ವಾರದಲ್ಲಿ ಒಮ್ಮೆ ಯಾದ್ರು ಈ ಕಾಳುಗಳನ್ನು ತಿನ್ನೋದ್ರಿಂದ ಏನಾಗುವುದು ಗೊತ್ತೇ

0 0

ಆರೋಗ್ಯ ಅನ್ನೋದು ಮನುಷ್ಯನಿಗೆ ದೇವರು ಕೊಟ್ಟ ಅತ್ಯಂತ ಪ್ರಮುಖವಾದ ಒಂದು ಉಡುಗೊರೆ ಅಥವಾ ವರ ಅಂತ ಹೇಳಬಹುದು. ದೇವರು ನಮಗೆ ನೀಡಿರುವ ಈ ಅಮೂಲ್ಯವಾದ ವರವನ್ನ ಸರಿಯಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲಿ ಕೂಡ ನಮ್ಮ ದೇಹಕ್ಕೆ ಬೇಕಾದ ಹಾಗೂ ಬೇಡವಾದ ಅಂಶಗಳನ್ನು ಅವು ಒಳಗೊಂಡಿರುತ್ತದೆ. ಇವತ್ತು ನಾವು ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಇವು ಹೇರಳವಾಗಿ ಇರುವ ದ್ವಿದಳ ಧಾನ್ಯ ಗಳಲ್ಲಿ ಒಂದಾದ ಹುರುಳಿ ಕಾಳಿನ ಬಗ್ಗೆ ತಿಳಿಸಿಕೊಡ್ತೀವಿ.

ಹುರುಳಿ ಕಾಳನ್ನ ಮೊದಲು ಹಳ್ಳಿಗಳಲ್ಲಿ ದನಕರುಗಳಿಗೆ ಮೇವು ಅಂತ ಬಳಸಲಾಗುತ್ತಿತ್ತು. ಆದರೆ ಈ ಹುರುಳಿ ಕಾಳನ್ನಾ ಮನುಷ್ಯರು ಸಹ ಬಳಸಬಹುದು ಅದೂ ನಮ್ಮ ಆರೋಗ್ಯದ ದೃಷ್ಟಿಯಿಂದ. ಇದನ್ನು ನಾವು ಸೇವಿಸಿದರೆ ಅಲವಾರು ರೀತಿಯ ಆರೋಗ್ಯಕರವಾದ ಚಮತ್ಕಾರಗಳನ್ನು ಪಡೆಯಬಹುದು. ಹುರುಳಿ ಕಾಳಿನಲ್ಲಿ ಇರುವ ಹೇರಳವಾದ ಪ್ರೊಟೀನ್, ಕಬ್ಬಿಣದ ಅಂಶ ಹಾಗೂ ಕ್ಯಾಲ್ಸಿಯಂ ಅಂಶಗಳನ್ನು ಹುರುಳಿ ಕಾಲು ಹೊಂದಿದ್ದು, ಅತ್ಯಧಿಕ
ಕ್ಯಾಲ್ಸಿಯಂ ಹೊಂದಿರುವ ದ್ವಿದಳ ಧಾನ್ಯ ಹುರುಳಿ ಕಾಳು. ಇದು ಕಡಿಮೆ ಕೊಬ್ಬು ಹಾಗೂ ಕರ್ಬೋ ಹೈಡ್ರೇಟ್ ಅಂಶಗಳನ್ನು ಸಹ ಹೊಂದಿದೆ. ಹಾಗಾಗಿ ಇದು ಮಧುಮೇಹ ಮತ್ತು ಬೊಜ್ಜು ಇರುವವರಿಗೆ ಸೂಕ್ತ ಆಹಾರ ಅಂತ ಹೇಳಬಹುದು. ಇದು ನಮ್ಮ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೆ ಬೊಜ್ಜನ್ನು ಸಹ ಕರಗಿಸುತ್ತದೆ. ಇನ್ನು ಸಕ್ಕರೆ ಖಾಯಿಲೆಯ ವಿರುದ್ಧ ಹುರುಳಿ ಕಾಳು ತೀವ್ರವಾಗಿ ಹೋರಾಟ ನಡೆಸುತ್ತದೆ ಅಲ್ಲದೆ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಉಂಟಾಗುವ ಅನೇಕ ಸಮಸ್ಯೆಗಳಿಗೆ ಇದು ಸೂಕ್ತ ಮನೆ ಮದ್ದು.

ಇನ್ನು ಅತಿಸಾರ ಸಮಸ್ಯೆಗೂ ಸಹ ಇದು ಸೂಕ್ತವಾದ ಪರಿಹಾರವನ್ನು ನೀಡುತ್ತದೆ. ಕಿಡ್ನಿಯಲ್ಲಿ ಬೆಳೆದ ಕಲ್ಲುಗಳ ಸಮಸ್ಯೆಯನ್ನು ಸಹ ಇದು ನಿವಾರಣೆ ಮಾಡುತ್ತದೆ ಹಾಗೂ ಮೂತ್ರ ಕಟ್ಟಿದ ಸಮಸ್ಯೆ ಇದ್ದರೆ ಅದನ್ನು ಸಹ ನಿವಾರಿಸುತ್ತದೆ. ಹಾಗೆ ದಿನಕ್ಕೆ ಎರಡು ಬಾರಿ ಹುರುಳಿ ಕಾಲನ್ನು ಬೇಯಿಸಿ ಸೇವಿಸಿದರೆ, ಇದರಲ್ಲಿರುವ ಲಿಪಿಡ್ ಗಳು ಹುಳುಗಳಿಂದ ನಮ್ಮನ್ನು ಕಾಪಾಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅನುಭವಿಸುತ್ತಿರುವ ಸಮಸ್ಯೆ ಅಂದರೇ ಅದು ಪೈಲ್ಸ್. ಇಂದು ಹಿಡಿಯಷ್ಟು ಹುರುಳಿಯನ್ನು ನೀರಿನಲ್ಲಿ ನೆನೆ ಹಾಕಿ ಮರುದಿನ ಬೆಳಿಗ್ಗೆ ಅದನ್ನು ಬೇಯಿಸಿ ಅದರ ನೀರನ್ನು ಮೂರು ಹೊತ್ತು ಕುಡಿಯಬೇಕು. ಹೀಗೆ ಮಾಡುವುದರಿಂದ ಹುರುಳಿ ಕಾಳು ಪೈಲ್ಸ್ ಹಾಗೂ ಡೈರಿಯ ರೋಗಗಳಿಗೆ ಸರಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಹುರುಳಿ ಕಾಲನ್ನು ಬಳಸಿ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.

Leave A Reply

Your email address will not be published.