ಕನ್ನಡದಲ್ಲಿ ಕುರುಕ್ಷೇತ್ರ ಹಾಗೂ ರವಿಶಾಸ್ತ್ರಿ ಸಿನಿಮಾಗಳಲ್ಲಿ ನಟಿಸಿದ ನಟಿ ಸ್ನೇಹಾ ಇತ್ತೀಚೆಗೆ ಅಷ್ಟೇ ಬಹಳ ಸಂಭ್ರಮದಿಂದ ತಮ್ಮ ಹುಟ್ಟು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಕುಟುಂಬದೊಂದಿಗೆ ಅವರು ಈ ಸಂತೋಷವನ್ನು ಆಚರಿಸಿದ್ದಾರೆ. ತನ್ನ ಹುಟ್ಟುಹಬ್ಬದಂದು ಟ್ವಿಟರ್​ನಲ್ಲಿ ನಟಿ ಸ್ನೇಹಾ ಟ್ರೆಂಡ್ ಸೃಷ್ಟಿಸಿದ್ದಾರೆ.

ಮುದ್ದುಮುಖದ ಸದಾ ಹಸನ್ಮುಖಿಯಾಗಿರುವ ನಟಿ ಸ್ನೇಹಾಗೆ ಹುಟ್ಟುಹಬ್ಬದ ಸಂಭ್ರಮ. 39ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಈ ನಟಿ ಎರಡು ಮಕ್ಕಳ ತಾಯಿ. ಆದರೂ ಸಹ ಚಿತ್ರ ರಂಗದಲ್ಲಿ ಇವರಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ ಹಾಗೆಯೇ ಇವರ ಜನಪ್ರಿಯತೆಯು ಕೂಡಾ ಕುಗ್ಗಿಲ್ಲ. ಇದೇ ಕಾರಣದಿಂದಾಗಿ ಇಂದು ಅವರ ಹುಟ್ಟುಹಬ್ಬ ಟ್ವಿಟರ್​​ನಲ್ಲಿ ಟ್ರೆಂಡ್​ ಸೃಷ್ಟಿಸಿದೆ ಎನ್ನಬಹುದು. #HBDSneha ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಅಭಿಮಾನಿಗಳು ಅವರಿಗೆ ಶುಭಾಶಯ ತಿಳಿಸಿದ್ದಾರೆ.

ನಟಿ ಸ್ನೇಹಾ ಅವರು ನಟ ಪ್ರಸನ್ನ ಜೊತೆ 8 ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕವೂ ಅನೇಕ ಚಿತ್ರಗಳಲ್ಲಿ ನಾಯಕನಟಿಯಾಗಿ ನಟನೆ ಮಾಡಿದ್ದಾರೆ. ನಟಿ ಸ್ನೇಹ ಅವರಿಗೆ ಈಗಾಗಲೇ ಒಬ್ಬ ಮಗನಿದ್ದು, ಫೆಬ್ರವರಿಯಲ್ಲಿ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. ಸದ್ಯ ಮಗುವಿನ ಪಾಲನೆಯಲ್ಲಿ ಬ್ಯುಸಿಯಾಗಿರುವ ನಟಿಗೆ ಅವರ ಹುಟ್ಟುಹಬ್ಬದ ದಿನ ಪತಿ ಪ್ರಸನ್ನ ವಿಶೇಷವಾಗಿ ಹುಟ್ಟುಹಬ್ಬದ ಸರ್ಪ್ರೈಸ್​ ನೀಡಿದ್ದಾರೆ. ಈ ಕುರಿತಾಗಿ ಸ್ನೇಹ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. ಎರಡನೇ ಮಗುವಿನ ತಾಯಿಯಾಗಿದ್ದ ಸಂದರ್ಭದಲ್ಲಿ ಪಟ್ಟಾಸ್​ ಸಿನಿಮಾದಲ್ಲಿ ನಟ ಧನುಷ್​ಗೆ ನಾಯಕನಟಿಯಾಗಿ ಕೂಡಾ ಅವರು ನಟನೆ ಮಾಡಿದ್ದರು. ಹೆಂಡತಿ ಹುಟ್ಟುಹಬ್ಬಕ್ಕೆ ನಟ ಪ್ರಸನ್ನ ಅವರ ಮನೆಯಲ್ಲಿ ಬಹಳಷ್ಟು ಸುಂದರವಾಗಿ ಅಲಂಕಾರ ಮಾಡುವ ಮೂಲಕ ತನ್ನ ಪತ್ನಿಗೆ ಸರ್ಪ್ರೈಸ್ ನೀಡಿದ್ದಾರೆ.

Leave a Reply

Your email address will not be published. Required fields are marked *