ಕನ್ನಡ ಚಿತ್ರರಂಗದ ಮೇರು ನಟ ಟೈಗರ್ ಪ್ರಭಾಕರ್ ಅವರ ಫೈಟ್ ಅಂದರೆ ಎಲ್ಲರಿಗೂ ಬಹಳ ಇಷ್ಟ. ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಜನರ ಮನಸಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ವ್ಯಕ್ತಿತ್ವ, ಜೀವನ ಹಾಗೂ ಸಿನಿಮಾ ಕಥೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಿರ್ದೇಶಕ ಜೋ ಸೈಮನ್ ಅವರು ಟೈಗರ್ ಪ್ರಭಾಕರ್ ಅವರೊಂದಿಗೆ ಕೆಲಸ ಮಾಡಿದ್ದರು, ಅವರು ಪ್ರಭಾಕರ ಅವರ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಪ್ರಭಾಕರ್ ಅವರು ಕಾಡಿನ ರಾಜ ಸಿನಿಮಾದಲ್ಲಿ ನಟಿಸಿದ ನಂತರ ಪ್ರೀಮಿಯರ್ ಸ್ಟುಡಿಯೋದಲ್ಲಿ ಪರಿಚಯವಾದರು ಜೋ ಸೈಮನ್ ಅವರಾಗೇ ಪ್ರಭಾಕರ್ ಅವರನ್ನು ಮಾತನಾಡಿಸುತ್ತಾರೆ ಪರಿಚಯವಾಯಿತು ನಂತರ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ, ಪ್ರಭಾಕರ್ ಅವರಿಗೆ ಕನ್ನಡ ಬರುತ್ತಿರಲಿಲ್ಲ ಅವರಿಗೆ ಸಿನಿಮಾಗಳಲ್ಲಿ ಡೈಲಾಗ್ ಹೇಳುವುದೆಂದರೆ ಕಷ್ಟ ಫೈಟ್ ಮಾಡುವುದೆಂದರೆ ಇಷ್ಟವಿತ್ತು.
ಜೋ ಸೈಮನ್ ಅವರು ಪ್ರಭಾಕರ್ ಅವರಿಗೆ ಡೈಲಾಗ್ ಹೇಳುವುದು, ಕನ್ನಡ ಕಲಿಸುತ್ತಾರೆ ನಂತರ ಸಹೋದರರ ಸವಾಲ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಜೋ ಸೈಮನ್ ಅವರಿಗೆ ಕ್ಲೋಸ್ ಆದರು. ಜೋ ಸೈಮನ್ ಅವರ ಎಲ್ಲ ಸಿನಿಮಾಗಳಲ್ಲಿ ಪ್ರಭಾಕರ್ ಅವರು ನಟಿಸಿದರು. ಜಯಮಾಲಾ ಅವರೊಂದಿಗೆ ಕ್ಲೋಸ್ ಆಗಿದ್ದರು ನಂತರ ಜೋ ಸೈಮನ್ ಅವರ ಹತ್ತಿರ ಜಯಮಾಲಾ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳಿದರು ನಂತರ ಜಯಮಾಲಾ ಅವರನ್ನು ಮದುವೆಯಾದರು. ಅವರಿಗೆ ಒಬ್ಬಳು ಮಗಳಿದ್ದಾಳೆ ಅವಳ ಹೆಸರು ಸೌಂದರ್ಯ. ಸ್ವಲ್ಪ ದಿನದ ನಂತರ ಜಯಮಾಲಾ ಅವರು ಬೇರೆಯಾದರು. ಪ್ರಭಾಕರ್ ಅವರ ಮನಸ್ಸು ಮಗುವಿನಂತ ಮನಸ್ಸು ಬಹಳ ಮೃದು ಸ್ವಭಾವದವರು. ಜಯಮಾಲಾ ಅವರು ಪ್ರಭಾಕರ್ ಅವರನ್ನು ಬಿಟ್ಟು ಹೋದಾಗ ಪ್ರಭಾಕರ್ ಅವರು ಅತ್ತಿದ್ದರು ಆಗ ಜೋ ಸೈಮನ್ ಸಮಾಧಾನ ಮಾಡಿದ್ದರು.
