ಯಶ್ ಅವರ ಫಿಟ್ನೆಸ್ ಬಗ್ಗೆ ಅವರ ಟ್ರೇನರ್ ಹೇಳಿರುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಯಶ್ ಅವರ ಫಿಟ್ನೆಸ್ ಗೆ ಕಾರಣ ಅವರ ಡೆಡಿಕೇಷನ್. ಯಶ್ ಅವರ ಫಿಟ್ನೆಸ್ ಟ್ರೇನರ್ ಅವರು ನಾವು ಎಷ್ಟು ಪ್ರೀತಿಯಿಂದ ಹೇಳುತ್ತೇವೆ, ಅವರು ಅಷ್ಟೆ ಪ್ರೀತಿಯಿಂದ ಮಾಡುತ್ತಾರೆ ಆಗ ಸಕ್ಸೆಸ್ ಆಗುತ್ತದೆ ಎಂದು ಹೇಳಿದ್ದಾರೆ. ಯಶ್ ಅವರು ಎನರ್ಜಿಟಿಕ್ ಆಗಿ ಮಾಡುತ್ತಾರೆ. ಅವರು ಪ್ರೊಫೆಷನಲ್ ಆಗಿ ಮಾಡುತ್ತಾರೆ. ಆಹಾರವನ್ನು ಸರಿಯಾಗಿ ಯಾವುದು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಅಷ್ಟೇ ಪ್ರಮಾಣದಲ್ಲಿ ಸೇವಿಸಬೇಕು. ವಯಸ್ಸು, ತೂಕದ ಮೇಲೆ ಎಷ್ಟು ಪ್ರೊಟೀನ್ ತಿನ್ನಬೇಕು, ಎಷ್ಟು ಕ್ಯಾಲೊರೀಸ್ ತಿನ್ನಬೇಕು ಎಂದು ನೋಡಿ ಆಹಾರವನ್ನು ಸೇವಿಸಬೇಕು. ಬೆಳಿಗ್ಗೆ ಕಾರ್ಬೋಹೈಡ್ರೇಟ್ಸ್ ಸೇವಿಸಬೇಕು ನಂತರ ವೆಜಿಟೇಬಲ್, ನ್ಯೂಟ್ರಿಷಿಯನ್ ಇರುವ ಆಹಾರವಾದ ಬೀನ್ಸ್, ಕಾಳುಗಳನ್ನು, ಎಗ್ಗ್, ಚಿಕನ್ ಸೇವಿಸಬೇಕು. ಲಾಕ್ ಡೌನ್ ಇರುವ ಕಾರಣದಿಂದ ಶೂಟಿಂಗ್ ಇರಲಿಲ್ಲ ಹೀಗಾಗಿ ವರ್ಕೌಟ್ ಮಾಡಲಿಲ್ಲ. ಈಗ ಶೂಟಿಂಗ್ ಶುರುವಾಗುವುದರಿಂದ ಬೆಳಿಗ್ಗೆ ಮತ್ತು ಸಂಜೆ ವರ್ಕೌಟ್ ಮಾಡುತ್ತಿದ್ದಾರೆ. ಒಂದು ಸಿನಿಮಾದಲ್ಲಿ ನಟಿಸಲು ಯಶ್ ಅವರು ವರ್ಕೌಟ್ ಮಾಡುತ್ತಿದ್ದಾರೆ ಯಶ್ ಅವರ ಅಪಾರ್ಟಮೆಂಟ್ ನಲ್ಲಿ ಜಿಮ್ ಮಾಡುತ್ತಾರೆ.
ಕೊರೋನ ಬರುವ ಮೊದಲು 16-17 ಕೆ.ಜಿ ಕಡಿಮೆಯಾಗಬೇಕೆಂದು ಪ್ಲಾನ್ ಮಾಡಿದ್ದರು.ಅದರಂತೆ KGF ಸಿನಿಮಾಕ್ಕಾಗಿ 12 ಕೆ.ಜಿ ಕಡಿಮೆಮಾಡಿಕೊಂಡಿದ್ದರು. ಆದರೆ ಕೊರೋನ ಬಂದ ಕಾರಣ ನಿಲ್ಲಿಸಲಾಯಿತು. ಯಶ್ ಅವರು ಟ್ರೇನರ್ ಹೇಳಿದ್ದನ್ನು ಮಾಡುವವರೆಗೆ ಸುಸ್ತು ಎಂದು ಹೇಳುವುದಿಲ್ಲ. ಯಶ್ ಅವರನ್ನು ಸಿಕ್ಸ್ ಪ್ಯಾಕ್ ಲಿ ನೋಡಬೇಕು ಎಂಬ ಕನಸಿದೆ ಎಂದು ಟ್ರೇನರ್ ಹೇಳಿಕೊಂಡಿದ್ದಾರೆ. ಫಿಲಂ ನೋಡಲು ಕಾತುರರಾಗಿದ್ದಾರೆ ಯಶ್ ಅವರ ಫಿಟ್ನೆಸ್ ಟ್ರೇನರ್.