Ultimate magazine theme for WordPress.

ರೋಹಿತ್ ಶರ್ಮ ಬೆಂಗಳೂರಿನಲ್ಲಿ

0 1

ರೋಹಿತ್ ಶರ್ಮಾ ಅವರು ಬೆಂಗಳೂರಿಗೆ ಬಂದು ಎನ್ ಸಿಎ ದಲ್ಲಿ ತರಭೇತಿ ಪಡೆಯಲಿದ್ದಾರೆ ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಸತತ 5 ನೇ ಬಾರಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಹಿಟ್ ಮ್ಯಾನ್ ರೋಹಿತ್ ಶರ್ಮಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ಗಾಯಗೊಂಡಿರುವ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ಟಿ -20 ಹಾಗೂ ಏಕದಿನ ಸರಣಿಯಿಂದ ಹೊರಬಿದ್ದ ರೋಹಿತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಐಪಿಎಲ್ ಟೂರ್ನಿ ವೇಳೆ ಪ್ರಾಕ್ಟೀಸ್ ಮಾಡುವಾಗ ರೋಹಿತ್ ಸ್ನಾಯುಸೆಳೆತಕ್ಕೆ ಒಳಗಾದನು ಇದರಿಂದ ನಾಲ್ಕು ಪಂದ್ಯಗಳನ್ನು ಮಿಸ್ ಮಾಡಿಕೊಂಡರು ಆದರೆ ಫೈನಲ್ ಪಂದ್ಯದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಡೆಲ್ಲಿ ಕ್ಯಾಪಿಟಲ್ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ 68 ರನ್ ಗಳಿಸುವುದರೊಂದಿಗೆ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದರು. ಗಾಯಗೊಂಡಿದ್ದಾರೆಂದು ರೋಹಿತ್ ಅವರನ್ನು ಆಸೀಸ್ ವಿರುದ್ಧ ಟಿ-20 ಹಾಗೂ ಏಕದಿನ ಪಂದ್ಯದಲ್ಲಿ ಆಯ್ಕೆ ಮಾಡಿರಲಿಲ್ಲ ಆದರೆ ಕ್ಯಾಪ್ಟನ್ ಕೋಹ್ಲಿ ಟೆಸ್ಟ್ ಸರಣಿ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಹಿನ್ನೆಲೆ ರೋಹಿತ್ ಅವರನ್ನು ಆಯ್ಕೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದ್ದರಿಂದ ಟೆಸ್ಟ್ ಸರಣಿಗೆ ಮಾತ್ರ ಆಯ್ಕೆ ಮಾಡಲಾಗಿದೆ. ಸ್ನಾಯು ಸೆಳೆತದಿಂದ ಸಂಪೂರ್ಣವಾಗಿ ಗುಣವಾದ ನಂತರ ಎನ್ ಸಿಎದಲ್ಲಿ ಫಿಟ್ನೆಸ್ ಸಾಬೀತು ಮಾಡಬೇಕಾಗಿದೆ.

ಗುರುವಾರ ರೋಹಿತ್ ಬೆಂಗಳೂರಿಗೆ ಬಂದಿದ್ದು ಎನ್ ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ನಲ್ಲಿ ತರಭೇತಿ ಪಡೆಯುತ್ತಿದ್ದಾರೆ. ಒಂದು ವೇಳೆ ರೋಹಿತ್ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾದ್ರೆ ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಅವರು ಎನ್ ಸಿಎ ನಲ್ಲಿ ಫಿಟ್ನೆಸ್ ಟೆಸ್ಟ್ ಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ 2018 ರಲ್ಲೂ ರೋಹಿತ್ ಎನ್ ಸಿಎ ನಲ್ಲಿ ಯೋಯೊ ಟೆಸ್ಟನಲ್ಲಿ ಭಾಗವಹಿಸಿದ್ದರು. ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರೋಹಿತ್ ಜೊತೆ ಟೀಮ್ ಇಂಡಿಯಾದ ಇಶಾಂತ್ ಶರ್ಮಾ ಕೂಡ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಫಿಟ್ ಆಗಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ಪರ ಆಡುತ್ತಿದ್ದ ಇಶಾಂತ್ ಶರ್ಮಾ ಇಂಜುರಿಯಿಂದ ಐಪಿಎಲ್ ನಿಂದ ದೂರವಾಗಿದ್ದರು ಅಲ್ಲದೇ ಆಸೀಸ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಆದರೆ ಎನ್ ಸಿಎ ಗೆ ಆಗಮಿಸಿ ಫಿಟ್ ಆಗಿರುವ ಇಶಾಂತ್ ಪ್ಲೈಟ್ ಹತ್ತುವ ಅವಕಾಶವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಆಟಗಾರರು ಎನ್ ಸಿಎಗೆ ಆಗಮಿಸಿದರೆ ಫಿಟ್ ಆಗುವುದು ಪಕ್ಕಾ.

Leave A Reply

Your email address will not be published.