Ultimate magazine theme for WordPress.

ನಟಿ ಮೇಘನಾ ರಾಜ್ ಮಗನ ಡಾನ್ಸ್ ಗೆ ಮನಸೋತ ಜನ, ಹೇಗಿದೆ ನೋಡಿ ಕ್ಯೂಟ್ ವೀಡಿಯೊ

0 2

ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಗೂ ಸುಂದರ ನಟಿಯರಲ್ಲಿ ಮೇಘನಾ ರಾಜ್ ಕೂಡ ಒಬ್ಬರು. ಹಿರಿಯ ನಟ ಸುಂದರ್ ರಾಜ್ ಹಾಗೂ ಹಿರಿಯ ನಟಿ ಪ್ರಮಿಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್. ಮೇಘನಾ ರಾಜ್ ಅವರು 1990ರ ಮೇ 3ರಂದು ಬೆಂಗಳೂರಿನಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಮೇಘನಾ ರಂಗಭೂಮಿ ಕಲಾವಿದೆಯಾಗಿ, ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಜೋಕುಮಾರಸ್ವಾಮಿ ಎಂಬ ನಾಟಕದಲ್ಲಿ ತಂದೆ ಸುಂದರ್ ರಾಜ್ ಅವರೊಂದಿಗೆ ನಟಿಸಿದ್ದರು.

ಮೇಘನಾ ಕನ್ನಡ ಚಿತ್ರರಂಗಕ್ಕೆ ಬರುವ ಮುನ್ನವೇ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ ಹೆಸರು ಮಾಡಿದ್ದರು. ಮೇಘನಾ ಹಾಗೂ ಚಿರು ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಗೆಳೆಯರಾಗಿದ್ದ ಇಬ್ಬರು, 2018ರ ಏಪ್ರಿಲ್ 29 ಹಾಗೂ ಮೇ 2ರಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು. ಜೂನ್ 2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಸಾವನ್ನಪ್ಪಿದರು. ತೀವ್ರ ಹೃದಯಾಘಾತಕ್ಕೆ ಒಳಗಾದ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದರು. ಸ್ಯಾಂಡಲ್ ವುಡ್ ಯುವ ನಾಯಕ ನಟ ಆಗಿ ಮಿಂಚುತ್ತಿದ್ದ ನಟ ಚಿರಂಜೀವಿ ಸರ್ಜಾ ಅವರು ಮೂಲತಹ ಕಲಾವಿದರ ಕುಟುಂಬದಿಂದ ಬಂದವರು. ಚಿರಂಜೀವಿ ಸರ್ಜಾ ಅವರು ನಮ್ಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಅಣ್ಣ ಕೂಡ, ಜೊತೆಗೆ ನಟ ಅರ್ಜುನ್ ಸರ್ಜಾ ಅವರ ಅಳಿಯ ಇದು ಎಲ್ಲರಿಗೂ ಗೊತ್ತಿರುವ ವಿಚಾರ.

ಚಿರಂಜೀವಿ ಸರ್ಜಾ ಅವರು ಕನ್ನಡ ಚಿತ್ರರಂಗದಲ್ಲಿ ಅವರದೇ ಆದ ಸಿನಿಮಾಗಳ ಮಾಡುತ್ತಾ ತಕ್ಕಮಟ್ಟಿಗೆ ಅಭಿಮಾನಿಗಳನ್ನು ರಂಜಿಸುತ್ತಾ ಬರುತ್ತಿದ್ದರು. ಜೊತೆಗೆ ಅಷ್ಟೇ ಅಭಿಮಾನಿಗಳನ್ನು ಪ್ರೀತಿ ಮಾಡಿ ಎಲ್ಲರ ಸ್ನೇಹ ಗಳಿಸಿ ಹೆಚ್ಚು ಅಭಿಮಾನಿ ಬಳಗವನ್ನು ಕೂಡ ಹೊಂದಿದಂತಹ ನಟ ಇವರು. ಆದರೆ ವಿಧಿಯಾಟ ನಮ್ಮ ಕೈಯಲ್ಲಿಲ್ಲ, ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣಕ್ಕೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ದೊಡ್ಡ ವಿಷಾದನೀಯ.

