ಅಪ್ಪಟ ಕನ್ನಡತಿ, ಕನ್ನಡಾಭಿಮಾನ ಹೊಂದಿರುವ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಅದಿತಿ ಪ್ರಭುದೇವ್ ಅವರಿಗೆ ಹಳ್ಳಿ ಸೊಗಡಿನ ಬಗ್ಗೆ ಅಭಿಮಾನವಿದೆ. ಅವರು ಈಗಲೂ ಹಳ್ಳಿಗಳಲ್ಲಿ ಶೂಟಿಂಗ್ ನಡೆದರೆ ಬಿಡುವಿನ ಸಮಯದಲ್ಲಿ ಹಳ್ಳಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಅದಿತಿ ಅವರು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಆಟವಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಮಕ್ಕಳೊಂದಿಗೆ ಆಟವಾಡಿದ ವಿಡಿಯೋ ಬಗ್ಗೆ, ಅವರ ಬಾಲ್ಯ ಹಾಗೂ ಅವರ ಸಿನಿ ಪಯಣದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕನ್ನಡವನ್ನು ಸ್ಪಷ್ಟವಾಗಿ ಪಟಪಟ ಮಾತನಾಡುವ ಅದಿತಿ ಪ್ರಭುದೇವ್ ಅವರು ಶಾನೆ ಟಾಪಾಗವ್ಳೆ ಎಂಬ ಹಾಡಿನ ಮೂಲಕ ಫೇಮಸ್ ಆಗಿದ್ದಾರೆ. ಕನ್ನಡ ಚಿತ್ರರಂಗದ ನಟಿ ಅದಿತಿ ಪ್ರಭುದೇವ್ ಅವರು ತಮ್ಮ ಸಿನಿಮಾ ಶೂಟಿಂಗ್ ಸಮಯದಲ್ಲಿ ಮಕ್ಕಳ ಜೊತೆ ಆಡುತ್ತಿರುವ ವೀಡಿಯೋ ಒಂದನ್ನು ಶೇರ್ ಮಾಡಿ ಇಷ್ಟೆಲ್ಲಾ ನೆನಪುಗಳು, ಶೂಟಿಂಗ್ ಸಮಯದಲ್ಲಿ ಹಳ್ಳಿ ಸೊಗಡಿನ, ಮುಗ್ಧ ನಗುವಿನೊಂದಿಗೆ ಆಟ. ಈ ಸಂತೋಷಕ್ಕೆ ಬೆಲೆಕಟ್ಟಲಾಗದು, ಹತ್ತು ವರ್ಷಗಳ ಹಿಂದೆ ಹೋದಂತಾಯಿತು. ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ, ಹೆಚ್ಚು ಕಡಿಮೆ ನಾನು ಓದುವಾಗಲೂ ಇದೇ ರೀತಿಯ ಯುನಿಫಾರ್ಮ್ ಇತ್ತು ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಿತಿ ಪ್ರಭುದೇವ್ ಅವರ ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಅದಿತಿ ಅವರು ಜನವರಿ 13, 1992ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸುತ್ತಾರೆ. ಇವರ ಮೊದಲ ಹೆಸರು ಸುದೀಪನಾ ಪ್ರಭುದೇವ್. ಇವರ ತಂದೆಯ ಹೆಸರು ಪ್ರಭುದೇವ್, ಇವರು ಡಾಕ್ಟರ್ ಆಗಿದ್ದು ಹಳ್ಳಿಗಳಲ್ಲಿ ಸರ್ವಿಸ್ ಮಾಡಿದ್ದಾರೆ ಆದ್ದರಿಂದ ಅದಿತಿ ಅವರು 10ನೇ ತರಗತಿಯವರೆಗೆ ಹಳ್ಳಿಗಳಲ್ಲಿ ಬೆಳೆದಿದ್ದಾರೆ. ಇವರು ಇಂಜಿನಿಯರಿಂಗ್ ಮತ್ತು ಎಂಬಿಎ ಓದಿದ್ದಾರೆ. ಇಂಟರ್ನ್ಶಿಪ್ ಗಾಗಿ ಬೆಂಗಳೂರಿಗೆ ಹೋಗುತ್ತಾರೆ, ತಮ್ಮ ದಿನನಿತ್ಯದ ಖರ್ಚಿಗಾಗಿ ವಿದ್ಯಾಭ್ಯಾಸದ ಜೊತೆಗೆ ಗಣಪತಿ ಉತ್ಸವ ಹಾಗೂ ಇವೆಂಟ್ ಗಳಲ್ಲಿ ಆಂಕರಿಂಗ್ ಮಾಡುತ್ತಾರೆ. ಇವರಿಗೆ ಸಿನಿಮಾಗಳಲ್ಲಿ ನಟಿಸಲು ಟ್ರೈ ಮಾಡಿ ಎಂದು ಹೇಳುತ್ತಾರೆ. ರೆ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನವೀನ್ ಕೃಷ್ಣ ಅವರು ಅದಿತಿ ಅವರಿಗೆ ಸುವರ್ಣ ವಾಹಿನಿಯ ಒಂದು ಸೀರಿಯಲ್ ಗೆ ಆಡಿಷನ್ ನಡೆಯುತ್ತಿದೆ ನೀವು ಪ್ರಯತ್ನಿಸಿ ಎಂದು ಹೇಳುತ್ತಾರೆ. ನಂತರ ಅದಿತಿ ಅವರು ಸೀರಿಯಲ್ ಆಡಿಷನ್ ನಲ್ಲಿ ಭಾಗವಹಿಸಿ ಆಯ್ಕೆಯಾಗುತ್ತಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗುಂಡ್ಯಾನ ಹೆಂಡತಿ ಎಂಬ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಾರೆ. ನಂತರ ಧೈರ್ಯಂ ಸಿನಿಮಾದಲ್ಲಿ ಅಜಯ್ ರಾವ್ ಅವರೊಂದಿಗೆ ನಾಯಕಿಯಾಗಿ ನಟಿಸುತ್ತಾರೆ.
ತಮ್ಮ ಮೊದಲ ಸಿನಿಮಾದಿಂದ ಜನರ ಮೆಚ್ಚುಗೆಯನ್ನು ಗಳಿಸುತ್ತಾರೆ ಆದರೆ ಒಳ್ಳೆಯ ಸಿನಿಮಾ ಆಫರ್ ಬರದೆ ಮತ್ತೆ ನಾಗಕನ್ನಿಕೆ ಎಂಬ ಸೀರಿಯಲ್ ನಲ್ಲಿ ನಟಿಸುತ್ತಾರೆ. ನಾಗಕನ್ನಿಕೆ ಸೀರಿಯಲ್ ನಲ್ಲಿ ತಮ್ಮ ಅದ್ಭುತ ನಟನೆಯಿಂದ ಮತ್ತೊಮ್ಮೆ ಜನರ ಮನಗೆಲ್ಲುತ್ತಾರೆ. ನಂತರ ಬಜಾರ್ ಎಂಬ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ನಂತರ ಸಿಂಗಂ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರೊಂದಿಗೆ ನಟಿಸಿ ಜನಪ್ರಿಯರಾಗುತ್ತಾರೆ. ನಂತರ ಆಪರೇಷನ್ ನಕ್ಷತ್ರ, ರಂಗನಾಯಕಿ, ಬ್ರಹ್ಮಚಾರಿ ಸಿನಿಮಾಗಳಲ್ಲಿ ವಿವಿಧ ಪಾತ್ರದಲ್ಲಿ, ವಿಭಿನ್ನವಾಗಿ ನಟಿಸಿದ್ದಾರೆ. ಅದಿತಿ ಪ್ರಭುದೇವ್ ಅವರಿಗೆ ಹೆಚ್ಚು ಸಿನಿಮಾಗಳಲ್ಲಿ ಅವಕಾಶ ಸಿಗಲಿ, ಜನರನ್ನು ಮನರಂಜಿಸಲಿ, ಉಜ್ವಲ ಭವಿಷ್ಯ ಅವರದಾಗಲಿ ಹಾಗೂ ಅವರ ಕನ್ನಡಾಭಿಮಾನ ಹೀಗೆ ಮುಂದುವರಿಯಲಿ ಎಂದು ಆಶಿಸೋಣ.