ಇವತ್ತು ನಾವು ಎಲ್ಲಾ ಕಡೆಯೂ ದೊರೆಯುವಂತಹ ಒಂದು ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪಿನ ಬಗ್ಗೆ ತಿಳಿದುಕೊಳ್ಳೋಣ. ಈ ಸೊಪ್ಪು ಹಳ್ಳಿಗಳಲ್ಲಿ, ಕಾಡುಗಳಲ್ಲಿ, ರೋಡ್ ಸೈಡ್ ಗಳಲ್ಲಿ ಸಹ ಬೆಳೆದಿರುತ್ತವೆ. ಆದರೆ ಇದನ್ನ ಗುರುತಿಸುವುದು ಕಷ್ಟ. ಸಿಟಿಗಳಲ್ಲಿ ಖಾಲಿ ಸೈಟ್ ಗಳಲ್ಲಿ ಎಲ್ಲಾ ಇದು ಬೆಳೆದಿರುತ್ತವೆ ಆದರೆ ನಾನು ಇದನ್ನ ಒಂದು ವೇಸ್ಟ್ ಗಿಡ ಅಂತ ಕಡಿದು ಹಾಕ್ತೀವಿ. ಅದು ಯಾವುದು ಅಂತ ನೋಡೋದಾದರೆ ಆಡು ಸೋಗೆ ಸೊಪ್ಪುಅಥವಾ ಆಡು ಮುಟ್ಟದ ಸೊಪ್ಪುಅಥವಾ ಸಂಸ್ಕೃತದಲ್ಲಿ “ವಾಸ” ಅಂತಾನೂ ಹೇಳ್ತಾರೆ. ಈ ಸೊಪ್ಪಿನ ಪ್ರಯೋಜನ ಏನು ಉಪಯೋಗ ಮಾಡೋದು ಹೇಗೆ ಯಾವೆಲ್ಲ ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ, ಯಾವ ಯಾವ ವಯಸ್ಸಿನವರು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಈ ವಿಚಾರವಾಗಿ ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.
ಆಡು ಸೋಗೆ ಅಥವಾ ವಾಸ ಇದು ದೇಹದಲ್ಲಿ ಇರುವ ಶೀತವನ್ನು ಕಡಿಮೆ ಮಾಡುವ ಗುಣ ಇದಕ್ಕೆ ಇದೆ. ದೇಹದಲ್ಲಿ ಇರುವಂತಹ ಕಫವನ್ನ ಕಡಿಮೆ ಮಾಡುವ ಗುಣವನ್ನು ಇದು ಹೊಂದಿದೆ. ಇದನ್ನ ಯಾರು ಬೇಕಿದ್ರು ಬಳಕೆ ಮಾಡಬಹುದು. ಇದಕ್ಕೆ ಆಡುಸೋಗೆ ಹೆಸರು ಬರೋಕೆ ಕಾರಣ ಏನು ಅಂದ್ರೆ, ಆಡು (goat ಮೇಕೆ) ಇದು ತಿನ್ನದೆ ಇರುವಂತಹ ಸೊಪ್ಪು ಇಲ್ಲವೇ ಇಲ್ಲ. “ಆಡು ಮುಟ್ಟದ ಸೊಪ್ಪಿಲ್ಲ” ಅನ್ನೋ ನಾಣ್ನುಡಿ ಯೆ ಇದೆ. ಇದರ ಹಾಗೆ ಮೇಕೆ ಎಲ್ಲಾ ರೀತಿಯ ಸೊಪ್ಪುಗಳನ್ನು ತಿನ್ನತ್ತೆ ಹಾಗಾಗಿ ಮೇಕೆಯ ಹಾಲು ಅಷ್ಟು ಆರೋಗ್ಯಕ್ಕೆ ಒಳ್ಳೆಯದು. ಆದರೆ ಆಡು ಈ ಸೊಪ್ಪು ಒಂದನ್ನ ಬಿಟ್ಟು ಉಳಿದೆಲ್ಲ ಸೊಪ್ಪುಗಳನ್ನು ತಿನ್ನತ್ತೆ. ಹಾಗಾಗಿ ಆಡು ಸೋಗೆ ಸೊಪ್ಪು ಅಥವಾ ವಾಸ ಎಂದು ಹೆಸರು ಬಂದಿದೆ.
