ಸ್ಯಾಂಡಲ್ ವುಡ್ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿದ್ದಿದ್ಯೋ ಗೊತ್ತಿಲ್ಲ ಇತ್ತೀಚೆಗೆ ಒಳ್ಳೆಯ ಹಾಸ್ಯ ನಟ ನಾಯಕ ನಿರ್ಮಾಪಕರು ಹಾಗೂ ಅನೇಕ ಕಲಾವಿದರನ್ನು ಕಳೆದುಕೊಳ್ಳುತ್ತ ಇದ್ದೇವೆ . ದೇವಲೋಕದಲ್ಲಿ ಇರುವ ಯಮ ರಾಜನಿಗೆ ಭೂಲೋಕದಲ್ಲಿ ಇರುವ ಒಳ್ಳೆಯ ವ್ಯಕ್ತಿಗಳ ಮೇಲೆ ಹೊಟ್ಟೆಕಿಚ್ಚು ಅನಿಸುತ್ತೆ ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಜಯಂತಿ ಸಂಚಾರಿ ವಿಜಯ್ ಚಿರು ಶಿವರಾಂ ಕಲಾ ತಪಸ್ವಿ ರಾಜೇಶ್ ಹೀಗೆ ಹಲವಾರು ಕಲಾವಿದರು ನಮ್ಮನ್ನು ಅಗಲಿದ ನೋವು ಇನ್ನೂ ಹಸಿಯಾಗಿರುವ ಸಮಯದಲ್ಲೇ ಇದೀಗ ಇನ್ನೊಬ್ಬ ಹಾಸ್ಯ ನಟ ಹಾಗೂ ನಟನಾಗಿ ಅಭಿನಯ ಮಾಡಿರುವ ಮೋಹನ್ ಜುನೇಜ ಅವರು ಅನಾರೋಗ್ಯದ ಕಾರಣದಿಂದ ನಮ್ಮನ್ನು ಅಗಲಿದ್ದಾರೆ ಎಂಬುದು ವಿಷಾದನೀಯ ಸಂಗತಿ
ಇವರು ಪ್ರತಿಭಾವಂತ ನಟ ಎಂದರೆ ತಪ್ಪಾಗಲಾರದು

ಯಾವುದೇ ಒಂದು ವಿಷಯವನ್ನು ಕೊಟ್ಟರು ಕೂಡ ಅದನ್ನು ಅರೆದು ಕುಡಿದು ನುಂಗುವಂತಹ ನಟನೆ ಮಾಡುವುದರಲ್ಲಿ ಎತ್ತಿದ ಕೈ ಚಿತ್ರಗಳಲ್ಲಿ ಇವರ ಪಾತ್ರವೂ ಎರಡು ನಿಮಿಷ ಇದ್ದರೂ ಆ ಪಾತ್ರವನ್ನು ಜನರ ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುವುದರಲ್ಲಿ ಚಾಣಕ್ಯ ಇವರು ಗಣೇಶ ಅವರ ಚೆಲ್ಲಾಟ ಶಿವರಾಜ್ ಕುಮಾರ್ ಅವರ ಜೋಗಿ ಮತ್ತು ನಟ ಯಶ್ ಅವರು ಕೆಜಿಎಫ್ ಭಾಗ ಒಂದು ಮತ್ತು ಭಾಗ ಎರಡರಲ್ಲೂ ನಟಿಸಿದ್ದಾರೆ ಇನ್ನೂ ಕೆಜಿಎಫ್ ಒಂದರಲ್ಲಿ ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟಾರ್ ಆದರೆ ಒಬ್ಬನೇ ಬರೊನು ಮ್ಯಾನ್ ಸ್ಟಾರ್ ಎಂಬ ಇವರ ಡೈಲಾಗ್ ಇಂದಿಗೂ ಪ್ರಸಿದ್ದಿ ಪಡೆದಿದೆ ಇನ್ನೂ ಅನೇಕ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ

ಇತ್ತೀಚೆಗೆ ಝೀ ಕನ್ನಡ ಅಲ್ಲಿ ಬರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಹೆಣ್ಣುಮಕ್ಕಳಿಗೆ ತಾಳಿಯ ಮಹತ್ವದ ಕುರಿತು ಅರಿವು ಮೂಡಿಸುವ ಬಗ್ಗೆ ನಟನೆ ಮಾಡಿದ್ದಾರೆ ಹೀಗೆ ಅನೇಕ ಸಿನಿಮಾದಲ್ಲಿ ಹಾಸ್ಯ ನಟನಾಗಿ ನಟನೆ ಮಾಡಿದ್ದು ಇವರ ನಟನೆಗೆ ಅನೇಕ ಪ್ರಶಸ್ತಿ ಲಭಿಸಿದೆ ಅಭಿನಯಕ್ಕೆ ಬರುವ ಮೊದಲು ಹಲವಾರು ಕಷ್ಟದ ಮೆಟ್ಟಿಲುಗಳನ್ನು ಹತ್ತಿ ಬಂದಿದಾರೆ ಛಾಯಾಗ್ರಾಹಕ ಸೆಕ್ಯೂರಿಟಿ ಗಾರ್ಡ್ ಹಾಗೂ ಟೈಲರ್ ಅಂಗಡಿಯಲ್ಲಿ ಕೆಲಸವನ್ನು ಮಾಡಿ ಕೊನೆಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಇನ್ನು ಕೋರೋನ ಕಾಲದಲ್ಲಿ ತಮ್ಮ ಜೀವನ ಸಾಗಿಸಲು ಕಷ್ಟವಾದ ಕಾರಣ ಅವರಿಗೆ ನಟ ಉಪೇಂದ್ರ ಅವರು ಸಹಾಯ ಮಾಡಿದ್ದಾರೆ ಇದನ್ನು ಕೂಡ ಒಮ್ಮೆ ಹೇಳಿಕೊಂಡಿದ್ದಾರೆ

ಇವರು ಬೆಂಗಳೂರು ಉತ್ತರ ಭಾಗದ ತಮ್ಮೇನಹಳ್ಳಿ ಯಲ್ಲಿ ನೆಲೆಸಿದ್ದು ಸುಮಾರು ಬಹಳ ದಿನದಿಂದ ಅನಾರೋಗ್ಯಕ್ಕೆ ತುತ್ತಾಗಿ ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ತನ್ನ ಕೊನೆಯುಸಿರು ಎಳೆದಿದ್ದಾರೆ ಅಕ್ಷಯ ಮತ್ತು ಅಶ್ವಿನ್ ಎಂಬ ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿ ಕುಸುಮ ಹಾಗೂ ತಮ್ಮ ತಾಯಿಯನ್ನು ಬಿಟ್ಟು ಪರಲೋಕಕ್ಕೆ ಯಾತ್ರೆ ಮಾಡಿದ್ದಾರೆ ಹಾಗೂ ತನ್ನ ಕಣ್ಣುಗಳನ್ನು ಕೂಡ ದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕು ನೀಡಿದ್ದಾರೆ

ಇವರ ಅಗಲಿಕೆಯ ವಿಷಯ ಕೇಳಿದ ಕನ್ನಡ ಚಿತ್ರರಂಗಕ್ಕೆ ಅತೀವ ನೋವು ಉಂಟು ಮಾಡಿದೆ ಹಾಗೂ ಕಳೆದ ಎರಡು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾವಿದರನ್ನು ಕಳೆದುಕೊಳ್ಳುತ್ತ ಇದೆ ಮೋಹನ್ ಅವರ ನಿಧನಕ್ಕೆ ಹಲವಾರು ಕಲಾವಿದರು ಸಂತಾಪ ಸೂಚಿಸಿದ್ದಾರೆ ಇನ್ನೂ ಅವರ ಈ ಸಾವನ್ನು ಅವರ ಮನೆಯವರು ಸಹಿಸುವ ಶಕ್ತಿ ನೀಡಲಿ ಎಂದು ನಾವೆಲ್ಲರೂ ಆ ದೇವರಲ್ಲಿ ಪ್ರಾರ್ಥಿಸೋಣ. ಹಾಗೂ ನೇತ್ರದಾನ ಮಾಡಿ ಆದಷ್ಟು ಇನ್ನೊಬ್ಬರ ಬಾಳಿಗೆ ಬೆಳಕು ನೀಡಿ ಪುಣ್ಯ ಪಡೆದುಕೊಳ್ಳಿ ಎಂದು ನಮ್ಮದೊಂದು ಸಣ್ಣ ಮನವಿ.

Leave a Reply

Your email address will not be published. Required fields are marked *