ಮಗಳ ಮದುವೆಯ ವಿಡಿಯೋ ಹಂಚಿಕೊಂಡ ಅರವಿಂದ್ ರಮೇಶ್

0 0

ಕನ್ನಡದ ಪ್ರಸಿದ್ದ ನಟರಾದ ರಮೇಶ್ ಅವರ ಮುದ್ದಿನ ಮಗಳು ಗುರುಹಿರಿಯರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟಿದ್ದಾಳೆ. ಇದರ ಕುರಿತಾದ ವಿಷಯಗಳನ್ನು ಈ ಲೇಖನದಲ್ಲಿ ತಿಳಿಯೋಣ.

ರಮೇಶ್‌ ಅರವಿಂದ್‌ ಅಂದಾಕ್ಷಣ ನೆನಪಾಗುವುದು ವೀಕೆಂಡ್ ವಿತ್ ರಮೇಶ್. ಈ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ ಮನೆ ಮಾತಾಗಿದ್ದಾರೆ. ಕನ್ನಡದ ಕೋಟ್ಯಾಧಿಪತಿಯ ಒಂದು ಸೀಸನ್ ನ ನಿರೂಪಕರಾಗಿಯೂ ಮನ್ನಣೆ ಪಡೆದಿದ್ದಾರೆ. ರಮೇಶ್ ಅರವಿಂದ್ ಅವರು ಬಹುಭಾಷಾ ನಟ, ಇವರು ಮೂಲತಃ ತಮಿಳುನಾಡಿನವರು, ಕನ್ನಡದಲ್ಲಿ ರಮೇಶ್ ಅರವಿಂದ್ ಅವರ ನಟನೆ, ನಿರ್ದೇಶನ, ನಿರ್ಮಾಣ ಹಾಗೂ ನಿರೂಪಣೆಯ ಮೂಲಕ ಕನ್ನಡ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಚಿತ್ರಗಳನ್ನು ನೆನಪಿಸಿಕೊಂಡರೆ ಕಣ್ಮುಂದೆ ಬರುವುದು ಅನುರಾಗ ಸಂಗಮ, ಪಂಚಮವೇದ, ನಮ್ಮೂರ ಮಂದಾರ ಹೂವೆ, ಚಂದ್ರಮುಖಿ ಪ್ರಾಣಸಖಿ, ಸಂಭ್ರಮ, ಸುಂದರ ಸ್ವಪ್ನಗಳು ಮತ್ತು ಮದುವೆ. ಎವರ್ ಗ್ರೀನ್ ನಟನೆಂದೆ ಹೆಸರು ಪಡೆದಿರುವ ರಮೇಶ್‌ ಅವರು ಈಗ ಮಾವ ಆಗಿದ್ದಾರೆ.

ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕ ಹಾಗೂ ಗೆಳೆಯ ಅಕ್ಷಯ್ ಜೊತೆ 2020 ಡಿಸೆಂಬರ್‌ 28 ರ ಬೆಳಗ್ಗೆ 10:50 ರ ಶುಭ ಮುಹೂರ್ತದಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಖಾಸಗಿ ರೆಸಾರ್ಟ್ ನಲ್ಲಿ ವಿವಾಹ ನಡೆದಿದೆ. ಕೊರೊನಾ ವೈರಸ್‌ ಹರಡುವ ಭೀತಿ ಇರುವುದರಿಂದ ಕುಟುಂಬದವರು ಮತ್ತು ಕೆಲವೇ ಕೆಲವು ಮಂದಿ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಚಿತ್ರರಂಗದವರಿಗಾಗಿ ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಅಕ್ಷಯ್‌ ಖಾಸಗಿ ಸಂಸ್ಥೆಯೊಂದರಲ್ಲಿ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌ ಡಿಸೈನರ್‌ ಆಗಿದ್ದಾರೆ ಹಾಗೂ ಮಗಳು ಪ್ರಾಡಕ್ಟ್ ಮ್ಯಾನೇಜರ್‌ ಆಗಿ ವೃತ್ತಿ ಮಾಡುತ್ತಿದ್ದಾರೆ.

ಆರತಕ್ಷತೆ ಕಾರ್ಯಕ್ರಮದಲ್ಲಿ ಸಿನಿಮಾ ರಂಗದ ಕಲಾವಿದರಾದ ಯಶ್ ರಾಧಿಕಾ, ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ದಂಪತಿ, ನಾಧ ಬ್ರಹ್ಮ ಹಂಸಲೇಖ, ವಿಜಯ್ ರಾಘವೇಂದ್ರ , ಪ್ರಜ್ವಲ್ ದೇವರಾಜ್ ಮತ್ತು ಅವರ ಪತ್ನಿ ರಾಗಿಣಿ, ಹಾಸ್ಯ ನಟ ದೊಡ್ಡಣ್ಣ, ಶ್ರೀಮತಿ ಸುಮಲತಾ ಅಂಬರೀಷ್, ಸಿಹಿಕಹಿ ಚಂದ್ರು , ಹಾಗೂ ಶಿವಾಜಿ ಸೂರತ್ಕಲ್ ಸಿನೆಮಾ ತಂಡದವರು ಹಾಗೂ ಮುಂತಾದವರು ಪಾಲ್ಗೊಂಡಿದ್ದರು. ರಾಜಕೀಯದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್, ಡಾ.ಸುಧಾಕರ್, ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂತಾದ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ಜೋಡಿಗೆ ಹಾರೈಸಿದರು. ತಾರೆಯರು ಹಾಗೂ ನಟ ನಟಿಯರು ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕಿ ಆನಂದಿಸಿದರು ಹಾಗೂ ಪ್ರತಿಯೊಂದು ಕಾರ್ಯಕ್ರಮಗಳನ್ನು ಸರ್ಕಾರದ ಕೊರೊನ ನಿಯಮಗಳ ಪ್ರಕಾರ ಮಾಡಲಾಯಿತು.

ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಲಿಂದ ಚಿತ್ರರಂಗದವರು ಕರ್ನಾಟಕ ಜನತೆ ಹಾಗೂ ಮಾಧ್ಯಮದವರು ಅಪಾರ ಪ್ರೋತ್ಸಾಹ ನೀಡಿದ್ದಾರೆ. ನನ್ನ ಮಗಳು ನಿಹಾರಿಕ ಮತ್ತು ಅಕ್ಷಯ್ ಮದುವೆ ನಡೆಯಿತು. ನಿಮ್ಮ ಪ್ರೀತಿ ಆಶೀರ್ವಾದ ಹೊಸ ಜೋಡಿಯ ಮೇಲೆ ಸದಾ ಇರಲಿ ಅಂತ ರಮೇಶ್ ಅರವಿಂದ್ ಅವರು ಜನರಲ್ಲಿ ವಿನಂತಿಸಿಕೊಂಡರು. ರಮೇಶ್ ಅವರು ತಮ್ಮ ಮಗಳ ಮದುವೆಯ ಆರತಕ್ಷತೆ ಕಾರ್ಯಕ್ರಮದ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನೀವೂ ಕೂಡ ಆರತಕ್ಷತೆ ಕಾರ್ಯಕ್ರಮದ ವಿಡಿಯೋ ನೋಡಿ ಆನಂದಿಸಿ.

Leave A Reply

Your email address will not be published.