ಖಳನಾಯಕನ ಪಾತ್ರದಲ್ಲಿ ನಟಿಸಿದರೆ ಜನರು ಹಾಗೆ ನೋಡುತ್ತಾರೆ, ಹೀರೊ ಪಾತ್ರದಲ್ಲಿ ನಟಿಸಿದರೆ ಜನರು ಅದನ್ನೇ ಇಷ್ಟ ಪಡುತ್ತಾರೆ ಆದರೆ ಬಾಲಿವುಡ್ ಸೂಪರ್ ಖಳನಾಯಕ ಇನ್ನು ಮುಂದೆ ಹೀರೊ ಪಾತ್ರದಲ್ಲಿ ಕಾಣಿಸಲಿದ್ದಾರೆ ಅವರು ಯಾರು, ಹೀರೊ ಪಾತ್ರ ಮಾಡಲು ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸೋನು ಸೂದ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡು ಸ್ಟಾರ್ ಆದರು. ಬಾಲಿವುಡ್ ದಬಂಗ್ ಸಿನಿಮಾ ನೋಡಿದ ಬಹುತೇಕ ನಿರ್ದೇಶಕರು, ನಿರ್ಮಾಪಕರು ಈ ನಟನು ತಮ್ಮ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಬೇಕು ಎಂದು ಆಫರ್ ಕೊಟ್ಟರು. ದಬಂಗ್ ಸಿನಿಮಾದ ನಂತರ ಇವರಿಗೆ ಅವಕಾಶಗಳ ಸುರಿಮಳೆ ಸುರಿಯಿತು, ಇವರು ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ಖಳನಾಯಕ ಆದರು. ಭಾರತೀಯ ಚಿತ್ರರಂಗದ ಪ್ರಸಿದ್ಧ ಖಳನಾಯಕರೆಂದು ಗುರುತಿಸಿಕೊಂಡರು. ಇವರು ಕೊರೋನ ಕಾರಣದಿಂದ ಆದ ಲಾಕ್ ಡೌನ್ ಸಮಯದಲ್ಲಿ ಮಾಡಿದ ಕೆಲಸದಿಂದ ಜನರ ದೃಷ್ಟಿಯಲ್ಲಿ ಹೀರೊ ಆದರು. ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರು, ಇತರ ಜನರು ತಮ್ಮ ಊರಿಗೆ ತೆರಳಬೇಕಿತ್ತು ಆದರೆ ಬಸ್ ವ್ಯವಸ್ಥೆ ಇರಲಿಲ್ಲ ಆಗ ಸೋನು ಸೂದ್ ಅವರು ಬಸ್, ರೈಲು, ವಿಮಾನ ವ್ಯವಸ್ಥೆ ಮಾಡಿದರು ಇದರಿಂದ ಬಹಳಷ್ಟು ಜನರಿಗೆ ಉಪಕಾರವಾಯಿತು. ದಶಕಗಳ ಕಾಲ ಅವರ ಸಿನಿಮಾ ನೋಡಿ ಅವರನ್ನು ಖಳನಟರೆಂದು ನೋಡುವ ಜನರು ಈಗ ದೇವರೆಂದು ಪೂಜಿಸುತ್ತಿದ್ದಾರೆ. ಜನರ ಮನಸಿನಲ್ಲಿ ಸೋನು ಸೂದ್ ಅವರು ನಟರಾಗಿದ್ದಾರೆ. ಹಾಗಾಗಿ ಇನ್ನು ಮುಂದೆ ಸಿನಿಮಾಗಳಲ್ಲಿ ಸೋನು ಸೂದ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಸಂತೋಷ್ ಶ್ರೀನಿವಾಸ್ ನಿರ್ದೇಶನದ ತೆಲುಗು ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಬೇಕಿದ್ದ ಸೋನು ಸೂದ್ ಅವರಿಗೆ ಪಾತ್ರ ಬದಲಾವಣೆ ಮಾಡಲಾಗಿದೆ ಸೋನು ಸೂದ್ ಅವರಿಗೆ ಸಿನಿಮಾದಲ್ಲಿ ಹೀರೊ ಪಾತ್ರದಷ್ಟೇ ಮುಖ್ಯ ಪಾತ್ರವನ್ನು ನೀಡಲಾಗಿದೆ. ಈ ಬದಲಾವಣೆಗೆ ಕಾರಣವೇನೆಂದರೆ ಭಾರತೀಯ ಸೂಪರ್ ಹೀರೊ ಸೋನು ಸೂದ್ ಅವರನ್ನು ಖಳನಾಯಕನಾಗಿ ಅವರ ಅಭಿಮಾನಿಗಳು ನೋಡಲು ಇಷ್ಟಪಡುವುದಿಲ್ಲ. ನಟ ಸೋನು ಸೂದ್ ಅವರಿಗೆ ಈ ಬದಲಾವಣೆಯ ಬಗ್ಗೆ ಕೇಳಿದಾಗ ಅವರು ಈ ಒಂದು ವರ್ಷದಲ್ಲಿ ನನ್ನ ಜೀವನದಲ್ಲಿ ಹಲವು ಬದಲಾವಣೆಗಳು ಆಗಿವೆ ಅವು ಸಕಾರಾತ್ಮಕವಾಗಿವೆ, ನನ್ನ ವೃತ್ತಿ ಜೀವನಕ್ಕೆ ಸಂಬಂಧಿಸಿ ಇನ್ನು ಮುಂದೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ, ಸಕಾರಾತ್ಮಕ ಪಾತ್ರಗಳನ್ನು ಮಾತ್ರ ಮಾಡುತ್ತೇನೆ, ಈಗಾಗಲೇ ಉತ್ತಮ ಪಾತ್ರಗಳ ಆಫರ್ ಬರುತ್ತಿದೆ, ವರ್ಷದಲ್ಲಿ 1-2 ಸಿನಿಮಾಗಳನ್ನು ಮಾಡಲು ಸಮಯದ ವೇಳಾಪಟ್ಟಿ ಸಿದ್ಧಪಡಿಸಬೇಕು ಎಂದು ಅವರು ಹೇಳಿದರು. ಅವರ ಈ ಮಾತು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಮತ್ತೆ ಕೆಲವರಿಗೆ ಈ ವಿಷಯ ಖುಷಿ ತಂದಿಲ್ಲ ತೆಲುಗಿನ ಅರುಂಧತಿ ಚಿತ್ರದಲ್ಲಿ ಅವರು ಮಾಡಿದ ಖಳನಾಯಕನ ಪಾತ್ರವನ್ನು ಎಲ್ಲರೂ ಮೆಚ್ಚುಕೊಂಡಿದ್ದರು. ಅವರ ಎಲ್ಲ ಸಿನಿಮಾಗಳು ಅತ್ಯುತ್ತಮ ಖಳನಾಯಕ ಎಂಬ ಹೆಸರನ್ನು ತಂದುಕೊಟ್ಟಿದೆ. 1999-2019 ರವರೆಗೆ ನಟ ಸೋನು ಸೂದ್ ನಟಿಸಿದ ಬಹುತೇಕ 66 ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡರು. ಇದೀಗ ಅವರು ನಟನಾಗಿ ಪಾತ್ರ ನಿರ್ವಹಿಸುವುದನ್ನು ಅಭಿಮಾನಿಗಳು ನೋಡುವುದು ಹೊಸ ಅನುಭವವಾಗಿರುತ್ತದೆ. ಚಿತ್ರರಂಗ ಒಬ್ಬ ಉತ್ತಮ ಖಳನಾಯಕನನ್ನು ಕಳೆದುಕೊಳ್ಳುವುದು ಒಂದುಕಡೆಯಾದರೆ. ಖಳನಾಯಕನ ಪಾತ್ರಧಾರಿಯನ್ನು ನಟನಾಗಿ ನೋಡುವುದು ಹೇಗೆ ಎನ್ನುವುದು ಇನ್ನೊಂದು ಕಡೆ. ಒಟ್ಟಿನಲ್ಲಿ ಕೆಲವರಿಗೆ ಸಂತೋಷವಾದರೆ ಇನ್ನು ಕೆಲವರಿಗೆ ಬೇಸರದ ಸಂಗತಿಯಾಗಿದೆ. ಸೋನು ಸೂದ್ ಅವರು ಹೆಚ್ಚಿನ ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆಲ್ಲಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *