ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಣೇಶ್ ಚತುರ್ಥಿಯ ಮಂಗಳಕರ ಸಂದರ್ಭದಲ್ಲಿ ತನ್ನ ಮನೆಯಲ್ಲಿ ಗಣೇಶನನ್ನು ಸ್ವಾಗತಿಸಿದರು. ಮಹಾರಾಷ್ಟ್ರದ ದೊಡ್ಡ ಉತ್ಸವಗಳಲ್ಲಿ ಗಣೇಶ್ ಚತುರ್ಥಿ ಒಂದಾಗಿದೆ. ಈ ಉತ್ಸವ ಹತ್ತು ದಿನಗಳವರೆಗೆ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಜನರು ಗಜಾನನವನ್ನು ತಮ್ಮ ಮನೆಗಳಿಗೆ ವಿಗ್ರಹ ರೂಪದಲ್ಲಿ ಸ್ವಾಗತಿಸುತ್ತಾರೆ ಮತ್ತು ಅವರ ಪೂಜಿಸುವ ಮೂಲಕ ಅವರು ತಮ್ಮ ಪ್ರಾರ್ಥನೆಗಳನ್ನು ಗಜಾನನನಿಗೆ ಸಲ್ಲಿಸುತ್ತಾರೆ. ಗಣೇಶ ಚತುರ್ಥಿಯು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಬರುತ್ತದೆ. ಕೆಲವು ಮುಂಚಿತವಾಗಿಯೇ ಈ ಹಬ್ಬಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ.

ಪತಿ ರಾಜ್ ಕುಂದ್ರಾ ಮತ್ತು ಮಗ ವಿಯಾನ್ ಕುಂದ್ರಾ ಜೊತೆಯಲ್ಲಿ ಶಿಲ್ಪಾ ಶೆಟ್ಟಿ ಪ್ರತೀ ವರ್ಷ ಹರ್ಷಚಿತ್ತದಿಂದ ಗಣೇಶನನ್ನು ಸ್ವಾಗತಿಸುತ್ತಾರೆ. ವರ್ಷಕೊಮ್ಮೆ ಬರುವ ಗಣಪತಿ ಹಬ್ಬಕ್ಕಾಗಿ ಜನರು ಕಾತರದಿಂದ ಕಾಯುತ್ತಾರೆ. ಆದರೆ ಈ ಸಲ ಕೊರೋನಾ ಭೀತಿಯಿಂದಾಗಿ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಅದರಲ್ಲೂ ಗಣಪತಿ ಹಬ್ಬ ಎಂದರೆ ಸದಾ ಮುಂದಿರುತ್ತಿದ್ದ ಬಿ-ಟೌನ್​ ಸ್ಟಾರ್​ಗಳೇ ತಮ್ಮ ಮನೆ ಮಟ್ಟಿಗೆ ಹಬ್ಬ ಆಚರಿಸಿದ್ದಾರೆ. ಗಣಪತಿ ಹಬ್ಬವನ್ನು ಬಿ-ಟೌನ್​ ತಾರೆಯರು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸುತ್ತಿದ್ದರು. ಒಬ್ಬರ ಮನೆಗೆ ಮತ್ತೊಬ್ಬ ಸ್ಟಾರ್​ ಭೇಟಿ ಕೊಟ್ಟು, ಹಬ್ಬದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಈ ಸಲ ಎಲ್ಲರೂ ಪುಟ್ಟದಾಗಿ ತಮ್ಮ ತಮ್ಮ ಮನೆಗಳಲ್ಲೇ ಸಂಭ್ರಮಿಸಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಅವರ ಮನೆಯಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದರು. ಆದರೆ ಈ ಸಲ ಮನೆಯಲ್ಲಿ ಕುಟುಂಬದವರೊಂದಿಗೆ ಹಬ್ಬ ಮಾಡಿದ್ದಾರೆ. ಇನ್ನು ಕಳೆದ ವರ್ಷದಷ್ಟು ಅದ್ಧೂರಿತನ ಇಲ್ಲವಾದರೂ ಶಿಲ್ಪಾ ಶೆಟ್ಟಿ ಅವ್ ಮನೆಯಲ್ಲಿ ಪುಟ್ಟದಾದ ಗಣಪನನ್ನು ಪ್ರತಿಷ್ಠಾಪಿಸಲಾಗಿತ್ತು. ಪೂಜೆಯ ನಂತರ ಗಣಪತಿ ವಿಸರ್ಜನೆಯನ್ನೂ ಮನೆಯಲ್ಲೇ ಮಾಡಲಾಯಿತು. ಈ ವೇಳೆ ಶಿಲ್ಪಾ ಶೆಟ್ಟಿ, ತಮ್ಮ ಅತ್ತೆ, ಪತಿ ರಾಜ್​ ಕುಂದ್ರಾ, ಮಗ ಹಾಗೂ ಅಮ್ಮನೊಂದಿಗೆ ಸೇರಿ ಸಖತ್ ಸ್ಟೆಪ್​ ಹಾಕಿದ್ದಾರೆ. ಗಣಪತಿ ವಿಸರ್ಜನೆ ವೇಳೆ ಶಿಲ್ಪಾ ಶೆಟ್ಟಿ ಹಾಗೂ ಅವರ ಕುಟುಂಬದವರು ಮಾಡಿರುವ ಡ್ಯಾನ್ಸಿಂಗ್​ ವಿಡಿಯೋ ಸದ್ಯ ವೈರಲ್ ಆಗಿದೆ. ಇನ್ನು ಮನೆಯಂಗಳದಲ್ಲೇ ನೀರಿನ ಟ್ಯಾಂಕ್​ ಇಟ್ಟು, ಅದರಲ್ಲೇ ಗಣಪತಿ ವಿಸರ್ಜನೆ ಮಾಡಿದ್ದಾರೆ. ಇದೇ ರೀತಿ ಪ್ರತೀ ವರ್ಷವೂ ಕೂಡಾ ಶಿಲ್ಪಾ ಶೆಟ್ಟಿ ಹಾಗೂ ಅವರ ಮನೆಯವರು ಗಣೇಶ ಚತುರ್ಥಿ ಹಬ್ಬದಲ್ಲಿ ಗಣಪತಿ ಕರೆತರುವಾಗ ಮತ್ತು ಗಣಪತಿಯನ್ನು ಕಳುಹಿಸಿಕೊಡುವಾಗಲೂ ಕೂಡಾ ಸಂತಸದಿಂದ ಕುಣಿದು ಡ್ಯಾನ್ಸ್ ಮಾಡುತ್ತಾ ಹಬ್ಬವನ್ನು ಆಚರಣೆ ಮಾಡುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!