ಇವತ್ತು ನಾವು ಕುರು ಅಥವಾ ಹುಣ್ಣು ಇದು ಹೇಗೆ ಆಗತ್ತೆ ಇದರ ಲಕ್ಷಣಗಳು ಏನು ಮತ್ತು ಇದಕ್ಕೆ ಮನೆಮದ್ದು ಏನು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಕುರು ದೇಹದಲ್ಲಿ ತುಂಬಾ ಕೊಬ್ಬಿನ ಅಂಶ ಇರುವ ಭಾಗಗಳಲ್ಲಿ ಕಂಡು ಬರುತ್ತದೆ. ಇದಕ್ಕೆ ಕಾರಣ ಏನು ಅಂದ್ರೆ, ರಕ್ತದಲ್ಲಿನ ಇನ್ಫೆಕ್ಷನ್ ಇಂದ ಇದು ಆಗತ್ತೆ ಅಥವಾ ಪಿತ್ತ ಅತಿಯಾಗಿ ಆದಾಗ, ದೇಹದಲ್ಲಿ ಉಷ್ಣಾಂಶ ಜಾಸ್ತಿ ಆದಾಗ ದೇಹದಲ್ಲಿ ಕುರು ಆಗತ್ತೆ. ಇದು ಹೇಗೆ ಆಗತ್ತೆ ಅನ್ನೋದರ ಬಗ್ಗೆ ಪುಟ್ಟ ಮಾಹಿತಿ. ಇನ್ನು ಇದರ ಲಕ್ಷಣಗಳನ್ನು ನೋಡುವುದಾದರೆ, ಇದು ಆರಂಭದಲ್ಲಿ ಚಿಕ್ಕ ಗುಳ್ಳೆ ಆಗತ್ತೆ ಕ್ರಮೇಣವಾಗಿ ಅದು ದೊಡ್ಡದಾಗುತ್ತದೆ ಅದೇ ಗುಳ್ಳೆ ದೊಡ್ಡದಾಗಿ ಗಂಟು ಆಗಿ ಅಲ್ಲಿ ವಿಪರೀತ ನೀವು ಉಂಟಾಗತ್ತೆ. “ಬಲ್ಲವನೇ ಬಲ್ಲ ಕುರದ ನೋವ” ಅನ್ನೋ ಒಂದು ಗಾದೆ ಇದೆಯಂತೆ. ಆ ಕೂರದ ನೋವನ್ನ ಯಾರಿಗೂ ಸಹ ವಿವರಣೆ ನಿಡೋಕೆ ಸಾಧ್ಯವೇ ಇಲ್ಲ. ಅಂತಹ ನೋವು ಇರತ್ತೆ. ಆ ಕುರ ಒಂದು ಕಡೆ ಓಪನ್ ಆಗತ್ತೆ ಇದರಿಂದ ಕೀವು ಹೊರಗೆ ಬರತ್ತೆ ಅತಿಯಾದ ನೋವು ಇರತ್ತೆ ಹಾಗೆ ಈ ನೋವಿನಿಂದ ಕೆಲವರಿಗೆ ಜ್ವರ ಕೂಡ ಬರುವ ಸಾಧ್ಯತೆ ಹೆಚ್ಚು ಇರತ್ತೆ. ಈ ರೀತಿಯ ಲಕ್ಷಣಗಳನ್ನು ನಾವು ಕುರ ಆದಾಗ ಕಾಣಬಹುದು.

ಹಾಗಾದ್ರೆ ಇದಕ್ಕೆ ಮನೆ ಮದ್ದು ಏನು ಅಂತ ನೋಡುವುದಾದರೆ, ರಕ್ತ ಶುದ್ಧಿ ಆಗುವಂತಹ ಕೆಲವು ಆಹಾರಗಳನ್ನು ನಾವು ಸೇವಿಸಬೇಕು. ಹಾಗಿದ್ರೆ ರಕ್ತ ಕೆಡಲು ಕಾರಣ ಏನು? ಸೆಲ್ದಿ ಪದಾರ್ಥಗಳನ್ನು ಯಾರು ಅತಿಯಾಗಿ ತಿನ್ನುತ್ತಾರೋ ಅವರಲ್ಲಿ ಈ ಕುರ ಹೆಚ್ಚು ಕಂಡು ಬರುತ್ತದೆ. ಈ ಸೆಲ್ಡಿ ಪದಾರ್ಥಗಳು ಅಂದ್ರೆ, ಅಪತ್ಯ ಅಂದ್ರೆ, ಆಲೂಗಡ್ಡೆ, ಬದನೆಕಾಯಿ, ಹಸಿಮೆಣಸಿನಕಾಯಿ, ಗಿಣ್ಣು, ಕಾಫಿ ಟೀ ಈ ತರಹದ ಪದಾರ್ಥಗಳನ್ನು ತೆಗೆದುಕೊಳ್ಳಬಾರದು ತಕ್ಷಣ ನಿಲ್ಲಿಸಬೇಕು. ಇಂತಹ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬಾರದು ಇದರಿಂದ ಕುರ ಹೆಚ್ಚು ಆಗತ್ತೆ. ಅದಕ್ಕೆ ಇಂತಹ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡಬಹುದು ಅಂತ ನೋಡೋದಾದ್ರೆ, ಬೆಳ್ಳುಳ್ಳಿ, ಹಿಂಗು ಮತ್ತು ಅರಿಶಿಣ ಇವುಗಳನ್ನ ಯಥೆಚ್ಯ ವಾಗಿ ಬಳಕೆ ಮಾಡಬೇಕು. ಇವು ರಕ್ತ ಶೋಧಕವಾಗಿ ಕೆಲಸ ಮಾಡುತ್ತವೆ. ರಕ್ತವನ್ನು ಶದ್ಧೀಕರಿಸುತ್ತದೆ. ಆಹಾರದಲ್ಲಿ ಆದರೂ ಬಳಸಬಹುದು ಅಥವಾ ಒಂದು ಔಷಧೀಯ ರೂಪದಲ್ಲಿ ಆದರೂ ಬೆಳಿಗ್ಗೆ ಮತ್ತು ಸಂಜೆ ಬೆಳ್ಳುಳ್ಳಿಯನ್ನು ಬಳಸಬೇಕು. ಆಗ ಕುರ ಆಗುವ ಸಾಧ್ಯತೆ ಕಡಿಮೆ ಆಗುತ್ತಾ ಬರತ್ತೆ. ಈಗಾಗಲೇ ಕುರು ಆಗಿದ್ದು ಇದ್ದರೂ ಸಹ ಆಡು ಮಾಗಿ ಪಕ್ವವಾಗಿ ಕೀವು ಸೋರಿ ಹೊರಗೆ ಹೋಗಿ ಕಡಿಮೆ ಆಗುತ್ತದೆ.

ಬಾಹ್ಯವಾಗಿ ಕುರು ಆಗಿದ್ದು ಕಂಡರೆ ಅದಕ್ಕೆ ಲೇಪವನ್ನು ಕೂಡ ಮಾಡಬಹುದು. ವೀಳ್ಯದೆಲೆ ಅದನ್ನ ಪೇಸ್ಟ್ ಮಾಡಿ ಸ್ವಲ್ಪ ಬಿಸಿ ಮಾಡಿ ಕುರು ಆದ ಜಾಗದಲ್ಲಿ ಹಚ್ಚಿದರೆ ಬೇಗ ಕುರು ಪಕ್ವವಾಗಿ ಕೀವು ಸೋರಿ ಹೊರಗೆ ಬಂದು ಕಡಿಮೆ ಆಗತ್ತೆ. ನಂತರ ಅಲ್ಲಿ ಹೊಸ ಚರ್ಮ ಬೆಳೆಯುತ್ತದೆ. ಇವುಗಳನ್ನ ಮಾಡಿ ನೋಡಿ ಆದರೂ ಕಡಿಮೆ ಆಗದೆ ಇದ್ದಲ್ಲಿ ಹತ್ತಿರದ ವೈದ್ಯರನ್ನು ಭೇಟಿ ಆಗಿ.

Leave a Reply

Your email address will not be published. Required fields are marked *

error: Content is protected !!