ಮುಖದ ಮೇಲಿನ ತೆರೆದ ರಂಧ್ರಗಳನ್ನು ನಿವಾರಿಸುವ ಮನೆಮದ್ದು

0 1

ಸಾಮಾನ್ಯವಾಗಿ ಮುಖದ ಮೇಲೆ ಮೊಡವೆಗಳು ಹಾಗೂ ಕಪ್ಪು ಕಲೆಗಳು ಹಾಗೂ ಇನ್ನು ಕೆಲವರಲ್ಲಿ ಮುಖದ ಮೇಲಿನ ರಂದ್ರಗಳು ಇರುತ್ತವೆ, ಇಂತಹ ಸಮಸ್ಯೆಗಳಿಂದ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಆಗೋದಿಲ್ಲ ಅಷ್ಟೇ ಅಲ್ಲದೆ ಸೌಂದರ್ಯವಾಗಿ ಕಾಣಲು ಆಗೋದಿಲ್ಲ, ಅಂತಹ ಸಮಸ್ಯೆಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಬದಲು ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಈ ಮನೆಮದ್ದು ಹೇಗೆ ಸಹಕಾರಿ ಅನ್ನೋದನ್ನ ಮುಂದೆ ನೋಡಿ.

ನಾನಾ ರೀತಿಯ ಕ್ರೀಮ್ ಇತ್ಯಾದಿಗಳನ್ನು ಬಳಸಿ ಮುಖದ ಅಂದವನ್ನು ಹಾಳು ಮಾಡಿಕೊಳ್ಳುವ ಬದಲು ಯಾವುದೇ ತೊಂದರೆ ಇಲ್ಲದೆ ಮುಖದ ಮೇಲಿನ ರಂಧ್ರವನ್ನು ನಿವಾರಿಸುವಂತ ಈ ಮನೆಮದ್ದು ಯಾವುದು ಅನ್ನೋದನ್ನ ನೋಡುವುದಾದರೆ, ಅಲೋವೆರಾ ಜೆಲ್ ಹೌದು ಇದು ನೈಸರ್ಗಿಕ ಗಿಡವಾಗಿದ್ದು ಇದರಲ್ಲಿ ಹತ್ತಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಮನೆಮದ್ದು ತಯಾರಿಸುವ ವಿಧಾನ: ಸ್ವಲ್ಪ ಅಲೋವೆರಾ ಜೆಲ್ ಗೆ ಅರ್ಧ ಟೀ ಚಮಚ ಕಾಫಿಪುಡಿ ಯನ್ನು ಮಿಸುರನ ಮಾಡಿ ಮುಖಕ್ಕೆ ಹಚ್ಚಿ ೨ ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಮುಖ ವಾಶ್ ಮಾಡಿಕೊಳ್ಳಿ ಹೀಗೆ ದಿನಕ್ಕೊಮ್ಮೆ ಮಾಡಿದರೆ ರಂಧ್ರಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಮತ್ತು ನಿಮ್ಮ ಚರ್ಮಕ್ಕೆ ಅಂತಿಮ ಹೊಳಪನ್ನು ನೀಡಲು ಸಹಕಾರಿಯಾಗುತ್ತದೆ.

Leave A Reply

Your email address will not be published.