ಅಭಿಷೇಕ್ ಅಂಬರೀಷ್ ಅವರ ಸಂಗಾತಿ, ಅವಿವಾ ಬಿದ್ದಪ್ಪ ಅವರ ಅಸಲಿ ವಯಸ್ಸು ಎಷ್ಟು ಗೊತ್ತಾ

0 173

abhishek ambareesh and avivaa biddappa : ಚಂದನವನದಲ್ಲಿ ಇದೀಗ ಮತ್ತೊಂದು ಶುಭ ಸುದ್ದಿ ಕೇಳಿ ಬರುತ್ತಿದೆ ಇತ್ತೀಚಿಗೆ ನಟ ಅಭಿಷೇಕ್ ಅಂಬರೀಶ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ ಎಂಬ ಸುದ್ದಿ ಇದೀಗ ಎಲ್ಲಡೆ ಹರಿದಾಡುತ್ತಿದೆ ಕೆಲವು ದಿನಗಳ ಹಿಂದೆ ನಟ ವಶಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಇತರ ಬೆನ್ನಲ್ಲೇ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡರು.

ಸಾಕಷ್ಟು ಜನರಿಗೆ ಈ Avivaa biddapa ಅವಿವಾ ಬಿದ್ದಪ್ಪ ಎನ್ನುವ ಹೆಸರನ್ನ ಎಲ್ಲಿಯೂ ಕೇಳಿದಂತೆ ಇಲ್ಲ ಹಾಗೆಯೇ ಇವರ ನಿಶ್ಚಿತಾರ್ಥದ ಸುದ್ದಿ ಕೂಡ ಎಲ್ಲಿಯೂ ವೈರಲ್ ಆಗಿರಲಿಲ್ಲ. ಅವಿವಾ ಬಿದ್ದಪ್ಪ ಪ್ರಸಾದ್ ಬಿದ್ದಪ್ಪ ಅವರ ಮಗಳು ಪ್ರಸಾದ್ ಬಿದ್ದಪ್ಪ ಸಾಮಾನ್ಯ ವ್ಯಕ್ತಿಯಲ್ಲ ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಹೆಸರನ್ನ ಮೂಡಿಸಿದಂತಹ ಪ್ರಖ್ಯಾತ ಪ್ಯಾಶನ್ ಡಿಸೈನರ್. ಬಾಲಿವುಡ್ ಸ್ಯಾಂಡಲ್ವುಡ್ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಸಾಕಷ್ಟು ಹೆಸರನ್ನ ಗಳಿಸಿದಂತವರು ಹಾಗೆ ಹಲವಾರು ಫ್ಯಾಷನ್ ಇವೆಂಟ್ ಗಳನ್ನು ಕೂಡ ಆಯೋಜನೆ ಮಾಡಿದ್ದಾರೆ.

ನೂರಾರು ಕೋಟಿಯ ಒಡೆಯನಾಗಿದ್ದ ಈ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಇವಳು ಕೂಡ ತಂದೆಯ ರೀತಿಯಲ್ಲಿಯೇ ಫ್ಯಾಷನ್ ಲೋಕದಲ್ಲಿ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದಾರೆ ಉದ್ಯಮ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಈಕೆಯು ಕೂಡ ಅಪಾರ ಆಸ್ತಿಗೆ ಒಡತಿಯಾಗಿದ್ದಾಳೆ.

ಇನ್ನು abhishek ambarish and avivaa biddappa ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರದ್ದು ಮೂರು ನಾಲ್ಕು ವರ್ಷಗಳ ಹಿಂದಿನ ಪರಿಚಯ ಹಾಗೆ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು ಆದರೆ ಈ ವಿಚಾರದ ಬಗ್ಗೆ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ ಅಥವಾ ಯಾವುದೇ ಕಾರ್ಯಕ್ರಮದಲ್ಲಿ, ಯಾವುದೇ ಸ್ಥಳದಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಈಗ ಅವರ ವಿಷಯವನ್ನ ಕುಟುಂಬಸ್ಥರೊಂದಿಗೆ ಹಂಚಿಕೊಂಡು ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ

ಎರಡು ಪ್ರತಿಷ್ಠಿತ ಕುಟುಂಬಗಳು ಆಗಿರುವ ಕಾರಣಕ್ಕಾಗಿ ಈ ಮದುವೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ ಅವಿವಾ ವಿದ್ದಪ್ಪ ಇವರು ಅಭಿಷೇಕ್ ಅಂಬರೀಶ್ ಅವರಿಗಿಂತ 3 ವರ್ಷ ವಯಸ್ಸಿನಲ್ಲಿ ಹಿರಿಯರು ಇದು ಅವರ ವಿಷಯದಲ್ಲಿ ಅಂತಹ ದೊಡ್ಡ ಸಮಸ್ಯೆ ಏನಲ್ಲ. ಅಭಿಷೇಕ್ ಅಂಬರೀಶ್ ಹಾಗೆ ಅವಿವಾ ಬಿದ್ದಪ್ಪ ಇತ್ತೀಚಿಗೆ ಖಾಸಗಿ ಹೋಟೆಲ್ ಒಂದರಲ್ಲಿ ಕುಟುಂಬಸ್ಥರು ಹಾಗೂ ಆಪ್ತರೊಂದಿಗೆ ಸೇರಿ Engagement ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ Marriage ಮದುವೆ ಕೂಡ ಆಗಲಿದ್ದಾರೆ ಆದರೆ ಪ್ರತಿಯೊಬ್ಬರಲ್ಲಿಯೂ ಕಾಡುತ್ತಿರುವ ಕುತೂಹಲ ಎಂದರೆ ಯಾರೂ ಕೂಡ ಈ ವಿಷಯದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಎಲ್ಲವನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದರು ಎನ್ನುವುದಾಗಿದೆ.