ಈಗಾಗಲೇ ಹೇಳಿದಂತೆ ಶೀತ, ಕಫ ಇರುವವರು ಇದನ್ನ ಬಳಸಬಹುದು. ಇದನ್ನ ತಾಗೊಳೋದರಿಂದ ದೇಹದಲ್ಲಿ ಇರುವಂತಹ ಶೀತ ಕಫ ಇವುಗಳನ್ನ ಹೋಗಲಾಡಿಸಿ ದೇಹವನ್ನ ಉಷ್ಣವಾಗಿ ಇಡಲು ಇದು ಸಹಾಯಕಾರಿ. ಇದರ ಜೊತೆಗೆ ಕಫ ವ್ಯಾಧಿಗಳು ಅಂದ್ರೆ, ಕೆಮ್ಮು ನೆಗಡಿ, ಕಫ, ಅಸ್ತಮಾ, ದಮ್ಮು, ಡಯಾಬಿಟಿಸ್, ಸ್ಥೂಲಕಾಯ ಇವೆಲ್ಲವೂ ಕೊಡ ಕಫಜ ವ್ಯಾಧಿಗಳು. ಈ ಎಲ್ಲವನ್ನೂ ನಿಯಂತ್ರಣಕ್ಕೆ ತರಲು ಈ ಆಡು ಸೋಗೆ ಸೊಪ್ಪು ತುಂಬಾ ಉಪಯುಕ್ತ. ಹಾಗಾಗಿ ಇದನ್ನ ಮಕ್ಕಳು, ವೃದ್ಧರು, ವಯಸ್ಕರು, ಎಲ್ಲರೂ ಬಳಸಬಹುದು.
ಇದನ್ನ ಬಳಸೋದು ಹೇಗೆ? ಇದನ್ನ ಸಾಧ್ಯವಾದಷ್ಟು ಸ್ವರಸದ ರೂಪದಲ್ಲಿ ಬಳಸಬೇಕು. ಹಾಗಂದ್ರೆ ಏನ್ aಅನ್ನೋದನ್ನ ವಿಸ್ತಾರವಾಗಿ ನೋಡೋಣ. ಆಡು ಸೋಗೆ ಸೊಪ್ಪನ್ನು ತಂದು ಶುಚಿ ಮಾಡಿ ಅದನ್ನ ಕಲ್ಲಿನಲ್ಲಿ ಹಾಕಿ ಕುತ್ತಿ ಅದರ ರಸವನ್ನು ತೆಗೆದು ಅದಕ್ಕೆ ಅರ್ಧ ಟಿ ಸ್ಪೂನ್ ಅಷ್ಟು ಜೇನು ತುಪ್ಪವನ್ನು ಬೆರೆಸಿ ಇದನ್ನ ಬೆಳಿಗ್ಗೆ ಮತ್ತು ಸಂಜೆ ಊಟ ತಿಂಡಿ ಯ ನಂತರ ಸೇವನೆ ಮಾಡಿದರೆ ದೇಹಕ್ಕೆ ಉಷ್ಣಾಂಶತೆ ಬರತ್ತೆ ಕಫ ಕಡಿಮೆ ಆಗತ್ತೆ ಹಾಗೂ ಅಸ್ತಮಾ ಖಾಯಿಲೆ ಇರುವವರಿಗೆ ಇದು ತುಂಬಾ ಒಳ್ಳೆಯದು.
ಊಟಕ್ಕೂ ಮೊದಲು ಇದನ್ನ ತೆಗೆದುಕೊಂಡರೆ ಆ ವ್ಯಕ್ತಿಗೆ ಒಂದುವೇಳೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ, ಹೊಟ್ಟೆಯಲ್ಲಿ ಉರಿ ಸಂಕಟ ಆಗುವ ಸಾಧ್ಯತೆ ಇರತ್ತೆ. ಇವತ್ತಿನ ಕಾಲದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಎಲ್ಲರಿಗೂ ಸಾಮಾನ್ಯವಾಗಿ ಕಂಡುರುತ್ತವೆ ಊಟಕ್ಕೂ ಮೊದಲು ತಗೊಂಡ್ರೆ ಹೊಟ್ಟೆಯಲ್ಲಿ ಉರಿ ಆಗುವುದರಿಂದ ಇದನ್ನ ಊಟಕ್ಕೂ ಮೊದಲು ತೆಗೆದುಕೊಳ್ಳಬಾರದು. ಊಟ ತಿಂಡಿಯ ನಂತರ ತೆಗೆದುಕೊಂಡಲ್ಲಿ ಯಾವುದೇ ರೀತಿಯ ಉರಿ ಸಂಕಟ ಆಗಲ್ಲ. ಇದನ್ನ ಒಂದೋ ಎರಡೋ ದಿನ ತಗೊಂಡು ಬಿಟ್ಟರೆ ಪ್ರಯೋಜನ ಕಾಣಲ್ಲ. ಹಲವಾರು ವಾರಗಳು ತಿಂಗಳುಗಳ ಕಾಲ ಈ ಔಷಧಿಯನ್ನು ಬಳಸುತ್ತಾ ಬಂದಲ್ಲಿ ಕಫ ವ್ಯಾಧಿ ಸಮಸ್ಯೆಗಳು ಕ್ರಮೇಣವಾಗಿ ಗುಣಮುಖವಾಗುತ್ತದೆ.