ಕಷ್ಟದಲ್ಲಿದ್ದ ರಾಬರ್ಟ್ ಸಿನಿಮಾ ತಂಡಕ್ಕೆ ಮಾಸ್ಟರ್ ಕಿಶನ್ ಏನ್ ಮಾಡಿದ್ರು ಗೊತ್ತೇ

0 0

ಈಗ ಯಾವುದೇ ಸಿನಿಮಾ ನಿರ್ಮಾಣ ಮಾಡಬೇಕಾದರೂ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲೇ ಪ್ಲ್ಯಾನ್ ಮಾಡುತ್ತಿದ್ದಾರೆ ನಿರ್ದೇಶಕರು ಹಾಗೂ ನಿರ್ಮಾಪಕರು. ಈ ಮೂಲಕ ಸ್ಯಾಂಡಲ್‍ವುಡ್ ಸಿನಿಮಾಗಳ ಮಾರುಕಟ್ಟೆಯೂ ವಿಸ್ತರಿಸುತ್ತಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸಹ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಕಾಣಲು ಸಿದ್ಧವಾಗುತ್ತಿದೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರ ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಮುಂಗಡ ಬುಕ್ಕಿಂಗ್ ಓಪನ್ ಆಗಿದ್ದು ಭರ್ಜರಿಯಾಗಿ ಬುಕ್ಕಿಂಗ್ ನಡೆಯುತ್ತಿದೆ. ಇನ್ನು ದರ್ಶನ್ ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ರಾಬರ್ಟ್ ಚಿತ್ರದ ಚಿತ್ರೀಕರಣದ ನೆನಪುಗಳನ್ನು ಹಂಚಿಕೊಂಡರು.

ರಾಬರ್ಟ್ ಚಿತ್ರದಲ್ಲಿ ಅಂಡರ್ ವಾಟರ್ ಸಾಹಸ ದೃಶ್ಯ ಇದ್ದು ಅದನ್ನು ಚಿತ್ರೀಕರಿಸಲು ಚಿತ್ರತಂಡಕ್ಕೆ ಬಹುದೊಡ್ಡ ಸವಾಲು ಎದುರಾಗಿತ್ತು. ಈ ಸಂದರ್ಭದಲ್ಲಿ ರಾಬರ್ಟ್ ಚಿತ್ರ ತಂಡಕ್ಕೆ ನೆರವಾಗಿದ್ದು ಕೇರ್ ಆಫ್ ಫುಟ್ ಪಾತ್ ಖ್ಯಾತಿಯ ಕಿಶನ್ ಮತ್ತು ಆತನ ತಂಡ. ಹೌದು ರಾಬರ್ಟ್ ಚಿತ್ರತಂಡ ಅಂಡರ್ ವಾಟರ್ ಚಿತ್ರೀಕರಣವನ್ನು ಮಾಡದೆ ಕಷ್ಟದಲ್ಲಿದ್ದಾಗ ಅದಕ್ಕೆ ಬೇಕಾದ ಸಲಕರಣೆಗಳನ್ನು ಕಿಶನ್ ಮತ್ತು ಸ್ನೇಹಿತರು ಒದಗಿಸಿ ಅಂಡರ್ ವಾಟರ್ ಶೂಟಿಂಗ್ ನಡೆಯಲು ಸಲಹೆಗಳನ್ನು ನೀಡಿ ಚಿತ್ರೀಕರಣ ಯಶಸ್ವಿಯಾಗುವಂತೆ ಮಾಡಿದರು.

ಇನ್ನೂ ಈ ವಿಷಯವನ್ನು ಸ್ವತಃ ದರ್ಶನ್ ಅವರೇ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿಕೊಂಡು ಕಿಶನ್ ಅವರನ್ನು ಹೊಗಳಿದರು. ನಟ ಕಿಶನ್ ನಟಿಸಿ ನಿರ್ದೇಶಿಸಿದ ಕೇರ್ ಆಫ್ ಫುಟ್’ಪಾತ್-2 ಚಲನಚಿತ್ರವು 2015ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಲ್ಯಾಟರರ್ ವಿಭಾಗದಲ್ಲಿ ಅವಕಾಶ ಪಡೆದುಕೊಂಡಿದೆ. ಹೀಗಾಗಿ ಕಿಶನ್ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.