ಆಗ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಚಿರಂಜೀವಿ ನಿಧನಕ್ಕೆ ಬರೀ ಕುಟುಂಬಸ್ಥರಷ್ಟೇ ಅಲ್ಲದೇ, ಇಡೀ ಕರುನಾಡೇ ಕಣ್ಣೀರು ಸುರಿಸಿತ್ತು. 2021 ಅಕ್ಟೋಬರ್ 22ರಂದು ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದರು.

ಮೇಘನಾ ತಮ್ಮ ಮಗನಿಗೆ ರಾಯನ್ ರಾಜ್ ಅಂತ ಹೆಸರಿಟ್ಟಿದ್ದಾರೆ. ಸರ್ಜಾ ಫ್ಯಾಮಿಲಿಯ ಕನಸಿನ ಕೂಸಾದ ರಾಯನ್, ಈಗ ಮನೆಯವರೆಲ್ಲರ ಅಚ್ಚುಮೆಚ್ಚು. ಸಾಮಾಜಿಕ ಜಾಲತಾಣಗಳಲ್ಲೂ ರಾಯನ್ ಅಸಂಖ್ಯಾತ ಫ್ಯಾನ್ಸ್ ಹೊಂದಿದ್ದಾರೆ. ನಟ ಚಿರಂಜೀವಿ ಅವರ ಅಗಲಿಕೆ ಇಂದಿಗೂ ಕೂಡ ಹೆಚ್ಚು ನೋವು ನೀಡುತ್ತದೆ. ಅವರ ಪತ್ನಿ ನಟಿ ಮೇಘನಾ ರಾಜ್ ಇದರಿಂದ ಈಗೀಗ ಸ್ವಲ್ಪ ಹೊರಗಡೆ ಬರುತ್ತಿದ್ದಾರೆ. ಮಗನ ಮೂಲಕ ಚಿರಂಜೀವಿ ಅವರ ಅಗಲಿಕೆಯ ನೋವನ್ನು ಕೊಂಚ ಕಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಬಹುದು.

