ಕೆಲವೊಂದು ಯೋಜನೆಗಳನ್ನು ಮಾಡಿಸಲು ಕೆಲವು ಕಾರ್ಡ್ ಗಳು ಬೇಕೇ ಬೇಕಾಗುತ್ತದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಕಾರ್ಡ್ ಇವುಗಳು ಬಹಳ ಮುಖ್ಯ. ಏಕೆಂದರೆ ಏನನ್ನೇ ಮಾಡಿಸಬೇಕು ಎಂದರೆ ಇವುಗಳು ಬೇಕೇ ಬೇಕು. ಕೆಲವೊಮ್ಮೆ ಆತುರದಲ್ಲಿ ಈ ಕಾರ್ಡುಗಳು ಕಳೆದು ಹೋಗುತ್ತವೆ. ಆದರೆ ಅದನ್ನು ಮತ್ತೆ ಹುಡುಕಲು ಹೋದರೂ ಸಿಗುವುದು ಕಷ್ಟವಾಗುತ್ತದೆ. ಆದ್ದರಿಂದ ನಾವು ಇಲ್ಲಿ ಕಳೆದುಹೋದ ಆಧಾರ್ ಕಾರ್ಡ್ ನ್ನು ಪಡೆಯುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲು ಪೊಲೀಸ್ ಠಾಣೆಗೆ ತೆರಳಿ ಆಧಾರ್ ಕಾರ್ಡ್ ಕಳೆದುದರ ಬಗ್ಗೆ ದೂರು ನೀಡಬೇಕು. ಆ ದೂರಿಗೆ ಪೊಲೀಸ್ ನವರು ಎಫ್.ಐ.ಆರ್. ನ್ನು ದಾಖಲೆ ಮಾಡುತ್ತಾರೆ. ಆ ಎಫ್.ಐ.ಆರ್. ನ ಕಾಪಿಯನ್ನು ಕೊಡುತ್ತಾರೆ. ಅದನ್ನು ಇಟ್ಟುಕೊಂಡು ಕೆಲವು ಕ್ರಮಗಳನ್ನು ಅನುಸರಿಸಬೇಕು. ಹೀಗೆ ಮಾಡಿದರೆ ಕಳೆದುಕೊಂಡ ಕಳೆದುಕೊಂಡ ಆಧಾರ್ ಕಾರ್ಡ್ ನ ಇನ್ನೊಂದು ಪ್ರತಿಯನ್ನು ಪಡೆಯಬಹುದು. ಅದಕ್ಕೆ ಹಲವಾರು ವಿಧಾನಗಳಿವೆ.
ಮೊದಲ ವಿಧಾನದಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ತಿಳಿದಿರಬೇಕು. ಹಾಗೆಯೇ ಅದೇ ಸಂಖ್ಯೆ ಕಾರ್ಯ ನಿರ್ವಹಿಸುತ್ತಿದ್ದರೆ ಶೇಕಡಾ 95ರಷ್ಟು ಕೆಲಸ ಆದಂತೆ ಎಂದು ತಿಳಿಯಬಹುದು. ಹಾಗಿದ್ದಾಗ ನೇರವಾಗಿ ಆಧಾರ್ ಕಾರ್ಡ್ ನ http://eeadhar.uidai.gov.in/#/ ಈ ವೆಬ್ಸೈಟ್ ಗೆ ಲಾಗ್ ಇನ್ ಆಗಬೇಕು. ಇಲ್ಲವಾದಲ್ಲಿ ಮೊಬೈಲ್ ನಲ್ಲಿ ಇರುವ ಎಮ್. ಆಧಾರ್ ಆಪ್ ಮೂಲಕ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು. ಹಾಗೆಯೇ ಪೋಸ್ಟ್ ಮೂಲಕ ಆಧಾರ್ ಕಾರ್ಡ್ ಬೇಕಾದರೆ ಅದೇ ವೆಬ್ಸೈಟ್ ನಲ್ಲಿ 50ರೂಪಾಯಿ ಪಾವತಿಸಿ ಮನವಿ ಸಲ್ಲಿಸಬೇಕು. ಹೀಗೆ ಮಾಡಿದರೆ 5 ರಿಂದ 6ದಿನಗಳಲ್ಲಿ ಆಧಾರ್ ಕಾರ್ಡ್ ಬರುತ್ತದೆ.
ಎರಡನೇ ವಿಧಾನದಲ್ಲಿ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಗೊತ್ತಿಲ್ಲದಿದ್ದರೆ ಆಧಾರ್ ಸಹಾಯವಾಣಿ 1947ಕ್ಕೆ ಕರೆ ಮಾಡಬೇಕು. ನಂತರ ಹೆಸರು, ವರ್ಷ ಮತ್ತು ಕೇಳುವ ಮಾಹಿತಿಗಳನ್ನು ಒದಗಿಸಬೇಕು. ನಂತರ ಪತಿನಿಧಿ ನೀಡುವ ದಾಖಲಾತಿಯ ಐಡಿ ಸಂಖ್ಯೆಯನ್ನು ಬರೆದುಕೊಳ್ಳಬೇಕು. ಈ ಐಡಿ ಬಳಸಿ ಆಧಾರ್ ಕಾರ್ಡ್ ಪ್ರಿಂಟನ್ನು ಪಡೆಯಬಹುದು. ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಗೆ ಬರುವ ಆತುರದಲ್ಲಿ ಆಧಾರ್ ಕಳೆದುಕೊಂಡವರು ಈ ಎರಡು ವಿಧಾನಗಳಲ್ಲಿ ಪಡೆಯಬಹುದು.