ಶೃಂಗೇರಿ ಇದನ್ನು ಶ್ರೇಷ್ಠ ಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಶಾರದಾ ದೇವಿಯ ಮಹಿಮೆ ಅಗಾಢವಾದದ್ದು. ಹಾಗೆಯೇ ಇಲ್ಲಿಗೆ ಎಷ್ಟೋ ದೂರದಿಂದ ಭಕ್ತಾದಿಗಳು ಆಗಿಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಸಮುದ್ರದಲ್ಲಿ ಮೀನು ಇರುವುದು ಸರ್ವೇ ಸಾಮಾನ್ಯವಾಗಿದೆ. ಹಾಗೆಯೇ ತುಂಗಾ ನದಿಯಲ್ಲಿ ಮೀನುಗಳು ಬಹಳ ಇವೆ. ನಾವು ಇಲ್ಲಿ ಶೃಂಗೇರಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಶೃಂಗೇರಿಯಲ್ಲಿ ತುಂಗಾ ನದಿ ಹರಿಯುತ್ತದೆ.ತುಂಗಾ ನದಿಯಲ್ಲಿ ಯಾವುದೇ ಭಯವಿಲ್ಲದೆ ಮೀನುಗಳು ಈಜಾಡುತ್ತಿರುತ್ತವೆ. ಆದರೆ ಇಲ್ಲಿ ಯಾರೂ ಕೂಡ ಬಲೆ ಹಾಕಿ ಮೀನನ್ನು ಹಿಡಿಯಲು ಧೈರ್ಯ ಮಾಡುವುದಿಲ್ಲ. ಏಕೆಂದರೆ ಈ ಮೀನುಗಳನ್ನು ಶಾರದಾ ದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ದಿನನಿತ್ಯ ಈ ಮೀನುಗಳಿಗೆ ನೈವೇದ್ಯ ನೀಡಲಾಗುತ್ತದೆ. ಹಾಗೆಯೇ ಭಕ್ತರು ತಂದಂತಹ ಖಾದ್ಯಗಳನ್ನು ಮೀನುಗಳಿಗೆ ನೀಡಿ ಸಂತುಷ್ಟರಾಗುತ್ತಾರೆ. ಹಿಂದೆ ಶಂಕರಾಚಾರ್ಯರು ಒಂದು ಮೀನನ್ನು ಕೇರಳದಿಂದ ತಂದು ಅದಕ್ಕೆ ಚಿನ್ನದ ಮೂಗುತಿ ಹಾಕಿದ್ದರು. ಆ ಮೀನು ಇಂದಿಗೂ ಅಲ್ಲಿ ಇದೆ.

ಹೋದ ಭಕ್ತರಿಗೆ ಸಾವಿರಾರು ಮೀನುಗಳ ನಡುವೆ ಅದು ಕಂಡರೆ ಅದೃಷ್ಟ ಎಂಬ ನಂಬಿಕೆ ಇದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಚಿನ್ನದ ಮೂಗುತಿ ಇರುವ ಮೀನು ಭಕ್ತರಿಗೆ ದರ್ಶನ ನೀಡುತ್ತದೆ. ದರ್ಶನ ಪಡೆದ ಎಷ್ಟೋ ಭಕ್ತರು ಇದರಿಂದ ಸಫಲತೆಯನ್ನು ಪಡೆದುಕೊಂಡು ಜೀವನ ನಡೆಸುತ್ತಿದ್ದಾರೆ. ಶೃಂಗಗಿರಿ ಗುಡ್ಡದಲ್ಲಿ ಶಾರದಾ ದೇವಿ ನೆಲೆಸಿದ್ದಾಳೆ. ಒಂದು ಬಾರಿ ಶಂಕರಾಚಾರ್ಯರು ಇಲ್ಲಿ ಬಂದಾಗ ಘೋರ ಮಳೆ ಸುರಿಯುತ್ತಿತ್ತು. ಆಗ ಒಂದು ಕಪ್ಪೆ ಪ್ರಸವದ ವೇದನೆಯಿಂದ ನರಳುತ್ತಿತ್ತು. ಆಗ ಒಂದು ಹಾವು ಆ ಕಪ್ಪೆಗೆ ರಕ್ಷಣೆ ನೀಡಿತು. ಆದ್ದರಿಂದ ಇದನ್ನು ಒಂದು ಕ್ಷೇತ್ರಸ್ಥಳ ಎಂದು ಹೇಳಲಾಗುತ್ತದೆ.