ಚಿರಂಜೀವಿ ಹಾಗೂ ಮೇಘನಾ ರಾಜ್ ಅವರಿಗೆ ಒಬ್ಬ ಪುತ್ರ ಇದ್ದು, ಚಿರಂಜೀವಿ ಅಗಲಿಕೆ ಆಗುತ್ತಿದ್ದಂತೆ ಮಗನ ಮೂಲಕವೇ ಚಿರಂಜೀವಿ ಸರ್ಜಾ ಮತ್ತೆ ಹುಟ್ಟಿಬಂದರು ಎನ್ನಬಹುದು. ಆ ದೇವರು ಒಂದು ಕಸಿದುಕೊಂಡರೂ, ಮತ್ತೊಂದು ಕೊಟ್ಟ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚಿರಂಜೀವಿ ಪುತ್ರ ರಾಯನ್ ಸರ್ಜಾ ಇದೀಗ ಅವರ ತಾಯಿ ಮೇಘನಾ ರಾಜ್ ಅವರ ಜೊತೆ ಪ್ರೀತಿಯಲ್ಲಿಯೇ ಬೆಳೆಯುತ್ತಿದ್ದಾನೆ. ಮದುವೆ ಬಳಿಕವೂ ಮೇಘನಾ ರಾಜ್ ಸಿನಿಮಾದಲ್ಲಿ ಅಭಿನಯಿಸುವುದನ್ನು ಮುಂದುವರೆಸಿದ್ದರು. ಮೇಘನಾ ಅವರ ಅಧಿಕೃತ ಫೇಸ್‌ಬುಕ್ ಪುಟವು 2.5 ದಶಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ಕೇರಳದ ಪ್ರತಿಷ್ಠಿತ ಕೊಚ್ಚಿ ಟೈಮ್ಸ್ ಅತ್ಯಂತ ಅಪೇಕ್ಷಣೀಯ ಮಹಿಳೆ 2015 ಸಮೀಕ್ಷೆಯಲ್ಲಿ ಅವರು ನಂ 19ನೇ ಸ್ಥಾನ ಪಡೆದರು. ಬೆಂಗಳೂರು ಟೈಮ್ಸ್ನ ಅತ್ಯಂತ ಅಪೇಕ್ಷಣೀಯ ಮಹಿಳೆ 2015 ರ ಸಮೀಕ್ಷೆಯಲ್ಲಿ ಮೇಘನಾ ರಾಜ್ 10ನೇ ಸ್ಥಾನದಲ್ಲಿದ್ದಾರೆ. ಮೇಘನಾ ಹಾಗೂ ಚಿರಂಜೀವಿ ಜೋಡಿ ಕೂಡ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿತ್ತು. ಮೇಘನಾ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಇವರಿದೆ 2021ರಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಕೊಚ್ಚಿ ಟೈಮ್ಸ್ ಚಲನಚಿತ್ರ ಪ್ರಶಸ್ತಿ, 2011ರ ಕನ್ನಡದ ಪುಂಡಾ ಚಲನಚಿತ್ರದ ನಟನೆಗೆ ಸುವರ್ಣಾ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ, 2012ರಲ್ಲಿ ದಕ್ಷಿಣ ಭಾರತ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಬ್ಯೂಟಿಫುಲ್ ಚಲನಚಿತ್ರದ ನಟನೆಗೆ ಅತ್ಯುತಮ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಸದ್ಯ ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಡಾನ್ಸ್ ಶೋ ಡಾನ್ಸಿಂಗ್ ಚಾಂಪಿಯನ್ನಲ್ಲಿ ಮೇಘನಾ ರಾಜ್ ಬ್ಯುಸಿಯಾಗಿದ್ದಾರೆ. ಮೊದಲ ಶೋಗೆ ಅತಿಥಿ ಜಡ್ಜ್ ಆಗಿ ಬಂದ ಮೇಘನಾರನ್ನು ಖಾಯಂ ಜಡ್ಜ್ ಆಗಿ ಉಳಿಸಿಕೊಳ್ಳಬೇಕು ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಇದೀಗ ಮೇಘನಾ ಡಾನ್ಸಿಂಗ್ ಚಾಂಪಿಯನ್ನ ಮೂವರು ಜಡ್ಜ್ ಗಳಲ್ಲಿ ಒಬ್ಬರಾಗಿದ್ದಾರೆ.

ಇದೀಗ ರಾಯನ್ ರಾಜ್ ಇದ್ದಕ್ಕಿದ್ದಂತೆ ಡ್ಯಾನ್ಸ್ ಮಾಡಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕ್ಯೂಟ್ ಆಗಿದೆ. ಮೇಘನಾ ರಾಜ್ ಅವರು ಆಗಾಗ ಮಗ ರಾಯನ್ ಅನ್ನು ಸಂದರ್ಶನದಲ್ಲಿ ಮತ್ತು ಕೆಲವೊಂದಿಷ್ಟು ವೇದಿಕೆಯಲ್ಲಿ ಕರೆದುಕೊಂಡು ಬಂದು ಕೆಲ ವಿಚಾರಗಳನ್ನು ಅವರ ಅಭಿಮಾನಿಗಳ ಎದುರು ಹಂಚಿಕೊಳ್ಳುತ್ತಾರೆ. ಇದೀಗ ರಾಯನ್ ಮಾಡಿರುವ ನೃತ್ಯದ ವಿಡಿಯೋ ನೀವು ಕೂಡ ಒಮ್ಮೆ ನೋಡಲೇಬೇಕು.

Leave A Reply

Your email address will not be published.