ಸಾಮಾನ್ಯವಾಗಿ ರೈತರು ತಮ್ಮ ಹೊಲದ ಜಮೀನಿನ ಕೆಲಸದ ನಿಮಿತ್ತ ಹಲವಾರು ಸರ್ಕಾರೀ ಕಚೇರಿಗಳನ್ನು ಅಲೆದಾಡುತ್ತಾರೆ ಅದರಲ್ಲೂ ಬಹುತೇಕ ರೈತರು ತಮಗೆ ಹೊಲದ ಪಹಣಿಯನ್ನು ಪಡೆಯಲು ೨ ರಿಂದ ೩ ದಿನಗಳ ಕಾಲ ಅಥವಾ ಇಡೀ ದಿನ ಪಹಣಿ ಪಡೆಯಲು ಸರ್ಕಾರೀ ಕಚೇರಿಯಲ್ಲೇ ಕಾಲ ಕಳೆಯಬೇಕಾಗುತ್ತದೆ. ಆದ್ರೆ ಇದಿಗ ನೀವು ಆನ್ಲೈನ್ ನಲ್ಲೆ ಹೊಲದ ಪಹಣಿಯನ್ನು ಸುಲಭವಾಗಿ ಪಡೆಯಬಹುದು.

ಹೌದು ನಾವು ನಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಎಲ್ಲಿ ಆದರೂ ಯಾವಾಗ ಬೇಕಾದರೂ ನಮ್ಮ ಜಮೀನಿನ ಪಹಣಿಯನ್ನು ಹೇಗೆ ತೆಗೆಯಬಹುದು ಎನ್ನುವುದರ ಕುರಿತು ಮಾಹಿತಿ ಈ ಲೇಖನದಲ್ಲಿ ಇದೆ.

ಇದೊಂದು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಅಪ್ಲಿಕೇಶನ್ ಆಗಿದೆ. ಯಾವುದೇ ಬ್ರೌಸರ್ ನಲ್ಲಿ ಹೋಗಿ ಭೂಮಿ ಎಂದು ಟೈಪ್ ಮಾಡಿ ಅದರ ಹೋಮ್ ಪೇಜ್ ನಲ್ಲಿ ಮೊದಲು ಸಿಗುವ ಲ್ಯಾಂಡ್ ರೆಕಾರ್ಡ್ಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಬರುವ ಪೇಜ್ ನಲ್ಲಿ ವಿವ್ RTC and MR ಮೇಲೆ ಕ್ಲಿಕ್ ಮಾಡಬೇಕು. ನಂತರ ಬರುವ ಪೇಜ್ ನಲ್ಲಿ ಕೇಳುವ ದಾಖಲೆಗಳು, ಜಿಲ್ಲೆ, ತಾಲೂಕ್, ಹೋಬಳಿ, ಗ್ರಾಮ, ಸರ್ವೇ ನಂಬರ್ ಹೀಗೆ ಎಲ್ಲವನ್ನೂ ತುಂಬಿ ನಂತರ ಕಾಣುವ ಫಿಚ್ ಡೀಟೇಲ್ಸ್ ಅನ್ನುವಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಬೇಕಾದ ಡೀಟೈಲ್ಸ್ ಕಾಣಿಸುತ್ತವೆ. ಹಾಗೆ ವೀವ್ ಅಂತ ಇದ್ದಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಪಹಣಿಯ ಲಿಸ್ಟ್ ದೊರೆಯುತ್ತದೆ ಅದನ್ನು ಬೇಕಿದ್ದರೆ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಕೂಡಾ ತೆಗೆದುಕೊಳ್ಳಬಹುದು.

ಈ ರೀತಿಯಾಗಿ ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ನಾವು ನಮ್ಮ ಜಮೀನಿನ ಪಹಣಿಯನ್ನು ನೋಡಿಕೊಳ್ಳಬಹುದು.

By

Leave a Reply

Your email address will not be published. Required fields are marked *