ಶಂಕರಾಚಾರ್ಯರು ಸ್ಥಾಪಿಸಿದ ಈ ಭೂಮಿ ಯಜುರ್ವೇದದ ಪೀಠವಾಗಿದೆ. ಇವರು ತಮ್ಮ ಜೀವಿತಾವಧಿಯ ಹನ್ನೆರಡು ವರ್ಷಗಳನ್ನು ಇಲ್ಲಿ ಕಳೆದಿದ್ದರು. ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಶಾರದಾದೇವಿಯ ಪರಮ ಭಕ್ತರಾಗಿದ್ದರು. ಇವರು ಯುದ್ಧಗಳಿಗೆ ಹೋಗುವಾಗ ಇಲ್ಲಿ ಬಂದು ದೇವಿಯ ದರ್ಶನ ಮಾಡಿ ಶತಚಂಡಿಹೋಮವನ್ನು ಕೂಡ ಮಾಡುತ್ತಿದ್ದರು. ಹಾಗೆಯೇ ಹೈದರಾಬಾದ್ ನಿಜಾಮರು ಇಲ್ಲಿ ವಜ್ರವೈಢೂರ್ಯಗಳನ್ನು ನೀಡಿದ ಬಗ್ಗೆ ಪ್ರತೀತಿ ಇದೆ. ದೇವಾಲಯದ ನವರಂಗದಲ್ಲಿ ಭೌತಶಾಸ್ತ್ರಕ್ಕೆ ಅನುಗುಣವಾಗಿ ದ್ವಾದಶ ರಾಶಿಗಳ ಸಂಕೇತ ಇರುವ ಹನ್ನೆರಡು ಕಂಬಗಳಿವೆ.

ಮಾಸಕ್ಕೆ ತಕ್ಕಂತೆ ಸೂರ್ಯೋದಯ ಆದಾಗ ಸೂರ್ಯನ ಕಿರಣಗಳು ರಾಶಿಗೆ ಸಂಬಂಧಪಟ್ಟ ಹಾಗೆ ಬೀಳುತ್ತವೆ. ಇದು ಭಾರತೀಯ ವಾಸ್ತುಶಿಲ್ಪಕ್ಕೆ ಒಂದು ಸಾಕ್ಷಿ ಎಂದು ಹೇಳಬಹುದು. ಶೃಂಗೇರಿಯ ಶಾರದಾದೇವಿ ಕಲಿಕೆ ಮತ್ತು ಪಾಂಡಿತ್ಯಕ್ಕೆ ಅಧಿದೇವತೆ ಎಂದು ಎನಿಸಿಕೊಂಡಿದ್ದಾಳೆ. ಶ್ರೀಚಕ್ರದ ಪೀಠವನ್ನು ಶಂಕರಾಚಾರ್ಯರು ಸ್ಥಾಪಿಸಿದರು. ಇಲ್ಲಿ ಎಷ್ಟೋ ದೂರದಿಂದ ಭಕ್ತಾದಿಗಳು ಬಂದು ಅಕ್ಷರಾಭ್ಯಾಸ ಮಾಡಿಸುತ್ತಾರೆ. ಅಕ್ಷರಾಭ್ಯಾಸ ಮಾಡಿದವರು ವಿದ್ಯಾವಂತರಾಗುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿಯ ತುಂಗಾನದಿಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತದೆ. ಹಾಗಾಗಿ ಕೊನೆಯದಾಗಿ ಹೇಳುವುದೇನೆಂದರೆ ಶೃಂಗೇರಿಗೆ ಹೋಗಿ ಒಮ್ಮೆಯಾದರೂ ದೇವಿಯ ದರ್ಶನ ಪಡೆದು ಬನ್ನಿ.

Leave a Reply

Your email address will not be published. Required fields are marked *