ದಕ್ಷಿಣ ಭಾರತದ ಚಿತ್ರರಂಗದ ಪಾಲಿಗೆ ಎಂಬತ್ತರ ದಶಕ ಗೋಲ್ಡನ್ ಇಯರ್ಸ್ ಎಂದರೆ ತಪ್ಪಾಗಲಾರದು. ಎಂಬತ್ತರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಲವಾರು ಕಲಾವಿದರು ನಟನೆಯ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ ಅವರಲ್ಲಿ ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ರೂಪಿಣಿ. ನಟನೆಯ ಉತ್ತುಂಗದಲ್ಲಿರುವಾಗಲೇ ಅವರು ಸಿನಿಮಾರಂಗವನ್ನು ತೊರೆಯುತ್ತಾರೆ.

ದಕ್ಷಿಣ ಭಾರತದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದಂತಹ ನಟಿ ರೂಪಿಣಿ ಅವರು ಮೂಲತಹ ಮುಂಬೈ ನವರು ಅವರ ನಿಜವಾದ ಹೆಸರು ಕೋಮಲ್ ಮಹುವಾಕರ್. ಪ್ರಾರಂಭದಲ್ಲಿ ರೂಪಿಣಿ ಅವರಿಗೆ ಸಿನಿಮಾರಂಗಕ್ಕೆ ಬರುವ ಯಾವುದೇ ಆಲೋಚನೆ ಇರಲಿಲ್ಲ. ವಿಧಿಯ ನಿಯಮ ಎನ್ನುವಂತೆ ಅಚಾನಕ್ಕಾಗಿ ಸಾವಿರದ ಒಬ್ಬೈನೂರಾ ಎಪ್ಪತ್ತೈದರಲ್ಲಿ ರಲ್ಲಿ ಮಿಲಿ ಎನ್ನುವ ಹಿಂದಿ ಸಿನಿಮಾದ ಮೂಲಕ ಬಾಲನಟಿಯಾಗಿ ಸಿನಿಮಾರಂಗಕ್ಕೆ ಕಾಲಿಟ್ಟರು.

ಆನಂತರ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರು ಅದರಲ್ಲಿ ಕೂಡ ರೂಪಿಣಿ ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ನಂತರ ದಕ್ಷಿಣ ಭಾರತದ ಸಿನಿಮಾರಂಗ ಅವರನ್ನು ಕೈಬೀಸಿ ಕರೆಯಿತು ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದರು ನಂತರ ತೆಲುಗು ತಮಿಳು ಹಾಗೂ ಮಲಯಾಳಂನ ಹೆಸರಾಂತ ಕಲಾವಿದರ ಜೊತೆ ತೆರೆ ಹಂಚಿಕೊಂಡರು.

ಕನ್ನಡದಲ್ಲಿಯೂ ಸಹ ಜನಪ್ರಿಯತೆಯನ್ನು ಪಡೆದರು. ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಒಲವಿನ ಆಸರೆ ಸಿನಿಮಾಗಾಗಿ ನಿರ್ದೇಶಕರಾದ ಕೆವಿ ಜಯರಾಮ ಅವರು ಹೊಸ ನಾಯಕಿಯ ಹುಡುಕಾಟದಲ್ಲಿದ್ದಾಗ ಆಗತಾನೇ ತಮಿಳು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಂತಹ ರೂಪಿಣಿ ಅವರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರನ್ನೇ ತಮ್ಮ ಸಿನಿಮಾಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಅಂದುಕೊಂಡ ಹಾಗೆ ಒಲವಿನ ಆಸರೆ ಸಿನಿಮಾ ಚೆನ್ನಾಗಿ ಮೂಡಿ ಬರುತ್ತದೆ

ವಿಷ್ಣುವರ್ಧನ್ ಹಾಗೂ ರೂಪಿಣಿ ಅವರ ಜೋಡಿ ಸೂಪರ್ ಹಿಟ್ ಆಯಿತು ನಂತರ ದೇವಾ ಮತ್ತೆ ಹಾಡಿತು ಕೋಗಿಲೆ ನೀನು ನಕ್ಕರೆ ಹಾಲು ಸಕ್ಕರೆ ಇಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ವಿಷ್ಣುವರ್ಧನ್ ಹಾಗೂ ರೂಪಿಣಿ ಅವರ ಜೋಡಿ ಯಶಸ್ಸನ್ನು ಪಡೆಯಿತು. ನಂತರ ಅನಂತ್ ನಾಗ್ ರೆಬೆಲ್ ಸ್ಟಾರ್ ಅಂಬರೀಶ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರಂತಹ ಕನ್ನಡದ ಮೇರು ನಟರೊಂದಿಗೆ ನಟಿಸುವ ಮೂಲಕ ಯಶಸ್ಸನ್ನು ಪಡೆದರು. ದಕ್ಷಿಣ ಭಾರತದ ಭಾರತದ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿ ಇರುವಾಗಲೇ ಮದುವೆಯಾಗುತ್ತಾರೆ.

