ಸಲಾಂ ರಾಕಿ ಭಾಯ್ ಎಂದ ನಟ ಯಶ್ ಮಗಳ ವಿಡಿಯೋ ಇದೀಗ ಸಕತ್ ವೈರಲ್

0 0

“ಸಲಾಂ ರಾಕಿ ಭಾಯ್” ಇದು ಕೇವಲ ಒಂದಿಬ್ಬರು ಹೇಳುತ್ತಿರುವ ಮಾತಲ್ಲ. ಇಡೀ ವಿಶ್ವವೇ ರಾಕಿ ಭಾಯ್​ ಆರ್ಭಟ ಕಂಡು ಈ ಮಾತು ಹೇಳುತ್ತಿದ್ದಾರೆ. ಇಡೀ ವಿಶ್ವದಲ್ಲೇ ರಾಕಿಂಗ್​ ಸ್ಟಾರ್​ ಯಶ್ ಹೆಸರು ಫೇಮಸ್​ ಆಗಿದೆ. ಯಶ್​ ಈಗ ಕೇವಲ ರಾಕಿಂಗ್​ ಸ್ಟಾರ್​ ಅಲ್ಲ, ನ್ಯಾಷನಲ್​ ಸ್ಟಾರ್​ ಆಗಿದ್ದಾರೆ. ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ – 2‘ ಚಿತ್ರವು ದಿನೇ ದಿನೇ ಒಂದಲ್ಲಾ ಒಂದು ದಾಖಲೆಯನ್ನು ಮಾಡುತ್ತಿದೆ. ಯಾರೂ ಉಹಿಸಿರದ ಯಶಸ್ಸನ್ನು ಕೆಜಿಎಫ್​ 2 ಗಳಿಸುತ್ತಿದೆ.

ಯಾವಾಗಪ್ಪ ಕೆಜಿಎಫ್​ 3 ಬರುತ್ತೆ? ನೀರಿಗೆ ಬಿದ್ದ ರಾಕಿ ಭಾಯ್​ ಮತ್ತೆ ಎದ್ದು ಬರ್ತಾರಾ ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದೀಗ ಕನ್ನಡದ ಹೆಮ್ಮೆ `ಕೆಜಿಎಫ್ 2′ ಸಿನಿಮಾ ಯಶಸ್ವಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಯಶ್ ಖಡಕ್ ಆಕ್ಟಿಂಗ್ ನೋಡಿ ಅಭಿಮಾನಿ ದೇವರುಗಳು ಅಪ್ಪಿ ಒಪ್ಪಿಕೊಂಡಿದಾಯ್ತು. ಈಗ ರಾಕಿಭಾಯ್ ಮಗಳು ಐರಾ ಸಲಾಮ್ ರಾಕಿಭಾಯ್ ಅಂತಾ ಹೇಳಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಶನ್‌ನ ಯಶಸ್ವಿ ಚಿತ್ರ `ಕೆಜಿಎಫ್ 2′ ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಕೆಜಿಎಫ್​ 1 ಹಾಗೂ ಕೆಜಿಎಫ್​ 2 ಸಿನಿಮಾ ಡೈಲಾಗ್​, ಹಾಡುಗಳು ಸಿಕ್ಕಾಪಟ್ಟೆ ಫೇಮಸ್​ ಆಗಿದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಬಾಯಲ್ಲೂ ಈ ಸಿನಿಮಾದ ಡೈಲಾಗ್​ ಹಾಗೂ ಹಾಡುಗಳನ್ನು ಗುನುಗುತ್ತಿದ್ದಾರೆ. ಅದರಲ್ಲೂ ಮಕ್ಕಳಿಗಂತೂ ರಾಕಿ ಭಾಯ್​ ಕಂಡರೆ ಸಖತ್​ ಇಷ್ಟ. ಮೊನ್ನೆಯಷ್ಟೇ ಪುಟಾಣಿ ಬಾಲಕನೊಬ್ಬ ರಾಕಿ ಭಾಯ್​ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದ. ಇದೀಗ ರಾಕಿಂಗ್​ ಸ್ಟಾರ್​ ಯಶ್​ ಅವರ ಮಗಳು ಐರಾ ಅವರ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಐರಾ ಸಲಾಂ ರಾಕಿ ಭಾಯ್​ ಹಾಡನ್ನು ಮುದ್ದಾಗಿ ಹಾಡಿದ್ದಾರೆ. ಬಾಲಿವುಡ್‌ನಲ್ಲಿ ಯಶ್ ಅವರದ್ದೇ ಕಾರುಬಾರು ಹೀಗೆಲ್ಲಾ ಇರುವಾಗ ಇದೀಗ ಮಾಸ್ಟರ್‌ಪೀಸ್ ಯಶ್ ಮಗಳು ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ಮುದ್ದು ಮುದ್ದಾಗಿ ಹೇಳಿದ್ದಾರೆ.

