ABD ಡಾ ರಾಜ್ ಕುಮಾರ್ ಅವರ ಬಗ್ಗೆ ಕನ್ನಡದಲ್ಲಿ ಮಾತಾಡಿದ್ದು ಹೀಗೆ

0 0

ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾವಿದರುಗಳು ಜನರನ್ನು ರಂಜಿಸಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗವನ್ನು ಹೆಸರುವಾಸಿಯಾಗಿಸಿದ್ದಾರೆ. ಅದರಲ್ಲಿ ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಅಂತಹ ಮೇರು ನಟರು ಕನ್ನಡ ಚಿತ್ರರಂಗವನ್ನು ಗಟ್ಟಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎನ್ನಬಹುದು. ಡಾಕ್ಟರ್ ರಾಜಕುಮಾರ್ ಅವರು ಅಪಾರ ಅಭಿಮಾನಿಗಳನ್ನು ತಮ್ಮ ನಟನೆಯ ಜೊತೆಗೆ ಅವರ ವಿನಯತೆಯ ಮೇಲೆ ಗಳಿಸಿಕೊಂಡಿದ್ದಾರೆ. ಅವರು ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ. ಒಬ್ಬ ಮಹಾನ್ ವ್ಯಕ್ತಿಯನ್ನು ಕ್ರಿಕೆಟ್ ಜಗತ್ತು ಕಂಡ ಅದ್ಬುತ ಆಟಗಾರರರಲ್ಲಿ ಏ.ಬಿ.ಡಿ. ವಿಲಿಯರ್ಸ್ ಕೂಡ ಒಬ್ಬರು. ಇವರು ಅಪಾರ ಅಭಿಮಾನಿಗಳನ್ನು ಹೊಂದಿರುವ ದಕ್ಷಿಣಆಪ್ರಿಕಾದ ಆಟಗಾರ. ಎಬಿಡಿ ವಿಲಿಯರ್ಸ್ ಐಪಿಎಲ್ ಆಟದಲ್ಲಿ ಬೆಂಗಳೂರು ತಂಡದ ಪರವಾಗಿ ಆಡುವಂತ ಆಟಗಾರ ಆಗಿದ್ದಾರೆ.

ಎಬಿಡಿ ವಿಲಿಯರ್ಸ್ ಏಕದಿನ ಹಾಗೂ 20-20 ಪಂದ್ಯಗಳಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕನಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು. ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. ಈತ ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಾರೆ. ಮೊದಮೊದಲು ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಈತ ಕೆಲವೊಮ್ಮೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಈತ ವಿಶ್ವದ ಅತ್ತ್ಯುತ್ತಮ ಕ್ಷೇತ್ರ ರಕ್ಷಕರಲ್ಲಿ ಒಬ್ಬರು.

ಎಬಿಡಿ ವಿಲಿಯರ್ಸ್ ಐಸಿಸಿ ರಾಂಕಿಂಗ್‍ನ ಟೆಸ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಏಕದಿನ ಪಂದ್ಯದ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಕ್ರಿಕೆಟ್ ಹೊರತು ಪಡಿಸಿ ಗಾಲ್ಫ್, ರಗ್ಬಿ ಮತ್ತು ಟೆನ್ನಿಸ್ ಆಟಗಳಲ್ಲಿಯು ಅವರಿಗೆ ಅಸಕ್ತಿ ಇದ್ದು ಅನೇಕ ಪಂದ್ಯಗಳನ್ನು ಆಡಿದ್ದರು. ಇಂತಹ ಬೇರೆ ದೇಶದ ವ್ಯಕ್ತಿಗಳು ಕೂಡ ಕನ್ನಡ ಚಿತ್ರರಂಗದ ಮೇಲೆ ಅಭಿಮಾನ ತೋರಿಸುವಷ್ಟು ಕನ್ನಡದ ನಟರುಗಳು ಜನಪ್ರಿಯರಾಗಿದ್ದಾರೆ. ರಾಜಕುಮಾರ್ ಜೊತೆ ಗೂಡಿ ಅನೇಕ ಅದ್ಬುತ  ಕನ್ನಡ ನಟರುಗಳು ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಎ ಬಿ ಡಿ ಅವರು ಡಾಕ್ಟರ್ ರಾಜಕುಮಾರ ಅವರ ಹಾಡನ್ನು ಹೇಳಿ ಅವರು ಅದ್ಬುತವಾದ ವ್ಯಕ್ತಿ ಮತ್ತು ಸರಳತೆಯ ಮನುಷ್ಯ ಎಂದು ಹೊಗಳಿದ್ದಾರೆ. ಅವರ ಜೊತೆಗೆ ಅಂಬರೀಷ್ ಉಪೇಂದ್ರರವರನ್ನು ನೆನಪಿಸಿಕೊಂಡು ಅವರನ್ನು ಹೊಗಳಿದ್ದಾರೆ.

Leave A Reply

Your email address will not be published.