ಹಾಗೆ ನಿರ್ಧಾರವನ್ನ ತೆಗೆದುಕೊಳ್ಳುವುದಕ್ಕೆ ಕಾರಣ ರೂಪಿಣಿ ಅವರ ತಂದೆ ತಾಯಿಗೆ ಮಗಳು ಬೇಗ ಮದುವೆಯಾಗಬೇಕು ಎನ್ನುವ ಆಸೆ. ಆದರೆ ರೂಪಿಣಿ ಅವರಿಗೆ ಮದುವೆಯಾಗುವ ಇಷ್ಟ ಇರಲಿಲ್ಲ ಹಲವಾರು ಬಾರಿ ಅವರ ತಂದೆ ತಾಯಿ ಮದುವೆ ಪ್ರಸ್ತಾಪವನ್ನು ತೆಗೆದು ಇವರಿಗೆ ಪತ್ರವನ್ನ ಬರೆಯುತ್ತಾರೆ ತಡವಾಗಿ ಮದುವೆಯಾದರೆ ಜನರು ಬೇರೆ ರೀತಿಯಲ್ಲಿ ಮಾತನಾಡುತ್ತಾರೆ ನೀನು ಬೇಗನೆ ಮದುವೆಯಾಗು ಎಂದು ಬರೆದಿರುತ್ತಾರೆ

ತಂದೆ-ತಾಯಿಯವರ ಪತ್ರಕ್ಕೆ ರೂಪಿಣಿ ಯವರು ಉತ್ತರವನ್ನು ನೀಡಿರುವುದಿಲ್ಲ. ರೂಪಿಣಿ ಅವರು ನಟಿಸಿದ್ದ ಪತ್ತಿನ ಪೆಣ್ ಎಂಬ ತಮಿಳು ಸಿನಿಮಾಕ್ಕೆ ಅವರಿಗೆ ಅವಾರ್ಡ್ ಬಂದಿರುತ್ತದೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದು ಮನೆಗೆ ಬಂದರೆ ಅವರ ತಂದೆ-ತಾಯಿ ಮನೆಗೆ ಬಂದಿರುತ್ತಾರೆ. ಮಗಳ ಜೊತೆ ಮಾತನಾಡಿ ಬಲವಂತವಾಗಿ ರೂಪಿಣಿ ಅವರನ್ನು ತಮ್ಮೊಡನೆ ಮುಂಬೈಗೆ ಕರೆದುಕೊಂಡು ಹೋಗಿ ತಾವು ನೋಡಿದ ಹುಡುಗನೊಂದಿಗೆ ಮದುವೆ ಮಾಡುತ್ತಾರೆ.

ಆಗ ರೂಪಿಣಿಯವರ ಕುರಿತು ಒಂದಿಷ್ಟು ಗಾಸಿಪ್ ಗಳು ಹರಿದಾಡಿದ್ದವು. ಅದ್ಯಾವುದಕ್ಕೂ ಗಮನ ಕೊಡದೆ ರೂಪಿಣಿ ಅವರು ತಮ್ಮ ವೈಯಕ್ತಿಕ ಬದುಕಿನ ಕಡೆಗೆ ಗಮನ ಹರಿಸುತ್ತಾರೆ. ರೂಪಿಣಿ ಅವರು ಮದುವೆಯಾಗಿದ್ದ ಹುಡುಗ ವೈದ್ಯರಾಗಿದ್ದರು ಇವರ ತಾಯಿಯೂ ಕೂಡ ಡೆಂಟಿಶಿಯನ್ ಆಗಿದ್ದ ಕಾರಣ ಇವರು ಕೂಡ ವೈದ್ಯಕೀಯ ಶಿಕ್ಷಣವನ್ನು ಪಡೆದು ಡಾಕ್ಟರ್ ಆದರು. ವೈದ್ಯರಾಗಿದ್ದ ಪತಿಗೆ ಸ್ವಂತ ಆಸ್ಪತ್ರೆಯನ್ನು ತೆರೆಯಲು ಸಹಾಯ ಮಾಡುವುದಕ್ಕಾಗಿ ಪತಿ-ಪತ್ನಿ ಇಬ್ಬರೂ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಕೊಂಡರು

ನಂತರ ಅವರ ತಾಯಿ ಅವರಿಗೊಂದು ಸಲಹೆಯನ್ನು ನೀಡುತ್ತಾರೆ. ನೀನು ಈ ಮಟ್ಟಕ್ಕೆ ಬೆಳೆಯುವುದಕ್ಕೆ ಜನರೆ ಕಾರಣ ನೀನು ಜನರಿಗೆ ನೆರವಾಗಬೇಕು ಸಮಾಜದಲ್ಲಿ ಕಷ್ಟದಲ್ಲಿ ಇರುವ ಅದೆಷ್ಟೋ ಜನರಿದ್ದಾರೆ ಅವರಿಗೆ ನಿನ್ನಿಂದ ಸಹಾಯ ಆಗಬೇಕು ಎಂದು ಹೇಳುತ್ತಾರೆ. ತಾಯಿಯ ಮಾತು ಸರಿ ಎನಿಸಿ ರೂಪಿಣಿ ಅವರು ಸ್ಪರ್ಶ ಫೌಂಡೇಶನ್ ನಿರ್ಮಿಸುತ್ತಾರೆ ಈ ಸಂಸ್ಥೆಯ ಮೂಲಕ ಹಲವಾರು ಬಡಜನರಿಗೆ ಸಹಾಯವನ್ನು ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!