ವಾಹನ ಅಪಘಾತದಲ್ಲಿ ಸಮನ್ವಿ ಸಾವನ್ನಪ್ಪಿರುವುದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಆರು ವರ್ಷದ ಪುಟ್ಟ ಕಂದಮ್ಮನ ಸಾವಿನಿಂದ ವಿಧಿಯ ಆಟಕ್ಕೆ ಬೇಸರವಾಗುತ್ತದೆ. ಸಮನ್ವಿ ತಾಯಿ ಅಮೃತಾ ಹಾಗೂ ತಂದೆ ರೂಪೇಶ್ ತಮ್ಮ ಮುಂದೆ ಮಗಳ ಸಾವು ನೋಡಿ ದುಃಖಿತರಾದರು. ಸಮನ್ವಿ ಸಾವು ಹಾಗೂ ವಾಹನ ಅಪಘಾತದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಮೊನ್ನೆ ನಡೆದಿರುವ ವಾಹನ ಅಪಘಾತದಲ್ಲಿ 6 ವರ್ಷದ ಸಮನ್ವಿ ಸಾವನ್ನಪ್ಪಿರುವುದರ ಬಗ್ಗೆ ಹೇಳಲು ಮನಸ್ಸಿಗೆ ಬಹಳ ನೋವಾಗುತ್ತದೆ. 6 ವರ್ಷದ ಪುಟ್ಟ ನಕ್ಷತ್ರವಾಗಿದ್ದ ಬದುಕಿ ಬಾಳಬೇಕಿದ್ದ ಮಗು ಸಮನ್ವಿ ಈ ಪ್ರಪಂಚವನ್ನು ಬಿಟ್ಟು ಹೋಗಿದ್ದಾಳೆ. ಈ ಘಟನೆ 3 ದಿನಗಳ ಹಿಂದೆ ಸಂಭವಿಸಿದೆ. ನನ್ನಮ್ಮ ಸೂಪರ್ ಸ್ಟಾರ್ ವೀಕ್ಷಕರಿಗೆ ಮತ್ತು ಆಕೆಯ ಅಭಿಮಾನಿಗಳಿಗೆ ಬಹಳ ನೋವನ್ನು ತಂದಿದೆ. ಸಮನ್ವಿ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಎಲ್ಲರ ಮೆಚ್ಚಿನ ಸ್ಪರ್ಧಿಯಾಗಿದ್ದಳು. ಸಮನ್ವಿ ತಾಯಿ ಅಮೃತಾ ನಾಯ್ಡು ತಂದೆ ರೂಪೇಶ್. ಅಮೃತಾ ಅವರು ಮಗಳು ಸಮನ್ವಿ ಜೊತೆ ಶಾಪಿಂಗ್ ಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿ ಬಳಿ ಈ ದುರ್ಘಟನೆ ನಡೆದಿದೆ. ಅಮ್ಮ ಮಗಳು ಇಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಒಂದು ಟಿಪ್ಪರ್ ಲಾರಿ ಬಂದು ಡಿಕ್ಕಿ ಹೊಡೆದಿದೆ.

ಸ್ಥಳದಲ್ಲೆ ಸಮನ್ವಿ ಇಹಲೋಕ ತ್ಯಜಿಸಿದಳು. 4 ತಿಂಗಳ ಗರ್ಭಿಣಿ ಆಗಿರುವ ಅಮೃತಾ ಅವರ ಪರಿಸ್ಥಿತಿ ಬಗ್ಗೆ ಮಾತುಗಳಲ್ಲಿ ಹೇಳಲಾಗುವುದಿಲ್ಲ. ಹೊತ್ತು ಹೆತ್ತು ಬೆಳೆಸಿದ ಪುಟ್ಟ ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ತಾಯಿ ಹೃದಯ ಬಹಳ ಸಂಕಟ ಪಟ್ಟಿರುತ್ತದೆ. ಮಗಳ ಮುಂದೆ ಕುಳಿತು ಅಮೃತಾ ಅವರು ಬಿಕ್ಕಿ ಬಿಕ್ಕಿ ಅಳುತ್ತಾ ಮಾತನಾಡಿದ್ದು ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುವಂತೆ ಆಗಿತ್ತು. ಅಮೃತಾ ಅವರ ಪತಿ ರೂಪೇಶ್ ಮಗಳನ್ನು ನೆನೆದು ಕಣ್ಣೀರು ಹಾಕಿದರು. ತಂದೆ ತಾಯಿ ಇಬ್ಬರಿಗೂ ಸಮನ್ವಿ ತಾನೆ ಅಮ್ಮ ಆಗಿದ್ದಳು. ಮಗಳು ಸಾವನ್ನಪ್ಪಿ 3 ದಿನಗಳ ನಂತರ ಅಮೃತಾ ಅವರು ತಮ್ಮ ಅಭಿಮಾನಿಗಳಲ್ಲಿ ಒಂದು ಬೇಡಿಕೆ ಇಟ್ಟಿದ್ದಾರೆ.

ಅಮೃತಾ ರೂಪೇಶ್ ಅವರು ತಮ್ಮ ಬೇಡಿಕೆಯಲ್ಲಿ ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ಒಂದು ಪ್ರಾರ್ಥನೆ, ನಾನು ಈಗ 4 ತಿಂಗಳ ಗರ್ಭಿಣಿ ಮತ್ತೆ ನನ್ನ ಮುದ್ದು ಕಂದ ಅಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ ನಿಮ್ಮೆಲ್ಲರ ಪ್ರಾರ್ಥನೆಯ ಒತ್ತಾಯದಿಂದಾದರೂ ನನ್ನ ಮುದ್ದು ಕಂದಮ್ಮನನ್ನು ಮರಳಿ ಆ ಭಗವಂತ ಕಳುಹಿಸಿಬಿಡಲಿ ಅವಳನ್ನು ಮತ್ತೆ ನಾನು ನನ್ನ ಗರ್ಭದಲ್ಲಿ  ಜೋಪಾನ ಮಾಡಿ ಕಾಪಾಡಿಕೊಳ್ಳುತ್ತೇನೆ.

ದಯಮಾಡಿ ಈ ತಾಯಿ ಕರೆಗೆ ಕೈಜೋಡಿಸಿ ನನ್ನ ಸಮನ್ವಿಯ ಪುನಃ ಬರುವಿಕೆಗೆ ಸಹಾಯ ಮಾಡಿ ಪ್ರಾರ್ಥಿಸಿ. ಅವಳೆ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ದಯವಿಟ್ಟು ನನಗೆ ಸಹಾಯ ಮಾಡಿ ಆಗಷ್ಟೆ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ತಮ್ಮ ಇನ್ಸಟಾಗ್ರಾಮ್ ಸ್ಟೋರಿಯಲ್ಲಿ ಬರೆದು ತಾಯಿ ಹೃದಯದ ದುಃಖವನ್ನು ಹಂಚಿಕೊಂಡಿದ್ದಾರೆ. ಸಮನ್ವಿ ಅಪ್ಪನ ಜೊತೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು, ವಿಡಿಯೋ ನೋಡಿದರೆ ದುಃಖವಾಗುತ್ತದೆ. ಕಲಾ ಕುಟುಂಬದಿಂದ ಬಂದ ಅಮೃತಾ ಅವರ ಕುಟುಂಬಕ್ಕೆ ಸಮನ್ವಿ ಸಾವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ.

Leave a Reply

Your email address will not be published. Required fields are marked *