Ultimate magazine theme for WordPress.

ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಲಾಗಿದೆಯೇ ಅನ್ನೋದನ್ನ ತಿಳಿಯಿರಿ

0 2

ಕರ್ನಾಟಕದಾದ್ಯಂತ ಈಗಾಗಲೇ ಎಲ್ಲಾ ರೈತರ ಜಮೀನಿನಲ್ಲಿ ಬರ ಪೀಡಿತ ಜಿಲ್ಲೆಗಳಲ್ಲಿ ಎಲ್ಲಾ ರೈತರ ಜಮೀನಿನ GPS ಹಾಗೂ ಬೆಳೆಗಳ ಸಮೀಕ್ಷೆಯನ್ನು ಮಾಡಲಾಗಿದೆ ಇನ್ನು ಕೂಡ ಕೆಲವು ಜಿಲ್ಲೆಗಳಲ್ಲಿ ಜಿಪಿಎಸ್ ಹಾಗೂ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿಲ್ಲ. ಈಗಾಗಲೇ ನಿಮ್ಮ ಜಮೀನಿನ ಜಿಪಿಎಸ್ ಸಮೀಕ್ಷೆ ಮಾಡಿದ್ದರೆ ಅದನ್ನು ನಮ್ಮ ಮೊಬೈಲ್ ನಲ್ಲಿ ಹೇಗೆ ನಾವು ಚೆಕ್ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಒಂದು ವೇಳೆ ನಿಮ್ಮ ಜಮೀನಿನ ಜಿಪಿಎಸ್ ಹಾಗೂ ಬೆಳೆಯ ಸಮೀಕ್ಷೆ ಈಗಾಗಲೇ ಮಾಡಲಾಗಿದ್ದು ಜಿಪಿಎಸ್ ನಲ್ಲಿ ಫೋಟೋದಲ್ಲಿ ಬೆಳೆಯ ಹೆಸರು ನೀಡದೆ ಇದ್ದರೆ ನಿಮಗೆ ಬೆಳೆಯ ಪರಿಹಾರ ಸಹಾಯಧನ ಸಿಗುವುದಿಲ್ಲ. ಸರ್ಕಾರದ ಒಂದು ಮೊಬೈಲ್ ಆಪಿನ ಮೂಲಕ ನಾವು ನಮ್ಮ ಮೊಬೈಲ್ ನಲ್ಲಿ ನಮ್ಮ ಜಮೀನಿನ ಜಿಪಿಎಸ್ಸ ಬೆಳೆಯ ಸಮೀಕ್ಷೆಯ ಸಂಪೂರ್ಣ ವಿವರವನ್ನು ಹಾಗೂ ಫೋಟೋವನ್ನು ಕೂಡ ಮೊಬೈಲನಲ್ಲಿ ನೋಡಬಹುದಾಗಿದೆ. ಒಂದು ವೇಳೆ ನಿಮ್ಮ ಜಮೀನಿನ ಬೆಳೆಯ ಹೆಸರನ್ನು ಸಮೀಕ್ಷೆಯಲ್ಲಿ ಸೇರಿಸಿದೆ ಇದ್ದರೆ ನಿಮ್ಮ ಊರಿನ ಗ್ರಾಮ ಲೆಕ್ಕಾಧಿಕಾರಿ ಗಳನ್ನು ಭೇಟಿ ಮಾಡಿ ಒಂದು ಸೇರ್ಪಡೆಯನ್ನು ಮಾಡಬಹುದು. ಅಷ್ಟೇ ಅಲ್ಲದೆ ನಿಮ್ಮ ಸರ್ವೇ ನಂಬರ್ ನಲ್ಲಿ ಬರುವ ನಿಮ್ಮ ಎಲ್ಲಾ ಜಮೀನುಗಳನ್ನು ಜಿಪಿಎಸ್ ಮಾಡಿದ್ದಾರೋ ಇಲ್ಲವೋ ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕು. ಜಮೀನಿನ ಜಿಪಿಎಸ್ ಹಾಗೂ ಬೆಳೆಯ ಸಮೀಕ್ಷೆ ಈಗಾಗಲೇ ಮಾಡಿದ್ದರೆ , ಯಾವ ಯಾವ ಸರ್ವೆ ನಂಬರ್ ನಲ್ಲಿ ಬರುವ ನಮ್ಮ ಯಾವ ಯಾವ ಜಮೀನನ್ನು ಸಮೀಕ್ಷೆ ಮಾಡಿದ್ದಾರೆ ಎಷ್ಟು ಎಕರೆಗಳವರೆಗೂ ಬೆಳೆಗಳ ಸಮೀಕ್ಷೆಯನ್ನು ಮಾಡಲಾಗಿದೆ ಹಾಗೂ ಜಿಪಿಎಸ್ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಸರಕಾರದ ಒಂದು ಅಪ್ಲಿಕೇಶನ್ ಮೂಲಕ ಫೋಟೋ ಸಹಿತವಾಗಿ ನೋಡಬಹುದು.

ಸರ್ಕಾರದ “ಬೆಳೆದರ್ಶಕ” ಎನ್ನುವ ಅಪ್ಲಿಕೇಶನ್ನ ಮೂಲಕ ನಿಮ್ಮ ಜಮೀನಿನ ಸಂಪೂರ್ಣವಾದ ಜಿಪಿಎಸ್ ಹಾಗೂ ಬೆಳೆಗಳ ಸಮೀಕ್ಷೆಯನ್ನು ಫೋಟೋ ಸಹಿತವಾಗಿ ಕಾಣಬಹುದು. ನಮ್ಮ ಮೊಬೈಲ್ ನಲ್ಲಿ ಇದನ್ನು ಹೇಗೆ ನೋಡುವುದು ಎನ್ನುವುದರ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ. ಮೊದಲು ಪ್ಲೇ ಸ್ಟೋರಿಗೆ ಹೋಗಿ ಬೆಳೆದರ್ಶಕ {Bele Darshak} ಎನ್ನುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಓಪನ್ ಮಾಡಿ ರೈತ ಎನ್ನುವಲ್ಲಿ ಕ್ಲಿಕ್ ಮಾಡಬೇಕು. ನಂತರದ ಪೇಜಿನಲ್ಲಿ ವರ್ಷ, ಋತುಮಾನ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಇವೆಲ್ಲವನ್ನು ಸರಿಯಾಗಿ ನಮೂದಿಸಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಮಾಲೀಕರ ವಿವರ ಎಂದು ಇದ್ದಲ್ಲಿ ಸರ್ವೆನಂಬರಿನಲ್ಲಿ ಯಾರ ಮಾಲಿಕತ್ವದಲ್ಲೀ ಇರುತ್ತದೆಯೋ ಅವರ ಜಿಪಿಎಸ್ ಹಾಗೂ ದಾಖಲಿಸಿದ ಬೆಳೆ ವಿವರ ಇವುಗಳನ್ನು ನಮೂದಿಸಬೇಕು. ಅಂತರ ಬೆಳೆಗಳ ವಿವರವನ್ನು ತೋರಿಸುತ್ತದೆ. ಅಲ್ಲಿ ಛಾಯಾಚಿತ್ರವನ್ನು ವೀಕ್ಷಿಸಿ ಎಂದು ಇದ್ದಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಚಿತ್ರವನ್ನು ತೋರಿಸುತ್ತದೆ. ಜಮೀನು ಪಾಳು ಬಿದ್ದರೆ ಜಿಪಿಎಸ್ ನ ಮೂಲಕ ಅದನ್ನು ತೋರಿಸಿದ್ದರೆ ನಮಗೆ ಬೆಳೆ ಪರಿಹಾರ ಸಿಗುತ್ತದೆ. ಗ್ರಾಮದ ಬೆಳೆ ಸಮೀಕ್ಷೆಗಾರರ ವಿವರ ಎಂದು ಇದ್ದಲ್ಲಿ ಯಾರು ಸರ್ವೆ ಮಾಡಿದ್ದಾರೆ ಹಾಗೂ ಅವರ ಮೊಬೈಲ್ ನಂಬರ್ ಕೂಡ ದೊರೆಯುತ್ತದೆ. ಇದರ ಮೂಲಕ ಸರ್ವೆ ಮಾಡಿದವರಿಗೆ ನೀವು ಅವರನ್ನು ಭೇಟಿ ಮಾಡಿ ನಿಮ್ಮ ಜಮೀನಿನ ಸರ್ವೆ ಮಾಡಿದಿರೋ ಇಲ್ಲವೋ ಎಂದು ವಿಚಾರಣೆಯನ್ನು ಕೂಡ ಮಾಡಬಹುದು. ಈ ರೀತಿಯಾಗಿ ಬರಪೀಡಿತ ಪ್ರದೇಶದಲ್ಲಿನ ಎಲ್ಲ ರೈತರು ಕೂಡ ಮೊಬೈಲಿನಲ್ಲಿ ತಮ್ಮ ಜಮೀನಿನ ಸಮೀಕ್ಷೆಯನ್ನು ಹಾಗೂ ಜಿಪಿಎಸ್ ಮಾಡಿದ್ದಾರೋ ಇಲ್ಲವೋ ಎನ್ನುವುದರ ಕುರಿತಾಗಿ ತಿಳಿದುಕೊಳ್ಳಬಹುದು.

Leave A Reply

Your email address will not be published.