ನಾನು ಒಳ್ಳೆಯವನಾದರೂ ದೇವರು ಏಕೆ ಸಹಾಯ ಮಾಡುವುದಿಲ್ಲ? ದೇವರು ಏನು ಬೇಕಾದರೂ ಮಾಡಬಹುದು? ನನ್ನ ಜೀವನದಲ್ಲಿ ಎಷ್ಟೋ ಕಷ್ಟಗಳು ಕಠಿಣತೆಗಳು ಎಷ್ಟೋ ದುಃಖಗಳಿವೆ. ಏಕೆ ನನ್ನ
ಮುಂದೆ ಪ್ರತ್ಯಕ್ಷನಾಗಿ ನನ್ನ ದುಃಖ ನೋವನ್ನು ಕಷ್ಟಗಳನ್ನು ಪರಿಹರಿಸುವುದಿಲ್ಲ? ಇದಕ್ಕೆಲ್ಲಾ ಉತ್ತರ ಭಗವದ್ಗೀತೆಯಲ್ಲಿದೆ. ಇದರ ಬಗ್ಗೆ ತಿಳಿಯೋಣ ಒಂದು ಕಥೆಯ ಮೂಲಕ.
ತಂದೆಗೆ ಒಬ್ಬನೇ ಮಗ ಮಗನ ಹೆಸರು ಮಂಜುನಾಥ. ಅವನು ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ. ತಂದೆ ಶ್ರೀಮಂತ ಆಗಿದ್ದ. ತಾಯಿ ಇಲ್ಲದ ಕೊರತೆ ಮಗನಿಗೆ ಕಾಣಬಾರದೆಂದು ಅತ್ಯಂತ ಸಲುಗೆ ಮತ್ತು ಪ್ರೀತಿಯಿಂದ ಬೆಳೆಸಿದ್ದ. ಯಾವ ಸಮಸ್ಯೆ ಇರದೇ ಸುಖವಾಗಿ ಬೆಳೆದದ್ದರಿಂದ ಆಲಸ್ಯ ಬೆಳೆಯಿತು. ಹಾಗೆ ಒಂದು ದಿನ ತಂದೆಯ ದೇಹಾಂತ್ಯವಾಯಿತು. ಸಂಬಂಧಿಕರೆಲ್ಲ ಸೇರಿ ಅವನ ಆಸ್ತಿಯನ್ನು ಲಪಟಾಯಿಸಿ ಮನೆಯಿಂದ ಹೊರ ಹಾಕಿದರು. ಬೀದಿಯಲ್ಲಿ ಹಸಿವಿನಿಂದ ಇದ್ದ ಅವನಿಗೆ ಯಾರೂ ಕೂಡ ಊಟ ಹಾಕಲಿಲ್ಲ.
ಒಂದು ದಿನ ಹಣ್ಣಿನ ಅಂಗಡಿಯಲ್ಲಿ ಹಣ್ಣು ಕದ್ದು ತಿನ್ನುತ್ತಿದ್ದದ್ದನ್ನು ನೋಡಿದ ಮಾಲೀಕ ಜನರ ಹತ್ತಿರ ಹೊಡೆಸಿದ. ಇದರಿಂದ ಕಷ್ಟ ಪಟ್ಟು ತಪ್ಪಿಸಿಕೊಂಡು ಕಾಡಿಗೆ ಹೋದ. ಕಾಡಿನಲ್ಲಿ ಒಂದು ಕುಂಟ ನಾಯಿಯನ್ನು ತಿನ್ನಲು ಒಂದು ಹುಲಿ ಬರುತ್ತಿತ್ತು. ಅದು ಬಾಯಿಯಲ್ಲಿ ಮಾಂಸದ ತುಂಡನ್ನು ಹಿಡಿದು ಬರುತ್ತಿತ್ತು. ಇದನ್ನು ನೋಡಿ ಮರದ ಮೇಲೆ ಹತ್ತಿ ಕುಳಿತ. ನಾಯಿಯ ಮೇಲೆ ಕನಿಕರ ಉಂಟಾಯಿತು. ಹುಲಿಯು ತಿನ್ನಲು ಹೋದಾಗ “ನಾಯಿಯನ್ನು ಹೇಗಾದರೂ ಮಾಡಿ ಉಳಿಸು ದೇವರೇ” ಎಂದು ಬೇಡಿಕೊಂಡ. ಆದರೆ ಒಂದು ಆಶ್ಚರ್ಯ ಕಾದಿತ್ತು. ಹುಲಿಯು ತನ್ನ ಬಾಯಿಯಲ್ಲಿ ಇದ್ದ ಮಾಂಸದ ತುಂಡನ್ನು ನಾಯಿಗೆ ಎಸೆದು ಮುಂದೆ ಸಾಗಿತ್ತು.
ಆಲಸ್ಯವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದ ತನಗೂ ಭೋಜನ ಸಿಗುತ್ತದೆ ಎಂದು ಮರದ ಮೇಲೆ ಕಾಯುತ್ತಾ ಕುಳಿತ. ಇಡೀ ರಾತ್ರಿ ಕಳೆದರೂ ಯಾರೂ ಬರಲಿಲ್ಲ. ಅವನ ಸಹನೆಯ ಕಟ್ಟೆ
ಒಡೆದು ಹೋಯಿತು. ಅಳುತ್ತಾ ದೇವರನ್ನು ಕೇಳಿದ ನನ್ನ ಹಣೆಬರಹದಲ್ಲಿ ಇಷ್ಟು ದುಃಖಗಳು ಯಾಕೆ? ಕಷ್ಟ ಯಾಕೆ, ನಾನು ಮಾಡಿದ ಅಪರಾಧ ಏನು, ಅದೇ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ಋಷಿಗಳಿಗೆ ಮಂಜುನಾಥನ ಮಾತುಗಳು ಕೇಳಿದವು. ಎಲ್ಲಾ ವಿಷಯ ತಿಳಿದು ಋಷಿಗಳು ಹಣ್ಣುಗಳನ್ನು ತಿನ್ನಲು ನೀಡಿದರು. ಆಗ ಮಂಜುನಾಥ ಹೇಳುತ್ತಾನೆ ದೇವರು ಆ ಕುಂಟ ನಾಯಿಯ ಮೇಲೆ ಕರುಣೆ ತೋರಿಸಿದ ಆದರೆ ನನ್ನ ಮೇಲೆ ಕರುಣೆ ತೋರಿಸಲಿಲ್ಲ. ದುಃಖದಲ್ಲಿರುವ ನನಗೆ ದೇವರು ಯಾಕೆ ಸಹಾಯ ಮಾಡಲಿಲ್ಲ. ಆಗ ನೀನು ಹೇಳುವುದು ಸತ್ಯ ದೇವರು ಒಂದು ಯೋಜನೆಯನ್ನು ಯೋಚಿಸಿ ಮಾಡಿರುತ್ತಾನೆ. ನಿನಗೆ ಕುಂಟ ನಾಯಿಯ ಹಾಗೆ ಮಾಡಲು ಇಚ್ಛಿಸುತ್ತಿಲ್ಲ.
ಹುಲಿಯ ಹಾಗೆ ಮಾಡಲು ಇಚ್ಛಿಸುತ್ತಿದ್ದಾನೆ. ನೀನು ಹುಲಿಯ ಹಾಗೆ ಸಹಾಯ ಮಾಡು ಎಂದು ಋಷಿಗಳು ಅಂದರು. ಇದರಿಂದ ಪ್ರೇರೇಪಿತನಾಗಿ ಮಂಜುನಾಥ ದುಡಿದು ಕೆಲಸ ಮಾಡಲು ನಾಡಿನತ್ತ ನಡೆದನು. ಆದಷ್ಟು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ದೇವರು ಖಂಡಿತಾ ನಿಮಗೂ ಸಹಾಯ ಮಾಡುತ್ತಾನೆ. ಇದೆ ರೀತಿಯ ಸ್ಪೋರ್ತಿದಾಯಕ ಸ್ಟೋರಿಯನ್ನು ನಮ್ಮಲ್ಲಿ ಪಡೆಯಲು ಮರೆಯದೆ ನಮ್ಮ ಪೇಜ್ ಅನ್ನು ಬೆಂಬಲಿಸಿ, ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಹಾಗೂ ಈ ಕೆಳಗಿನ ವಿಡಿಯೋ ನೋಡಿ.