ಅವರು ಚೆನ್ನೈನಲ್ಲಿ ಇರುವಾಗ ಕಾಲಿನ ನರದ ಆಪರೇಷನ್ ಮಾಡುವಾಗ ಸರಿಯಾಗಿ ಆಪರೇಷನ್ ಮಾಡದೆ ಓಪನ್ ಆಗಿಬಿಟ್ಟಿದೆ ಅವರು ಅದನ್ನು ಯಾರಿಗೂ ತೋರಿಸುತ್ತಿರಲಿಲ್ಲ ಬ್ಯಾಂಡೇಜ್ ಸುತ್ತಿಕೊಳ್ಳುತ್ತಿದ್ದರು. ಪ್ರಭಾಕರ್ ಅವರ Mr. ವಾಸು ಎಂಬ ಹೊಸ ಸಿನಿಮಾ ಮಾಡುವಾಗ ಹೀರೋಯಿನ್ ಹಾಗೂ ನಿರ್ಮಾಪಕರಿಗೆ ಜಗಳವಾಗಿ ಸಿನಿಮಾ ಶೂಟಿಂಗ್ ಅರ್ಧದಲ್ಲಿ ನಿಂತುಹೋಯಿತು. ಆಗ ಜೋ ಸೈಮನ್ ಅವರು ಡಾಲಿ ಎಂಬವರನ್ನು ಹೀರೋಯಿನ್ನಾಗಿ ಕರೆತಂದು ಸಿನಿಮಾ ಮಾಡಲಾಯಿತು ಅದು ಹಿಟ್ಟಾಯಿತು.
ಪ್ರಭಾಕರ್ ಅವರು ಕೆಲವು ಸಿನಿಮಾಗಳನ್ನು ಡೈರೆಕ್ಟ್ ಮಾಡಿದರು. ನಂತರದ ದಿನಗಳಲ್ಲಿ ಪ್ರಭಾಕರ್ ಅವರ ಆರೋಗ್ಯ ಏರುಪೇರಾಗಿ ಆಸ್ಪತ್ರೆಗೆ ಅಡ್ಮಿಟ್ ಆದರು ಆಗ ಪಾರ್ವತಮ್ಮ ಹಾಗೂ ರಾಜಕುಮಾರ್ ಅವರು ಆಸ್ಪತ್ರೆಗೆ ಬಂದರು ಆಗ ರಾಜಕುಮಾರ್ ಅವರು ಬಹಳ ವ್ಯಥೆ ಪಟ್ಟರು ಪ್ರಭಾಕರ್ ಅವರು ಬಹಳ ಒಳ್ಳೆಯ ಕಲಾವಿದ ಎಂದು ಹೇಳಿದರು.
ಪ್ರಭಾಕರ್ ಅವರು ನಿಧನರಾದರು ಅವರ ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಆಸ್ಪತ್ರೆಯ ಗ್ಲಾಸ್ ಒಡೆದು ಬಂದರು, ಮನೆಯಲ್ಲಿ ಅಭಿಮಾನಿಗಳು ತುಂಬಿದ್ದರು. ಅಂಬರೀಷ್ ಅವರು ಬಂದಿದ್ದರು, ಅಭಿಮಾನಿಗಳೇ ಮಣ್ಣು ಮಾಡಿದರು. ಪ್ರಭಾಕರ್ ಅವರು ಒಳ್ಳೆಯ ನಟ, ಗುಣವಂತ, ಬುದ್ಧಿವಂತ ಆಗಿದ್ದರು. ಅವರು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದರು. ಅವರ ಮಗ ವಿನೋದ್ ಪ್ರಭಾಕರ್ ಅವರು ಉತ್ತಮ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಹೆಚ್ಚಿನ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸೋಣ.