ಹೆಚ್ಚಾಗಿ ಎಲ್ಲರೂ ಗೌರವ ಕೊಡುವುದು ರೈತ ಮತ್ತು ಸೈನಿಕರಿಗೆ ಮಾತ್ರ. ಏಕೆಂದರೆ ರೈತ ತಾನು ಬೆಳೆದ ಭತ್ತದಿಂದ ಜನರ ಹಸಿವನ್ನು ನೀಗಿಸುತ್ತಾನೆ. ಹಾಗೆಯೇ ಸೈನಿಕ ತನ್ನ ಕಷ್ಟಗಳು ಮತ್ತು ನೋವುಗಳನ್ನು ಸಹಿಸಿಕೊಂಡು ದೇಶದ ಗಡಿಯನ್ನು ಕಾಯುತ್ತಾನೆ. ಇವನು ದೇಶವನ್ನು ಕಾಯಲು ತನ್ನ ಕುಟುಂಬವನ್ನು ಬಿಟ್ಟು ಹೋಗುತ್ತಾನೆ. ಆದ್ದರಿಂದ ಇವರಿಬ್ಬರಿಗೆ ಗೌರವ ಕೊಡುವುದು ಅತ್ಯವಶ್ಯಕ. ನಾವು ಇಲ್ಲಿ ಒಬ್ಬ ರೈತನಿಗೆ ಒಂದು ಹೋಟೆಲ್ ಮ್ಯಾನೇಜರ್ ಬೈದು ಆಚೆ ತಳ್ಳಿದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಆಂಧ್ರಪ್ರದೇಶದಲ್ಲಿ ವಿಜಯವಾಡ ಎಂಬ ಊರಿದೆ. ಅಲ್ಲಿ ವಿಜಯಕುಮಾರ್ ಎಂಬ ಒಬ್ಬ ರೈತನಿದ್ದಾನೆ. ಈಗ ಅವನಿಗೆ 60ವರ್ಷ ಆಗಿದೆ. ಇವನು ಸುಮಾರು 100ಎಕರೆಯಲ್ಲಿ ಭತ್ತವನ್ನು ಬೆಳೆಯುತ್ತಿದ್ದ. ಇದರಿಂದ ಒಂದು ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಿದ್ದಾನೆ. ಆ ಹಳ್ಳಿಯಲ್ಲಿ ಇವನಿಗೆ ಒಳ್ಳೆಯ ಹೆಸರು ಇತ್ತು. ಹಾಗಾಗಿ ಸುಖದಿಂದ ಜೀವನ ಮಾಡುತ್ತಿದ್ದನು. ಇವನಿಗೆ ಒಬ್ಬಳು ಮಗಳು ಇದ್ದಾಳೆ. ಅವಳಿಗೆ ವಿವಾಹವಾಗಿ ವಿಶಾಖಪಟ್ಟಣಂದಲ್ಲಿ ಸೆಟಲ್ ಆಗಿದ್ದಾಳೆ. ಮಗಳು ಇದ್ದಾಳೆ ಅಂದ ಮೇಲೆ ತಂದೆ ಮಗಳ ಮನೆಗೆ ಹೋಗುವುದು ಸಹಜವಾಗಿದೆ.
ಹಾಗಾಗಿ ಒಂದು ದಿನ ಮಗಳ ಮನೆಗೆ ಹೋಗಬೇಕೆಂದು ವಿಜಯವಾಡದಿಂದ ವಿಶಾಖಪಟ್ಟಣಂಗೆ ಒಂದು ಶರ್ಟ್ ಮತ್ತು ಲುಂಗಿಯನ್ನು ಹಾಕಿಕೊಂಡು ಬಸ್ ಹತ್ತಿದ್ದನು. ಹಾಗೆಯೇ ಬಸ್ ಇಳಿದ ನಂತರ ಹಸಿವಾಯಿತೆಂದು ಅಲ್ಲಿಯೇ ಪಕ್ಕದಲ್ಲಿ ಇರುವ ಫೈವ್ ಸ್ಟಾರ್ ಹೋಟೆಲ್ ಗೆ ಹೋದನು. ಆದರೆ ಅಲ್ಲಿ ಇದ್ದ ಬಾಗಿಲು ಕಾಯುವವ ಅವನನ್ನು ನೋಡಿ ಅವನ ವೇಷವನ್ನು ನೋಡಿ ಒಂದು ರೀತಿಯಾಗಿ ನೋಡಿದನು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೆ ತಾನೇ ಬಾಗಿಲು ತೆಗೆದುಕೊಂಡು ಒಳಗೆ ಹೋಗಿ ಕುಳಿತುಕೊಂಡ. ಆಗ ಸಪ್ಲಾಯರ್ ಇವನನ್ನು ನೋಡಿ ಇವನ ಬಳಿ ಕಾಫಿ ಕೊಡುವಷ್ಟು ಹಣ ಇಲ್ಲ ಎಂದು ತಿಳಿದು ಮ್ಯಾನೇಜರ್ ಹತ್ತಿರ ಹೋಗಿ ಹೇಳಿದನು.
ಆಗ ಮ್ಯಾನೇಜರ್ ಬಂದು ಹೇ ಅಜ್ಜ ಈ ಹೋಟೆಲ್ ನಿನಗೆ ಸರಿಯಾಗುವುದಿಲ್ಲ. ಪಕ್ಕದ ಹೋಟೆಲ್ ನಿನಗೆ ಸರಿಯಾಗುತ್ತದೆ. ನಿನ್ನ ಲೆವೆಲ್ ಗೆ ಅದೇ ಸರಿ ಎಂದು ಹೇಳಿದನು. ಆಗ ತನ್ನ ಬಟ್ಟೆ ನೋಡಿ ಹೀಗೆ ಹೇಳುತ್ತಿದ್ದಾರೆ ಎಂದು ತಿಳಿಯಿತು. ಆಗ ತನ್ನ ಕಿಸೆಯಲ್ಲಿ ಇದ್ದ ಗರಿಗರಿಯಾದ 2000ದ ಹೊಸ ನೋಟುಗಳನ್ನು ತೆಗೆದು ಟೇಬಲ್ ಮೇಲೆ ಇಟ್ಟಾಗ ಮ್ಯಾನೇಜರ್ ಬನ್ನಿ ಇವರಿಗೆ ಏನು ಬೇಕೊ ಕೊಡಿ ಎಂದ. ಈ ಹೋಟೆಲ್ ನ ಹೆಚ್ಚಿನ ಬೆಲೆಯ ದೋಸೆಯನ್ನು ತಂದುಕೊಡುವಂತೆ ಹೇಳಿದಾಗ 700ರೂಪಾಯಿಯ ದೋಸೆಯನ್ನು ತಂದುಕೊಟ್ಟಿದ್ದಾರೆ. ಕೊನೆಯದಾಗಿ ದೋಸೆ ತಿಂದು ಬಿಲ್ ಮಾಡಿ ಬರುವಾಗ ಮ್ಯಾನೇಜರ್ ಗೆ ಮುಖನೋಡಿ ಮಣೆ ಹಾಕುವ ರೂಢಿಯನ್ನು ಬಿಡಿ ಎಂದು ಹೇಳಿದ್ದಾನೆ.