ಜೀವನ ಅನ್ನುವುದು ನಾವು ಅಂದುಕೊಂಡ ಹಾಗೇ ಯಾವುದೂ ಕೂಡಾ ನಮ್ಮ ಜೀವನದಲ್ಲಿ ನಡೆಯುವುದಿಲ್ಲ. ನಮ್ಮ ಜೀವನದಲ್ಲಿ ವಿಧಿ ಆಡಿಸಿದಂತೆ ಆಡುವ ಗೊಂಬೆಗಳು ನಾವು. ಜೀವನದಲ್ಲಿ ಸುಂದರವಾದ ಕನಸುಗಳನ್ನು ಕಂಡು ಮದುವೆ ಆಗಿ ಅಮೆರಿಕಾಗೆ ಹೋದ ನಟಿಯೊಬ್ಬರ ಜೀವನದಲ್ಲಿ ಆಗಿದ್ದಾದರೂ ಏನೂ? ಈ ನಟಿ ಯಾರೂ ಅವರ ಈಗಿನ ಪರಿಸ್ಥಿತಿ ಹೇಗಿದೆ ಏನೂ ಅನ್ನೋದನ್ನ ನೋಡೋಣ.

ಈ ನಟಿ ಬೇರೆ ಯಾರೂ ಅಲ್ಲ ಒಂದು ಕಾಲದಲ್ಲಿ ಕನ್ನಡ ಚಿತ್ರ ರಂಗದಲ್ಲಿ ತಮ್ಮ ನಟನೆಯ ಮೂಲಕ ಹೊಸದೊಂದು ಛಾಪು ಮೂಡಿಸಿದ ನಟಿ ಅಂಬಿಕಾ. ಒಂದು ಕಾಲದಲ್ಲಿ ಕನ್ನಡಿಗರ ಕನಸಿನ ರಾಣಿ ಆಗಿ ಮೆರೆದವರು. ಕನ್ನಡದ ಎಲ್ಲಾ ಖ್ಯಾತ ನಟರ ಜೊತೆಗೆ ನಟಿಸಿದ್ದ ನಟಿ ಅಂಬಿಕಾ ಕನ್ನಡದ ಒಬ್ಬ ಟಾಪ್ ನಟಿಯಾಗಿ ಮಿಂಚಿದ್ದರು. ಆದರೆ ಇವರ ಗಂಡ ಹಾಗೂ ಮಕ್ಕಳ ಬಗ್ಗೆ ಎಲ್ಲಿಯೂ ಕೂಡಾ ಮಾಹಿತಿ ಸಿಗುವುದಿಲ್ಲ. ಹಾಗಿದ್ದರೆ ಅಂಬಿಕಾ ಅವರು ವಿವಾಹ ಆಗಿಲ್ಲವಾ? ಎನ್ನುವ ಪ್ರಶ್ನೆ ಕೆಲವರಿಗೆ ಕಾಡುತ್ತದೆ. 1962 ರಲ್ಲಿ ಜನಿಸಿದ ಅಂಬಿಕಾ ಅವರು ಟೀನೇಜ್ ನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು ಹಾಗೂ ಅಷ್ಟೇ ಅಲ್ಲದೆ ಬಹಳ ಬೇಗ ಬಾರಿ ಬೇಡಿಕೆಯ ನಟಿ ಕೂಡಾ ಆದರು. 1998 ರಲ್ಲಿ ಅಂದರೆ ತಮ್ಮ ಇಪ್ಪತ್ತೈದನೆ ವಯಸ್ಸಿನಲ್ಲಿಯೇ ಸೇನುಜಾನ್ ಎನ್ನುವ ಎನ್ನಾರೈ ವ್ಯಕ್ತಿಯ ಜೊತೆ ವಿವಾಹ ಆದ ನಟಿ ಅಂಬಿಕಾ ಅವರು ಸುಂದರ ಸಾಂಸಾರಿಕ ಜೀವನದ ಕನಸನ್ನು ಕಂಡು ಅಮೆರಿಕಾದಲ್ಲಿ ತಮ್ಮ ಗಂಡನ ಜೊತೆ ನೆಲೆಸಿದರು.