ಅಭಿಷೇಕ್ ಅಂಬರೀಶ್ ಅವರು ಈಗೀಗ ಹಲವಾರು ಹೊಸ ಚಿತ್ರಗಳಲ್ಲಿ ನಿರತರಾಗಿರುತ್ತಾರೆ. ಹಾಗೆ ಸುಮಲತಾ ಅಂಬರೀಶ್ ಸದಾ ರಾಜಕೀಯದಲ್ಲಿ ಕಾರ್ಯನಿರತರಾಗಿರುತ್ತಾರೆ ಹೀಗಿರುವಾಗ ಇವರ ನಿಶ್ಚಿತಾರ್ಥದ ಸುಳಿವು ಯಾರಿಗೂ ಕೂಡ ಸಿಗಲಿಲ್ಲ. ಅಂತೆಯೇ ಇವರ ನಿಶ್ಚಿತಾರ್ಥಕ್ಕೆ ಕುಟುಂಬದ ಸದಸ್ಯರು ಮತ್ತು ಆಪ್ತರಿಗೆ ಮಾತ್ರ ಆಗಮನಕ್ಕೆ ಅವಕಾಶ ನೀಡಲಾಗಿತ್ತು ಹೀಗೆ ನಿಶ್ಚಿತಾರ್ಥವನ್ನ ಗುಟ್ಟಾಗಿಡಲು ಮುಖ್ಯ ಕಾರಣವೆಂದರೆ ಒಬ್ಬ ಸೆಲೆಬ್ರಿಟಿ ಎಂದ ಮೇಲೆ ಅವರ ನಿಶ್ಚಿತಾರ್ಥದ ಅಥವಾ ವಿವಾಹದ ಸುದ್ದಿ ಹರಿದಾಡುತ್ತಿದ್ದಂತೆಯೇ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಡವಾದ ವಿಷಯಗಳ ಬಗ್ಗೆ ಸುದ್ದಿಗಳು ಹರಿದಾಡುವುದು ಹೆಚ್ಚಾಗಿ ಕಂಡುಬರುತ್ತವೆ. ಇದರಿಂದ ಇರುವ ಸಂಬಂಧಗಳು ಹಾಳಾಗುತ್ತವೆ ಇದೇ ಕಾರಣದಿಂದಾಗಿ ಸೆಲೆಬ್ರಿಟಿಗಳು ಇವುಗಳಿಗೆ ಭಯಪಡಬೇಕಾದ ಪರಿಸ್ಥಿತಿ ಒದಗಿದೆ.

abhishesk ambarish and avivaa biddappa

ಇತ್ತೀಚಿಗೆ ವೈಷ್ಣವಿ ಗೌಡ ಅವರ ವಿಚಾರದಲ್ಲಿಯೂ ಕೂಡ ನಿಶ್ಚಿತಾರ್ಥ ಆದ ನಂತರ ಮದುವೆಯವರೆಗೂ ಬಂದು ಅದು ಮುರಿದು ಬಿತ್ತು ಹೀಗಾಗಿ ಈ ವಿಷಯವನ್ನು ನಟ ಅಭಿಷೇಕ್ ಅಂಬರೀಶ್ ಮನೆಯವರು ಗುಟ್ಟಾಗಿಟ್ಟಿದ್ದರು ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಇಬ್ಬರು ಕೂಡ ಚಿತ್ರರಂಗಕ್ಕೆ ಸಂಬಂಧಿಸಿದವರಾಗಿದ್ದರಿಂದ ಸ್ವಲ್ಪ ಯೋಚಿಸಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ.

ಇನ್ನು ಇದರ ಬಗ್ಗೆ ಅಭಿಮಾನಿಗಳಿಂದ ಕೆಲವು ಪ್ರತಿಕ್ರಿಯೆಗಳು, ಹೊರಬೀಳುತ್ತಿವೆ ಅಭಿಷೇಕ್ ಅಂಬರೀಶ್ ಅವರು ರಾಜಕೀಯದ ಪ್ರಚಾರದ ಸಂದರ್ಭದಲ್ಲಿ ಮಂಡ್ಯದ ಹುಡುಗಿಯನ್ನೇ ಮದುವೆಯಾಗುತ್ತೇನೆ ಎಂಬ ಮಾತನ್ನು ಹೇಳಿದರಂತೆ ಈಗ ಆ ಮಾತು ಮರೆತು ಹೋದಂತೆ ಕಾಣುತ್ತಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಂತೆಯೇ ನಿಮ್ಮ ಸಿನಿಮಾಗಳ ಯಶಸ್ಸಿಗೆ ಅಥವಾ ಚುನಾವಣೆಯಲ್ಲಿ ವೋಟು ನೀಡುವುದಕ್ಕೆ ಅಭಿಮಾನಿಗಳ ಸಹಕಾರ ಬೇಕು ಇಂತಹ ಸಿಹಿಯ ವಿಚಾರ ಹಂಚಿಕೊಳ್ಳುವುದಕ್ಕೆ ಈಗ ಅಭಿಮಾನಿಗಳ ಅವಶ್ಯಕತೆ ನಿಮಗೆ ಇಲ್ಲವೆನಿಸಿದೆ ಎನ್ನುವಂತಹ ಹಲವಾರು ಪ್ರಸ್ತಾವನೆಗಳನ್ನ ನೀಡಿದ್ದಾರೆ.

Leave A Reply

Your email address will not be published.