ಮೊದಲು ಸಕ್ಕರೆ ಪಾಕ ಹೇಗೆ ಮಾಡೋದು ಅಂತ ನೋಡೋಣ.
ಎರಡು ಕಪ್ ಸಕ್ಕರೆ (ಒಂದು ಪ್ಯಾಕೆಟ್ ಗೆ) ತೆಗೆದುಕೊಂಡು ಅದೇ ಕಪ್ ಅಲ್ಲಿ ಎರಡು ಕಪ್ ನೀರನ್ನು ಹಾಕಿ ಸಕ್ಕರೆ ಕರಗಿಸಿ ನಂತರ ಎರಡು ಸ್ಪೂನ್ ಅಷ್ಟು ಹಾಲನ್ನ ಹಾಕಬೇಕು. ಹಾಲು ಹಾಕೊದರಿಂದ ಸಕ್ಕರೆ ಕರಗಿದ ಮೇಲೆ ಬರುವ ಅದರಲ್ಲಿನ ಕಸಗಳನ್ನು ತೆಗಿಯೋಕೆ ಸಹಾಯ ಮಾಡುತ್ತೆ. ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಕುದಿಸಿ ನಂತರ ಮೇಲೆ ಬಂದಂತಹ ಬೇಡವಾದ ಒಂದು ರೀತಿಯ ಜಿಡ್ಡು ಅದನ್ನ ಚೆನ್ನಾಗಿ ತೆಗೆದು ಪಾಕವನ್ನ ಸರಿಯಾಗಿ ಅಂಟಾಗಿ ಬರುವಂತೆ ಮಾಡಿಕೊಳ್ಳಬೇಕು. ಕೈಗೆ ಅಂಟುವ ಹದಕ್ಕೆ ಸಕ್ಕರೆ ಪಾಕ ಮಾಡಿಕೊಂಡು ಅದಕ್ಕೆ ಒಂದು ಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಗ್ಯಾಸ್ ಆಫ್ ಮಾಡಿ.
ನಂತರ ಒಂದು ದೊಡ್ಡ ಪ್ಲೇಟ್ ಗೆ ಇನ್ಸ್ಟೆಂಟ್ ಜಾಮೂನ್ ಮಿಕ್ಸ್ ಪೌಡರ್ ಹಾಕಿಕೊಂಡು ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಸ್ವಲ್ಪ ಸ್ವಲ್ಪ ಆಗಿ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ತುಂಬಾ ನಾದಬಾರದು ಬಹಳ ನಾದಿಕೊಂಡರೆ ಜಾಮೂನ್ ಒಳಗೆ ಗಟ್ಟಿ ಆಗತ್ತೆ. ಹಿಟ್ಟನ್ನು ಕಲಸಿ ಐದು ನಿಮಿಷ ಒಂದು ಬೌಲ್ ಮುಚ್ಚಿ ನೆನೆಯಲು ಬಿಡಬೇಕು. ಐದು ನಿಮಿಷದ ನಂತರ ಕೈ ಗೆ ತುಪ್ಪ/ ಎಣ್ಣೆ ಹಚ್ಚಿಕೊಂಡು ಜಾಮೂನ್ ಸೈಜ್ ಎಷ್ಟು ಬೇಕೋ ಅಷ್ಟು ಹಿಟ್ಟು ತೆಗೆದುಕೊಂಡು ಬೇಕಾದ ಆಕಾರಕ್ಕೆ ಒಂದು ಚೂರೂ ಗೆರೆ ಇರದಂತೆ ಕೈಯಲ್ಲಿ ಉಂಡೆ ಮಾಡಿ ಎಲ್ಲವನ್ನೂ ಮಾಡಿಟ್ಟುಕೊಳ್ಳಬೇಕು. ನಂತರ ಎಣ್ಣೆ ಕಾದಮೇಲೆ ಒಮ್ಮೆಗೇ ಅಷ್ಟು ಹಾಕದೆ ೫/೬ ಹಾಕಿ ಎಣ್ಣೆಯಲ್ಲಿ ಕರಿಯಬೇಕು. ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ಬೇಯಿಸಿ ನಂತರ ಬಿಸಿ ಬಿಸಿ ಸಕ್ಕರೆ ಪಾಕದಲ್ಲಿ ಹಾಕಿ.ವೆಲ್ಲ ಜಾಮುನುಗಳನ್ನು ಕರಿದುಕೊಂಡು ಸಕ್ಕರೆ ಪಾಕದಲ್ಲಿ ಹಾಕಿ ಒಂದೆರಡು ಗಂಟೆಗಳ ಕಾಲ ಹಾಗೆ ನೆನೆಯಲು ಬಿಡಬೇಕು. ಇದರಿಂದ ಜಾಮೂನ್ ಚೆನ್ನಾಗಿ ಸಕ್ಕರೆ ಪಾಕವನ್ನು ಹೀರಿಕೊಳ್ಳುತ್ತದೆ. ಎರಡು ಗಂಟೆಯ ನಂತರ ರುಚಿಯಾದ ಸಿಹಿಯಾದ ಜಾಮೂನ್ ರೆಡಿ.