ಕಾಲ ಕಳೆದಂತೆ ಅಂಬಿಕಾ ಅವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು ಜನಿಸಿದರು. ಆದರೆ ನಂತರದ ದಿನಗಳಲ್ಲಿ ಅಂಬಿಕಾ ಅವರಿಗೆ ಗಂಡನ ಜೊತೆಗೆ ಹೊಂದಾಣಿಕೆ ಆಗದ ಕಾರಣ ಗಂಡನಿಗೆ ಡೈವೋರ್ಸ್ ನೀಡಿ, ತನ್ನ ಮಕ್ಕಳನ್ನು ಕೂಡಾ ಗಂಡನ ಜೊತೆಗೆ ಬಿಟ್ಟು ಅಮೆರಿಕ ಬಿಟ್ಟು ಅಲ್ಲಿಂದ ಮತ್ತೆ ಭಾರತಕ್ಕೆ ಬಂದರು. ಆಗ ಮಕ್ಕಳು ಕೆಲವು ವರ್ಷಗಳ ಕಾಲ ತಂದೆಯ ಜೊತೆಗೆ ಅಮೆರಿಕಾದಲ್ಲಿ ವಾಸ ಮಾಡಿ ನಂತರ ಅಂಬಿಕಾ ಅವರ ಜೊತೆ ನೆಲೆಸಿದರು. ಕಾಲ ಉರುಳಿದಂತೆ 2000 ದ ಇಸವಿಯಲ್ಲಿ ಅಂಬಿಕಾ ಅವರು ನಟ ರವಿಕಾಂತ್ ಅವರನ್ನುನು ಪ್ರೀತಿಸಿ ಎರಡನೇ ವಿವಾಹ ಆದರು. ಆದರೆ ಇವರ ಸಂಬಂಧ ಕೂಡಾ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ ಎರಡೇ ಎರಡು ವರ್ಷ ಅಂದರೆ 2002 ರಲ್ಲೀ ರವಿಕಾಂತ್ ಅವರಿಂದಲೂ ವಿಚ್ಛೇದನ ಪಡೆದು ಒಬ್ಬಂಟಿ ಜೀವನವನ್ನು ನಡೆಸಲು ಆರಂಭಿಸಿದರು. ಮತ್ತೆ ಸಿನಿಮಾಗಳಲ್ಲಿ ಕೂಡಾ ನಟಿಸಲು ಆರಂಭಿಸಿದ ಅಂಬಿಕಾ ಅವರು ಹಲವು ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿಯೂ ಸಹ ಭಾಗವಹಿಸಿದ್ದರು. ಈಗ ಅಂಬಿಕಾ ಅವರು ತಮ್ಮ ದೊಡ್ಡ ಮಗ ರಾಮ್ ಕಿಶೋರ್ ಅವರನ್ನು ಹೀರೋ ಮಾಡಲು ಹೊರಟಿದ್ದು ನಟನೆಯ ಪಾಠವನ್ನು ಹೇಳಿಕೊಡುತ್ತ ಇದ್ದಾರೆ. ಏನೇ ಆದರೂ ಸಹ ಸಾಂಸಾರಿಕ ಜೀವನದಲ್ಲಿ ಅಷ್ಟೊಂದು ಯಶಸ್ಸು ಕಾಣದ ಅಂಬಿಕಾ ಅವರಿಗೆ ಅವರ ಮಕ್ಕಳ ಯಶಸ್ಸು ಸಂತೋಷವನ್ನು ತಂದುಕೊಡಲಿ ಎಂದು ಆಶಿಸೋಣ.

By

Leave a Reply

Your email address will not be published. Required fields are marked *