30 ವರ್ಷದಿಂದ ಸುರಂಗ ಕೊರೆಯುತ್ತಿರುವ ವೃದ್ಧ, ಈತನ ನಿಸ್ವಾರ್ಥ ಸೇವೆ ಮೆಚ್ಚಿ ಟ್ಯಾಕ್ಟರ್ ಗಿಫ್ಟ್

0 0

70 ವರ್ಷದ ವೃದ್ಧ 30 ವರ್ಷಗಳಿಂದ ಸುರಂಗ ಕೊರೆದು ಹೊಲಕ್ಕೆ ನೀರು ಹರಿಸಿದ ಕಥೆ ಈ ಲೇಖನದ ಮೂಲಕ ತಿಳಿಯೋಣ.

ಬಿಹಾರದ ಗಯಾ ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ಕೋಟಿಲವಾ ಗ್ರಾಮ ದಟ್ಟ ಅರಣ್ಯ ಹಾಗೂ ಬೆಟ್ಟಗಳಿಂದ ಆವರಿಸಿದೆ. ಇದು ಮಾವೋವಾದಿಗಳ ಆಶ್ರಯ ತಾಣವಾಗಿದೆ. ಇವರ ಮುಖ್ಯ ಜೀವನೋಪಾಯ ಕೃಷಿ ಹಾಗೂ ಜಾನುವಾರು ಸಾಕಾಣಿಕೆ. ಮಳೆಗಾಲದಲ್ಲಿ ಬೆಟ್ಟಗಳಿಂದ ಹರಿಯುವ ಮಳೆ ನೀರು ನದಿಗೆ ಸೇರುತ್ತದೆ. ಈ ನೀರನ್ನು ತನ್ನ ಹೊಲಕ್ಕೆ ಹರಿಸಲು ಸುರಂಗ ಕೊರೆಯಲು 70 ವರ್ಷದ ಲೋಂಗಿ ಭುಇಯಾ ನಿರ್ಧರಿಸಿದ್ದರು. ಅದರಂತೆ ಅವರು 30 ವರ್ಷಗಳ ಕಾಲ ಏಕಾಂಗಿಯಾಗಿ ಸುರಂಗ ಕೊರೆಯುತ್ತಿದ್ದರು. ಅವರು ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಕರೆದೊಯ್ಯುತ್ತಿದ್ದರು ಆಗ ಸುರಂಗವನ್ನು ಕೊರೆಯುತ್ತಿದ್ದರು. ಈ ಸುರಂಗ 3 ಕಿ.ಮೀ ಉದ್ದವಿದೆ.

ಈ ಸುರಂಗದಿಂದ ಅಲ್ಲಿನ ಜಾನುವಾರುಗಳಿಗೆ ನೆರವಾಗಿದೆ. ಅಲ್ಲದೇ ಹೊಲಗಳಿಗೆ ನೀರುಣಿಸಲು ಸಾಧ್ಯವಾಯಿತು. ಅವರು ತೋಡಿದ ಸುರಂಗ ಅವರಿಗಷ್ಟೇ ಅಲ್ಲದೆ ಆ ಪ್ರದೇಶದ ಜನರಿಗೆ, ಜಾನುವಾರುಗಳಿಗೆ ಸಹಾಯವಾಯಿತು ಇದಕ್ಕೆ ಕಾರಣವಾದ ಭುಇಯಾ ಎಂದು ಅವರು ಗುರುತಿಸಿದ್ದಾರೆ. ಅಲ್ಲಿಯ ಜನರು ಜೀವನೋಪಾಯಕ್ಕಾಗಿ ನಗರಕ್ಕೆ ತೆರಳುತ್ತಿದ್ದಾರೆ ಆದರೆ ಭುಇಯಾ ಅವರು ಇದ್ದಲ್ಲಿಯೇ ಈ ವಯಸ್ಸಿನಲ್ಲಿ ಸುರಂಗ ಕೊರೆದಿರುವುದು ಶ್ಲಾಘನೀಯ. ಅಷ್ಟೇ ಅಲ್ಲದೆ ಯಾವುದೇ ಸ್ವಾರ್ಥ ಇಲ್ಲದೆ ಊರಿನ ಒಳಿತಿಗಾಗಿ ಮಾಡಿದ ಕೆಲಸಕ್ಕೆ ಮೆಚ್ಚಿ ಮಹೇಂದ್ರ ಕಂಪನಿ ಈತನಿಗೆ ಕೃಷಿಗೆ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಟ್ಯಾಕ್ಟರ್ ಅನ್ನು ಉಡುಗೊರೆಯಾಗಿ ಕೊಟ್ಟಿದೆ.

Leave A Reply

Your email address will not be published.