ಬಿಸನೆಸ್ ಮಾಡುವುದರಿಂದ ಲಾಭವೂ ಆಗುತ್ತದೆ. ಹಾಗೆಯೇ ನಷ್ಟವೂ ಆಗುತ್ತದೆ. ಈ ಬಿಸನೆಸ್ ಗೆ ಒಂದು ಬಾರಿ ಬಂಡವಾಳ ಹೂಡಿದರೆ ಸಾಕು ತಿಂಗಳಿಗೆ ಒಂದು ಲಕ್ಷ ಸಂಪಾದನೆ ಮಾಡಬಹುದು. ನಾವು ಒಂದು ಬಿಸನೆಸ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಫೆನ್ಸಿಂಗ್ ವಯರ್ ಬಿಸನೆಸ್ ಮಾಡುವುದರಿಂದ ಒಳ್ಳೆಯ ಲಾಭವಿದೆ. ಫೆನ್ಸಿಂಗ್ ವಯರ್ ಗಳನ್ನು ಹೊಲಗಳಲ್ಲಿ ಮತ್ತು ಪ್ಲಾಟ್ ಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ ಕೆಲವು ಕನ್ಸ್ಟ್ರಕ್ಷನ್ ಫಿಲ್ಡ್ ಗಳಲ್ಲಿ ಫೆನ್ಸಿಂಗ್ ವಯರ್ ಗಳನ್ನು ಬಳಸಲಾಗುತ್ತದೆ. ಆದ್ದರಿಂದ ಇದಕ್ಕೆ ಒಳ್ಳೆಯ ಬೇಡಿಕೆ ಇದೆ ಎಂದು ಹೇಳಬಹುದು. ಹಾಗೆಯೇ ನಮ್ಮ ದೇಶದಲ್ಲಿ ಕೃಷಿವಲಯ ಮತ್ತು ಕಟ್ಟದನಿರ್ಮಾಣ ಹೆಚ್ಚುತ್ತಿದೆ. ಹಾಗಾಗಿ ಇದಕ್ಕೆ ಯಾವುದೇ ರೀತಿಯ ಬೇಡಿಕೆ ಕಡಿಮೆ ಆಗುವುದಿಲ್ಲ.
ಇದನ್ನು ತಯಾರಿ ಮಾಡಲು ಬಾರ್ಬರ್ಡ್ ವಯರ್ ಮಶಿನ್ ಬೇಕಾಗುತ್ತದೆ. ಇದರ ಬೆಲೆ ಒಂದೂವರೆ ಲಕ್ಷದಿಂದ ಶುರುವಾಗುತ್ತದೆ. ಇದಕ್ಕೆ ಕಚ್ಚಾವಸ್ತುವಾಗಿ ಗ್ಯಾನೋನೈಸ್ಡ್ ವಯರ್ ಬೇಕಾಗುತ್ತದೆ. ಇದು ಕಿಲೊಗ್ರಾಮ್ ಗೆ 45ರೂಪಾಯಿಯಿಂದ ಶುರುವಾಗುತ್ತದೆ. ಹಾಗೆಯೇ ಈ ಮಶಿನ್ ವಿದ್ಯುತ್ ನಿಂದ ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಲಸಕ್ಕೆ ವಿದ್ಯುತ್ ನ ಅವಶ್ಯಕತೆ ಇರುತ್ತದೆ. ಮಶಿನ್ ನಿಂದಾಗಿ ರೋಲ್ ಮಾಡುವ ಅವಶ್ಯಕತೆ ಇಲ್ಲ. ಅದೇ ರೋಲ್ ಆಗುತ್ತದೆ.
ಒಂದು ಕಿಲೋಗ್ರಾಮ್ ವಯರ್ ಗೆ 47ರೂಪಾಯಿ ಆಗುತ್ತದೆ. ಸಾಗಾಣಿಕಾ ಮತ್ತು ವಿದ್ಯುತ್ ವೆಚ್ಚ 3ರೂಪಾಯಿ ಆಗುತ್ತದೆ. ಒಟ್ಟಾರೆಯಾಗಿ ಪ್ರೊಡಕ್ಷನ್ ಬೆಲೆ 50ರೂಪಾಯಿ ಆಗುತ್ತದೆ. ಹಾಗೆಯೇ ಅದನ್ನು ಹೋಲ್ ಸೇಲಾಗಿ 65ರೂಪಾಯಿಗೆ ಮಾರಾಟ ಮಾಡಬೇಕು. ಇದರಿಂದ 15ರೂಪಾಯಿ ಲಾಭವಾಗುತ್ತದೆ. ದಿನವೂ 250ಕಿಲೋಗ್ರಾಮ್ ತಂತಿಯನ್ನು ತಯಾರಿ ಮಾಡಿದರೆ 3750ರೂಪಾಯಿಗಳಷ್ಟು ಲಾಭವಾಗುತ್ತದೆ. ದಿನವೂ 500ಕಿಲೋಗ್ರಾಮ್ ತಂತಿಯನ್ನು ತಯಾರಿ ಮಾಡಿದರೆ 7500ರೂಪಾಯಿಗಳಷ್ಟು ಲಾಭವಾಗುತ್ತದೆ.