಿರ್ಮಿಸಿಕೊಳ್ಳುತ್ತಿದಾರೆ, ಅಷ್ಟಕ್ಕೂ ಈ ಗ್ರಾಮ ಯಾವುದು ಹಾಗು ಇವರಿಗೆ ನಟ ಸೋನು ಸೂದ್ ಹೇಗೆ ಪ್ರೇರಣೆ ನೀಡಿದ್ರು ಅನ್ನೋದನ್ನ ಮುಂದೆ ನೋಡಿ. ಅಂದ್ರ ಗ್ರಾಮಗಳಿವು“ಇಂದಿನವರೆಗೂ, ಸಲೂರ್ ಮಂಡಲದ ಚಿಂತಾಮಲಾ ಮತ್ತು ಕೊಡಮಾ ಗ್ರಾಮಗಳಲ್ಲಿ ಸುಮಾರು 250 ಕುಟುಂಬಗಳಿಗೆ ಏಕೈಕ ಸಾರಿಗೆ ವಿಧಾನವೆಂದರೆ ಡೋಲಿ ಹೌದು ಇಲ್ಲಿ ಯಾವುದೇ ರಸ್ತೆ ಇಲ್ಲದಿರುವ ಕಾರಣ ಇಲ್ಲಿನ ಜನರು ಡೋಲಿಯನ್ನು ಬಳಸುತ್ತಿದ್ದರು ಡೋಲಿ ಅಂದ್ರೆ ಒಂದು ದಪ್ಪನೆಯ ಕಟ್ಟಿಗೆ ಅದನ್ನು ಬಳಸಿ ಗರ್ಭಿಣಿಯರು ಹಾಗು ಅನಾರೋಗ್ಯ ಪೀಡಿತರಿಗೆ ಅದರ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದರು. ಮಿಕ್ಕಿದವರು ಆಗೇ ಬೆಟ್ಟ ಗುಡ್ಡಗಾಡುಗಳಲ್ಲಿ ನಡೆದುಕೊಂಡು ಹೋಗುತ್ತಿದ್ದರು ಇಲ್ಲಿ ರಸ್ತೆ ಇಲ್ಲದ ಕಾರಣ ಯಾವುದೇ ವಾಹನಗಳು ಕೂಡ
ಸಂಚರಿಸಲು ಆಗುತ್ತಿರಲಿಲ್ಲ.

ಆದ್ರೆ ನಟ ಸೋನು ಸೂದ್ ಈಗಾಗಲೇ ದೇಶದಲ್ಲಿ ಹಲವಾರು ರೀತಿಯ ಸಂಕಷ್ಟದಲ್ಲಿ ಸಿಲುಕಿರುವಂತ ಜನರಿಗೆ ಸಹಾಯ ಮಾಡುತ್ತಿದ್ದು ತಮ್ಮ ಕಾರ್ಯ ವೈಖರಿ ಹಾಗು ಸಮಾಜ ಸೇವೆಯಿಂದ ದೇಶದ ಜನರ ಮನೆಮಾತಾಗಿದ್ದಾರೆ. ಈಗಿರುವಾಗ ನಟ ಸೋನು ಸೂದ್ ಅವರು ನಮಗೆ ಪ್ರೇರಣೆ ಆಗಿದ್ದು ಅವರು ಮಾಡುವಂತ ಸಾಮಾಜಿಕ ಕಾರ್ಯಗಳು ನಮಗೆ ಪ್ರೇರಣೆ ನೀಡಿದವು ಆದ್ದರಿಂದ ನಾವು ನಮ್ಮ ದುಡ್ಡಿನಲ್ಲೆಯೇ ಸತಃ ನಮ್ಮೋರಿಗೆ ರಸ್ತೆ ನಿರ್ಮಿಸಿಕೊಳ್ಳಲು ಪೂರಕವಾಯಿತು ಎಂಬುದಾಗಿ ಟ್ವಿಟ್ಟರ್ ನಲ್ಲಿ ಒಬ್ಬ ವ್ಯಕ್ತಿ ಪೋಸ್ಟ್ ಹಾಕಿದ್ದರು ಅದಕ್ಕೆ ರೀ ಟ್ವಿಟ್ ಮಾಡಿರುವ ಸೋನು ಸೋದು ಖಂಡಿತ ನಿಮ್ಮ ಗ್ರಾಮಕ್ಕೆ ಭೇಟಿ ನೀಡುವೆ ನೀವು ರಾಷ್ಟಕ್ಕೇ ಸ್ಪೂರ್ತಿ ನೀಡುತ್ತಿರಿ ಎಂಬುದಾಗಿ ನಟ ಸೋನು ಸೂದ್ ತಿಳಿಸಿದ್ದಾರೆ.

By

Leave a Reply

Your email address will not be published. Required fields are marked *