ಬಾಲ್ಯದ ಫೋಟೋದಲ್ಲಿರುವ ಕನ್ನಡದ ಈ ಖ್ಯಾತ ನಟ ಯಾರೆಂದು ಗೇಸ್ ಮಾಡಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಆದಿತ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ಮಾಪಕ. ಇವರು ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬುರವರ ಪುತ್ರ. 2004 ರಲ್ಲಿ ತೆರೆಕಂಡ ಲವ್ ಚಿತ್ರದಿಂದ ತಮ್ಮ ಸಿನಿಪಯಣವನ್ನು ಆರಂಬಿಸಿದರು ನಂತರ ಕೆಲವು ಚಿತ್ರಗಳಲ್ಲಿ ಅಭಿನಯ ಮಾಡಿ 2005 ರಲ್ಲಿ ತೆರೆಕಂಡ ಡೆಡ್ಲಿ ಸೋಮ ಚಿತ್ರದಿಂದ ಬ್ರೇಕ್ ಪಡೆದರು. ಇದಕ್ಕೂ ಮೊದಲು ಕನ್ನಡದ ಎ.ಕೆ.47 ಹಿಂದಿ ರಿಮೇಕ್‌ನಲ್ಲಿ ನಾಯಕನಾಗಿ ನಟಿಸಿದ್ದರು. ತಮ್ಮ ತಂದೆ ನಿರ್ದೇಶಿಸುತ್ತಿದ್ದ ಕೆಲವು ಚಿತ್ರಗಳನ್ನು ಆದಿತ್ಯ ನಿರ್ಮಿಸಿದ್ದಾರೆ. ಇವರ ಸಹೋದರಿ ರಿಷಿಕಾ ಸಿಂಗ್ ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಕ್ರಿಯವಾಗಿದ್ದಾರೆ. ಇಂತಹ ಒಬ್ಬ ಉತ್ತಮ ನಟ ಹಾಗೂ ನಿರ್ಮಾಪಕ ಆದಿತ್ಯ ಅವರ ಜೀವನದ ಬಗ್ಗೆ , ಅವರ ಬಾಲ್ಯದ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡದ ಪ್ರಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರಾಜೇಂದ್ರ ಬಾಬು ಸಿಂಗ್ ಅವರ ಮಗ ನಟ ಆದಿತ್ಯ 2017ರ ನಂತರ ಅವರ ಅಭಿನಯದ ಯಾವ ಸಿನಿಮಾಗಳು ತೆರೆ ಕಾಣಲಿಲ್ಲ. ಆದರೆ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2012 ರಲ್ಲಿ ಬಿಡುಗಡೆ ಆದಂತಹ ಚಿತ್ರಗಳಾದ ವಿಲನ್, ಲವ್, ಆದಿ, ಡೆಡ್ಲಿ ಸೋಮ, ಅಂಬಿ, ಮದನ್, ಅರಸು, ಕ್ಷಣ ಕ್ಷಣ, ಸ್ನೇಹಾನಾ ಪ್ರೀತಿನಾ, ಎದೆಗಾರಿಕೆ, ರೆಬೆಲ್, ಸ್ವೀಟಿ ನನ್ನ ಜೋಡಿ’ ಮುಂತಾದ ಸಿನಿಮಾಗಳಲ್ಲಿ ಆದಿತ್ಯ ನಟಿಸಿದ್ದಾರೆ. ಆದಿತ್ಯ ನಿರ್ಮಿಸಿದ ಮುಂಗಾರಿನ ಮಿಂಚು ಚಿತ್ರಕ್ಕೆ ಪ್ರಶಸ್ತಿ ಬಂದಿದ್ದು ಈ ಚಿತ್ರವನ್ನು ನಿರ್ಮಿಸಿದಾಗ ಆದಿತ್ಯ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಒಂದು ಸಿನಿಮಾ ನಿರ್ಮಾಣ ಮಾಡಿ ಅದಕ್ಕೆ ಪ್ರಶಸ್ತಿಯನ್ನೂ ಗಳಿಸಿದ ಹೆಮ್ಮೆ ಇವರದ್ದು.

ಸ್ನೇಹಾನಾ ಪ್ರೀತಿನಾ, ಚಕ್ರವರ್ತಿ ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆದಿತ್ಯ ನಟಿಸಿದ್ದರು. ಹಾಗೆ ಕ್ಷಣ ಕ್ಷಣ ಸಿನಿಮಾದಲ್ಲಿ ವಿಷ್ಣುವರ್ದನ್ ಅವರ ಜೊತೆಗೂ , ಅರಸು ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಆದಿತ್ಯ ಅಭಿನಯದ ಈಗಿನ ಚಿತ್ರ ಹೆಸರೇ ಹೇಳುವಂತೆ ‘ಮುಂದುವರೆದ ಅಧ್ಯಾಯ’ . ಈ ಸಿನಿಮಾದಲ್ಲಿ ಆಶಿಕಾ ಗೌಡ, ಸಂದೀಪ್, ಜೈ ಜಗದೀಶ್ ಕೂಡ ಅಭಿನಯಿಸಿದ್ದಾರೆ. ಅನೂಪ್ ಸೀಳಿನ್ ಇದಕ್ಕೆ ಉತ್ತಮವಾದ ಹಿನ್ನಲೆ ಸಂಗೀತ ನೀಡಿದ್ದಾರೆ. ಮಾಸ್ ಅಂಡ್ ಕ್ಲಾಸ್ ಸಿನಿಮಾಗಳ ಮೂಲಕ ತೆರೆಮೇಲೆ ಅಬ್ಬರಿಸಿದ್ದ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ‘ಮುಂದುವರೆದ ಅಧ್ಯಾಯ’ ಸಿನಿಮಾದ ಮೂಲಕ ಮತ್ತೆ ಹಿಂದಿರುಗಿದ್ದಾರೆ. ಆದರೆ ಈ ಬಾರಿ ಅವರು ಕೈಯಲ್ಲಿ ಲಾಂಗ್ ಹಿಡಿದಿಲ್ಲ. ಬದಲಾಗಿ ಸ್ಪೆಷಲ್ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

‘ಮುಂದುವರೆದ ಅಧ್ಯಾಯ’ದ ಬಳಿಕ ಆದಿತ್ಯ ಅಭಿನಯದ ಇನ್ನೆರಡು ಚಿತ್ರಗಳೂ ಕೂಡ ಈ ವರ್ಷ ಬಿಡುಗಡೆಯಾಗಲಿವೆ. ಜನರು ತನ್ನ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ ಹಾಗೂ ಮುಂದುವರೆದ ಅಧ್ಯಾಯ ಚಿತ್ರದ ಟ್ರೈಲರ್ ನ ಯಶಸ್ಸೇ ಇದಕ್ಕೆ ಉದಾಹರಣೆಯಾಗಿದೆ. ಟ್ರೈಲರ್ ನೋಡಿದ ಜನರು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ ನಟ ಹಾಗೂ ನಿರ್ಮಾಪಕ ಆದಿತ್ಯ. ಆದಿತ್ಯ ಅವರ ಬಾಲ್ಯ ಜೀವನದ ಕೆಲವು ಫೋಟೋಗಳನ್ನು ಇಲ್ಲಿ ಕಾಣಬಹುದು.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *