ಒಬ್ಬ ಸಾಮಾನ್ಯ ಅಡಿಗೆ ಭಟ್ಟರ ಮಗ ಕನ್ನಡದ ಸೂಪರ್ ಸ್ಟಾರ್ ಆದ ರೋಚಕ ಕಥೆ

0 0

ಒಂದು ಸಾಮಾನ್ಯ ಅಡಿಗೆ ಭಟ್ಟರ ಮಗ ಕನ್ನಡಿಗರಿಗೆ ರುಚಿ ರುಚಿಯಾದಂತಹ ಸಿನಿಮಾಗಳನ್ನು ಬಡಿಸಿದ ಕತೆಯನ್ನು ನಾವು ಇಲ್ಲಿ ತಿಳಿಯೋಣ.ಬಡತನಲ್ಲಿ ಬೆಳೆದು ಬಂದು ಬರೀ ಬುದ್ಧಿವಂತಿಕೆ ಇದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ ಬುದ್ಧಿವಂತ. ಕೇವಲ ಬುದ್ಧಿವಂತಿಕೆಯಿಂದ ತನ್ನ ಹಣೆಬರಹವನ್ನು ಬದಲಿಸಿಕೊಂಡ ಸಾಧಕ. ಯಾವುದೇ ಹಿನ್ನೆಲೆ ಇಲ್ಲದೆ ಇಡೀ ಚಿತ್ರರಂಗವನ್ನೇ ತನ್ನತ್ತ ಇವರ ಅಭಿನಯಕ್ಕೆ ಎಲ್ಲರೂ ವಿಜಲ್ ಹೊಡಿಲೇಬೇಕು. ಇವರ ಸಿನೆಮಾ ನೋಡ ಬೇಕೆಂದರೆ ದುಡ್ಡಿದ್ದರೆ ಸಾಲದು ಬುದ್ಧಿಯೂ ಬೇಕು. ಅವರೇ ಉಪೇಂದ್ರ ಅವರು.

18-ಸೆಪ್ಟೆಂಬರ್-1968ರಲ್ಲಿ ಅಡುಗೆ ಭಟ್ಟರಾಗಿದ್ದ ಮಂಜುನಾಥ್ ರಾವ್ ಮತ್ತು ಅನುಸೂಯಾ ಎಂಬ ದಂಪತಿಗೆ ಬಡಕುಟುಂಬದಲ್ಲಿ 2ನೇ ಮಗುವಾಗಿ ಜನಿಸಿದರು. ಬೆಂಗಳೂರು ಜಿಲ್ಲೆಯ ಚಾಮರಾಜ ಪೇಟೆಯ ಸೇಂಟ್ ಮೆರಿಸ್ ಆಸ್ಪತ್ರೆಯಲ್ಲಿ ಜನಿಸುತ್ತಾರೆ. ಅವರು ಶಾಲೆಗೆ ಹೋಗುವಾಗ ಅವರ ತಂದೆ ದೇವಸ್ಥಾನದಿಂದ ತಂದ ಪ್ರಸಾದ ತಿಂದು ಹೋಗುತ್ತಿದ್ದರು.

ಇವರು ಚಿಕ್ಕ ವಯಸ್ಸಿನಲ್ಲಿ ಕವನಗಳನ್ನು ಬರೆಯುತ್ತಿದ್ದರು. ನಂತರ ನಾಟಕದಲ್ಲಿ ತಮ್ಮಸ್ನೇಹಿತರ ಜೊತೆ ಕೂಡಿ ಭಾಗವಹಿಸಿ ಹಣವನ್ನು ಪಡೆಯುತ್ತಿದ್ದರು. ಪೇಪರ್ ಕವರ್ ತಯಾರಿಸಿ ಅಂಗಡಿಗೆ ನೀಡುತ್ತಿದ್ದರು. ಕಾಲೇಜಿನಲ್ಲಿ ಓದುವಾಗ ಸೈಕಲ್ ತೆಗೆದುಕೊಂಡು ಹೋಗುತ್ತಿದ್ದರು. ಒಂದು ದಿನ ಇವರು ಸೈಕಲ್ ನಲ್ಲಿ ಹೋಗುತ್ತಿದ್ದಾಗ ಒಂದು ಶ್ರೀಮಂತ ಹುಡುಗಿ ಕಾರಿನಲ್ಲಿ ಬಂದು ದೊಡ್ಡ ಗಾಡಿಯಲ್ಲಿ ಬರುತ್ತೀಯಾ ಎಂದು ಅನುಮಾನ ಮಾಡಿದಾಗ ಇವರು ನೀನು ನಿನ್ನ ತಂದೆಯ ದುಡ್ಡಿನ ಕಾರಿನಲ್ಲಿ ಬರುತ್ತೀಯಾ ಆದರೆ ನಾನು ನನ್ನ ಸ್ವಂತ ದುಡ್ಡಿನಲ್ಲಿ ಇದನ್ನು ತರುತ್ತೇನೆ ಒಂದಲ್ಲ ಒಂದು ದಿನ ನಾನೂ ಮನೆಯ ಮುಂದೆ ಇಂತಹ ೮ ಕಾರುಗಳನ್ನು ನಿಲ್ಲಿಸುತ್ತೇನೆ ಅಂದಿದ್ದರು.

ಇವರ ಕಾಲೇಜಿನಿಂದ ಸಂಜೆ ಬಂದು ಕಾಶೀನಾಥ್ ರ ಬಳಿ ಕೆಲಸ ಮಾಡುತ್ತಿದ್ದರು. ಇವರ ಕೆಲಸ ನೋಡಿ ಕಾಶೀನಾಥರು “ಅನಂತನ ಅವತಾರ” ಫಿಲ್ಮ್ಗೆ ಡೈಲಾಗ್ ಮತ್ತು ಹಾಡು ಬರೆಯಲು ಅವಕಾಶ ನೀಡುತ್ತಾರೆ. ಅದೇ ಜೊತೆಗೆ ಸಿನೆಮಾದಲ್ಲಿ ಉಪೇಂದ್ರ ಅವರು ಅಭಿನಯ ಮಾಡುತ್ತಾರೆ. ಅಜಗಜಾಂತರದಲ್ಲಿ ಸಣ್ಣ ಪಾತ್ರ ಮಾಡುತ್ತಾರೆ. ಶಂಕರನಾಗ್ ಅಭಿಮಾನಿಯಾದ ಇವರಿಗೆ “ಆಟ ಬೊಂಬಾಟ” ಸಿನಿಮಾಕ್ಕೆ ಸ್ಕ್ರಿಪ್ಟ್ ಮತ್ತು ಡೈಲಾಗ್ ಬರೆಯುವುದರ ಮೂಲಕ ಶಂಕರನಾಗ್ ಅವರ ಜೊತೆ ಒಡನಾಟಗಳು ಶುರು ಆಗುತ್ತದೆ.

1993ರಲ್ಲಿ ಜಗ್ಗೇಶ್ ನಟನ ಸಾರಥ್ಯದಲ್ಲಿ ಮೊದಲ ಬಾರಿಗೆ ತಾವೇ ಸ್ಕ್ರಿಪ್ಟ್ ಬರೆದು ನಿರ್ದೇಶನ ಮಾಡಿದ ಚಿತ್ರ ತರ್ಲೆ ನನ್ ಮಗ, ಕುಮಾರ್ ಗೋವಿಂದ ಅವರ ಜೊತೆ “ಶ್” ಸಿನೆಮಾ ನಿರ್ದೇಶನ ಮಾಡುತ್ತಾರೆ. 1995ರಲ್ಲಿ ಶಿವರಾಜ್ ಕುಮಾರ್ ಅಭಿನಯದಲ್ಲಿ ಪಾರ್ವತಿ ರಾಜ್ ಕುಮಾರ್ ಅವರ ನಿರ್ಮಾಣದಲ್ಲಿ ರೌಡಿಸಂನ ” ಓಂ” ಫಿಲ್ಮ್ ನಿರ್ದೇಶಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸ್ರಷ್ಟಿಸಿದ ಚಿತ್ರ ಇದು.

1996ರಲ್ಲಿ ಬೆಸ್ಟ್ ಆಕ್ಟರ್, ಉದಯ ಫಿಲ್ಮ್ ಅವಾರ್ಡ್, 2004ರಲ್ಲಿ “ರಕ್ತ ಕಣ್ಣೀರು” ಸಿನೆಮಾಗೆ ಬೆಸ್ಟ್ ಆಕ್ಟರ್, “ಸೂಪರ್” ಸಿನೆಮಾಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಬೆಸ್ಟ್ ಫಿಲ್ಮ್, ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ದೊರೆತಿದೆ. 2015ರಲ್ಲಿ ಡಾಕ್ಟರೇಟ್ ಕೂಡ ದೊರೆತಿದೆ. 2013ರಲ್ಲಿ ಉಪ್ಪಿ ಫೌಂಡೇಶನ್ ಆರಂಭಿಸಿ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಜೀವನದಲ್ಲಿ ಕಂಡಂತಹ ಒಂದೆರಡು ಸೋಲುಗಳಿಗೆ ಹೆದರಿ ಹಿಂದೆಡೆ ಓಡುವ ಇಂದಿನ ಯುವ ಜನತೆಗೆ ಉಪೇಂದ್ರ ಅವರು ಉತ್ತಮ ಉದಾಹರಣೆ ಆಗಿದ್ದಾರೆ.

Leave A Reply

Your email address will not be published.