ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ನಾವು ಕಾಣ ಬಹುದಾದ ಒಂದು ಸಮಸ್ಯೆ ಎಂದರೆ ಅದು ಗೊರಕೆ ಹೊಡೆಯುವುದು ಹೌದು ಇಂದಿನ ಬಹುತೇಕ ಜನಗಳಲ್ಲಿ ನಾವು ಈ ಗೊರಕೆ ಸಮಸ್ಯೆ ಯನ್ನು ಗುರುತಿಸಬಹುದಾಗಿದೆ ಪಕ್ಕದಲ್ಲಿರುವ ವ್ಯಕ್ತಿಯು ಗೊರಕೆ ಹೊಡೆಯುತ್ತಿದ್ದರೆ ಆತನ ಪಕ್ಕದಲ್ಲಿ ಮಲಗಿರುವ ವ್ಯಕ್ತಿಗೆ ನಿದ್ರೆ ಬರುವುದಿಲ್ಲ ಆದರೆ ಗೊರಕೆ ಹೊಡೆಯುತ್ತಿರುವ ವ್ಯಕ್ತಿ ಮಾತ್ರ ಆರಾಮವಾಗಿ ನಿರಾಯಾಸವಾಗಿ ನಿದ್ರೆಯಲ್ಲಿ ತಲ್ಲೀನನಾಗಿರುತ್ತಾನೆ, ಇಂದಿನ ಆಧುನಿಕತೆಗೆ ಒಗ್ಗಿಕೊಂಡಂತೆ ಜನರಲ್ಲಿರುವ ಮಾನಸಿಕ ಒತ್ತಡಕ್ಕೊ ಅಥವಾ ಬೆಳಿಗ್ಗೆ ಹೆಚ್ಚು ಹೊತ್ತು ಕೆಲಸ ಮಾಡಿ ಧಣಿದಿರುವ ಕಾರಣದಿಂದಲೋ ಗಾಡ ನಿದ್ರೆಯಲ್ಲಿ ಜಾರುವುದರಿಂದಲೋ ಇಲ್ಲ ತಾವು ಸೇವಿಸುತ್ತಿರುವ ಔಷಧಿಗಳಿಂದಲೋ ಗೊರಕೆ ಹೊಡೆಯುವುದು ಜನರಲ್ಲಿ ಸಾಮಾನ್ಯವಾಗಿದೆ. ಅಂತಹ ಗೊರಕೆ ಹೊಡೆಯುವುದನ್ನು ನಿಲ್ಲಿಸಲು ಕೆಲವೊಂದು ಸುಲಭ ಮನೆ ಮದ್ಧುಗಳನ್ನು ಉಪಯೋಗಿಸಬಹುದಾಗಿದೆ ಹಾಗಾದ್ರೆ ಆ ಕುರಿತ ಒಂದಷ್ಟು ಮಾಹಿತಿಯನ್ನು ನೀಡುತ್ತೇವೆ ಬನ್ನಿ
ಮೊದಲನೆಯ ಮನೆಮದ್ದು ಸ್ವಲ್ಪ ಎಲಕ್ಕಿಯನ್ನು ಪುಡಿ ಮಾಡಿ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನೊಂದಿಗೆ ಒಂದು ಚಮಚ ಏಲಕ್ಕಿ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ನಿಮ್ಮ ಗೊರಕೆಯು ನಿಯಂತ್ರಣಕ್ಕೆ ಬರುವುದು ಅಲ್ಲದೇ ಸಮಯ ಸಿಕ್ಕಾಗಲೆಲ್ಲಾ ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಗೊರಕೆಯು ಶಾಶ್ವತವಾಗಿ ನಿಮ್ಮಿಂದ ದೂರಗುವುದು
ಎರಡನೆಯ ಮನೆಮದ್ದು ಒಂದು ಚಮಚ ಜೇನುತುಪ್ಪದೊಂದಿಗೆ ಒಂದು ಚಮಚ ಆಲೀವ್ ಆಯಿಲ್ ಅನ್ನು ಸೇರಿಸಿ ರಾತ್ರಿ ಮಲಗುವ ಸಮಯದಲ್ಲಿ ಸೇವಿಸುತ್ತಾ ಬಂದರೆ ಗೊರಕೆ ಹೊಡೆಯುವುದನ್ನು ಕಡಿಮೆ ಮಾಡಿಕೊಳ್ಳಬಹುದು ಜೊತೆಗೆ ನೆಮ್ಮದಿಯ ನಿದ್ರೆಯನ್ನು ಮಾಡಬಹುದಾಗಿದೆ.
ಮೂರನೆಯ ಮನೆಮದ್ದು ರಾತ್ರಿ ಮಲಗುವ ಸಮಯದಲ್ಲಿ ಮುಖವನ್ನು ಮೇಲ್ಮುಖವಾಗಿ ಮಾಡಿಕೊಂಡು ಮಲಗುವ ಬದಲು ಬಲಗಡೆ ಪಕ್ಕಕೆ ಅಥವಾ ಎಡಗಡೆ ಪಕ್ಕಕೆ ತಿರುಗಿಕೊಂಡು ಮಲಗುವುದರಿಂದ ನೀವು ಗೊರಕೆ ಹೊಡೆಯುವುದನ್ನು ಕಡಿಮೆ ಮಾಡಿಕೊಳ್ಳಬಹುದು ಅಷ್ಟೇ ಅಲ್ಲದೇ ಸಾಮಾನ್ಯವಾಗಿ ನೀವು ಬಳಸುವ ದಿಂಬಿಗಿಂತ ಸ್ವಲ್ಪ ಎತ್ತರದ ದಿಂಬನ್ನು ನಿಮ್ಮ ತಲೆ ಕೆಳಗೆ ಹಾಕಿಕೊಂಡು ಮಲಗುವುದರಿಂದಲೂ ಸಹ ನಿಮ್ಮ ಗೊರಕೆಯನ್ನು ನಿಯಂತ್ರಣದಲ್ಲಿ ಇಡಬಹುದು
ನಾಲ್ಕನೆಯ ಮನೆಮದ್ದು ರಾತ್ರಿ ಮಲಗುವ ಸಮಯದಲ್ಲಿ ಸ್ವಲ್ಪವೇ ಅವಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿಯುತ್ತಾ ನಿದ್ರೆಗೆ ಜಾರುವುದರಿಂದ ಗೊರಕೆಯು ಬರುವುದಿಲ್ಲ, ಅಲ್ಲದೇ ರಾತ್ರಿ ಮಲಗುವ ಮುನ್ನ ಟೀ ಕುಡಿದು ಮಲಗುವುದರಿಂದಲೂ ಸಹ ಗೊರಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ. ನಾವು ಈ ಮೇಲೆ ಹೇಳಲಾಗಿರುವ ನಾಲ್ಕು ಪರಿಹಾರ ಕ್ರಮಗಳಲ್ಲಿ ಯಾವುದಾದರೂ ಒಂದು ಪರಿಹಾರ ಕ್ರಮವನ್ನಾದರೂ ಸಹ ಅನುಸರಿಸಿ ನೀವು ಗೊರಕೆ ಹೊಡೆಯುವುದರಿಂದ ಮುಕ್ತರಾಗಬಹುದು.