ಸಧ್ಯ ರಾಕಿಂಗ್​ ಸ್ಟಾರ್​ ಯಶ್​ ಕುಟುಂಬ ಸದ್ಯ ಗೋವಾದಲ್ಲಿ ಬಿಡು ಬಿಟ್ಟಿದೆ. ರಾಧಿಕಾ ಪಂಡಿತ್ ಅವರ ಫ್ಯಾಮಿಲಿ ಕೂಡ ಗೋವಾದಲ್ಲಿ. ಹೀಗೆ ಎಲ್ಲರೂ ಒಟ್ಟಾಗಿ ಕೆಜಿಎಫ್​ 2 ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್​ ಅಪ್​ಡೇಟ್​ ನೀಡಿದ್ದಾರೆ. ಕಸಿನ್ಸ್​ ಹಾಗೂ ಅಮ್ಮನ ಜೊತೆ ಕೆಜಿಎಫ್​ 2 ಸಿನಿಮಾ ನೋಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅವರ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರಾಕಿ ಭಾಯ್​ ಹಾಗೂ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಬಂದಿದ್ದ ಕೆಜಿಎಫ್​ ಚಾಪ್ಟರ್​ ಒನ್​​ ಸಿನಿಮಾ ಸಖತ್ ಸೌಂಡ್ ಮಾಡಿತ್ತು, ಕೆಜಿಎಫ್​ ಚಾಪ್ಟರ್​​​2 ಮೇಲೆ ಹೆಚ್ಚು ನಿರೀಕ್ಷೆ ಬರುವಂತೆ ಮಾಡಿತ್ತು. ಕೆಜಿಎಫ್​ 2 ರಿಲೀಸ್​​ ಆದ ನಂತರ ಇಡೀ ವಿಶ್ವದಲ್ಲೇ ರೂಲ್​ ಮಾಡುತ್ತಿದ್ದೆ. ಕರ್ನಾಟಕದಲ್ಲಿ 153.8 ಕೋಟಿ, ತೆಲುಗು ರಾಜ್ಯದಲ್ಲಿ 125.7 ಕೋಟಿ, ತಮಿಳುನಾಡು 94.24 ಕೋಟಿ, ಕೇರಳದಲ್ಲಿ 53.8 ಕೋಟಿ, ಇತರೆಡೆ 402.9 ಕೋಟಿ, ಒಟ್ಟು 816.3 ಕೋಟಿ ಗಳಿಗೆ, ವಿದೇಶದಲ್ಲಿ 164.2 ಕೋಟಿ ರೂಪಾಯಿ, ಒಟ್ಟು 980.5 ಕೋಟಿ ಕಲೆಕ್ಷನ್ ಮಾಡಿದೆ.

ಐರಾ ಅವರ ವಿಡಿಯೋವನ್ನು ಸ್ವತಃ ರಾಕಿಂಗ್​ ಸ್ಟಾರ್​ ಯಶ್​ ತಮ್ಮ ನ್ಯಾಷನಲ್ ಯಶ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬೆಳಗಿನ ಆಚರಣೆ ರಾಕಿಭಾಯ್ ಜತೆ ತಮಾಷೆಯೊಂದಿಗೆ ಶುರುವಾಗಬೇಕು ಎಂದು ಪುತ್ರಿ ಐರಾ ಸಲಾಂ ರಾಕಿಭಾಯ್ ರಾ.. ರಾ..ರಾಕಿ ಅಂತಾ ವಿಡಿಯೋ ಯಶ್ ಸೋಷಿಯಲ್ ಮೀಡಿಯಾ ಖಾತೆ ಸಖತ್ ವಿವ್ಸ್ ಗಿಟ್ಟಿಸಿಕೊಳ್ಳುವುದರ ಜತೆಗೆ ಸಲಾಂ ರಾಕಿಭಾಯ್ ಎಂದ ಐರಾ ಕ್ಯೂಟ್‌ನೆಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.‌ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಯಶಸ್ಸಿನಿಂದ ಮಿರ ಮಿರ ಅಂತಾ ಮಿಂಚ್ತಿರೋ ಯಶ್ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಜತೆಗೆ `ಕೆಜಿಎಫ್ 2′ ಅಪ್‌ಡೇಟ್ ಕುರಿತು ಕ್ಯೂರಿಯಸ್ ಆಗಿದ್ದಾರೆ. ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಎಲ್ಲರೂ ಈ ಮುದ್ದಾದ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

Leave A Reply

Your email address will not be published.