ರಸ್ತೆ ಬದಿಯಲ್ಲಿ ತರಕಾರಿ ಮಾರಿ ಬಡ ರೋಗಿಗಳಿಗಾಗಿ ಆಸ್ಪತ್ರೆ ಕಟ್ಟಿಸಿದ ರೈತನ ಮಗಳು

0 3

ಸ್ವಾರ್ಥಿಗಳೇ ತುಂಬಿರುವಂತ ಈ ಸಮಾಜದಲ್ಲಿ ನಿಸ್ವಾರ್ಥ ಮನೋಭಾವದರು ಇದ್ದಾರೆ ಬಡವರಿಗಾಗಿ ಹಾಗೂ ಪರರಿಗೆ ಅನುಕೂಲತೆ ಮಾಡಿಕೊಡುತ್ತಾರೆ ಅನ್ನೋ ಜನಗಳು ಕೂಡ ಒಂದಿಷ್ಟು ಇದ್ದಾರೆ ಅನ್ನೋದಕ್ಕೆ ಈ ಮಹಿಳೆಯೇ ಉತ್ತಮ ಸಾಕ್ಷಿ ಅನ್ನಬಹುದು. ಹೌದು ತಾನು ಕಷ್ಟದಲ್ಲಿದ್ದರು ತನ್ನಿಂದ ಬೇರೆಯವರಿಗೂ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ೧೯೯೩ ಇಸವಿಯಲ್ಲಿ ರಸ್ತೆ ಬದಿಯಲ್ಲಿ ತರಕಾರಿಯನ್ನು ಮಾರಿ ಅದರಿಂದ ಬಂದಂತ ಹಣವನ್ನು ಕೂಡಿಟ್ಟು ಬಡ ರೋಗಿಗಳಿಗೆ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಆಸ್ಪತ್ರೆ ಕಟ್ಟಿಸಿ ಬಡವರ ಪಾಲಿನ ದೇವತೆಯಾಗಿದ್ದರೆ ಈ ಮಹಿಳೆ.

ಅಷ್ಟಕ್ಕೂ ಈ ಮಹಿಳೆ ಯಾರು ಈಕೆಗೆ ಅಂದು ಆಸ್ಪತ್ರೆ ಕಟ್ಟಿಸಬೇಕು ಅನ್ನೋ ಛಲ ಬರಲು ಕಾರಣವೇನು? ಪರರಿಗಾಗಿ ಏಕೆ ಮಾಡುತ್ತಿರುವ ಸಹಾಯವೇಕೆ ಅನ್ನೋದನ್ನ ತಿಳಿದರೆ ನಿಜಕ್ಕೂ ನೀವು ಈಕೆಯ ಕೆಲಸವನ್ನು ಮೆಚ್ಚದೆ ಇರೋದಿಲ್ಲ, ಇವರ ಕಾರ್ಯ ವೈಖರಿ ಹೇಗಿತ್ತು ಅನ್ನೋದನ್ನ ಒಮ್ಮೆ ಚಿಕ್ಕದಾಗಿ ತಿಳಿಯೋಣ ಬನ್ನಿ ನಿಮಗೆ ಈ ಮಹಿಳೆಯ ಕಾರ್ಯ ವೈಖರಿ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ, ಇದೆ ರೀತಿಯಲ್ಲಿ ಅಲ್ಲದಿದ್ದರೂ ಬಡವರಿಗೆ ಸಹಾಯ ಮಾಡುವ ದಾನಿಗಳು ಮತ್ತಷ್ಟು ಹುಟ್ಟಿಕೊಳ್ಳಲಿ.

ಹೆಸರು ಸುಭಾಷಣಿ ಎಂಬುದಾಗಿ ಪಶ್ಚಿಮ ಬಂಗಾಳದ ಒಬ್ಬ ಬಡ ರೈತನ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳು, ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಅತಿ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುತ್ತಿದ್ದರು. ಹಾಗೆಯೆ ಈ ಮಹಿಳೆಗೂ ಕೂಡ ೧೨ ನೇ ವಯಸ್ಸಿನಲ್ಲಿ ಮದುವೆ ಮಾಡುತ್ತಾರೆ ಹಾಗೂ ಒಳ್ಳೆ ಮದುವೆ ವಯಸ್ಸಿಗೆ ಅಂದ್ರೆ ೨೨ ರಿಂದ ೨೩ ವಯಸ್ಸಿಗೆ ಬಂದಾಗಲೇ ಇವರ ಪತಿ ಸರಿಯಾದ ಚಿಕಿತ್ಸೆ ಸಿಗದೇ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪುತ್ತಾರೆ, ತನ್ನ ಜೀವನದಲ್ಲಿ ಹಲವು ಕಷ್ಟಗಳನ್ನು ಈ ಮಹಿಳೆ ಅನುಭವಿಸುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಈ ಮಹಿಳೆಗೆ ೨ ಗಂಡು ಮಕ್ಕಳು ಆಗಿರುತ್ತವೆ. ಅಂತಹ ಕಷ್ಟದ ದಿನಗಳಲ್ಲಿ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಅನ್ನೋ ನಿರ್ಧಾರದಿಂದ ಮನೆ ಬಿಟ್ಟು ಬಂದು ಹಲವು ಬಗೆಯ ಕೆಲಸಗಳನ್ನು ಈ ಮಹಿಳೆ ಮಾಡುತ್ತಾರೆ, ಆದರೂ ಕೂಡ ಹಣದ ಕೊರತೆಯಿಂದಾಗಿ ಒಬ್ಬ ಮಗನನ್ನು ಅನಾಥ ಆಶ್ರಮಕ್ಕೆ ಬಿಡುತ್ತಾರೆ ಮತ್ತೊಬ್ಬ ಮಗನನ್ನು ಹೇಗೋ ಕಷ್ಟ ಪಟ್ಟು ಪದವೀಧರನನ್ನಾಗಿ ಮಾಡುತ್ತಾರೆ.

ಹೀಗೆ ಮನೆಬಿಟ್ಟು ಕೂಲಿ ಕಾರ್ಮಿಕಳಾಗಿ ದುಡಿಯಲು ಆರಂಭಿಸಿದ ಈ ಮಹಿಳೆ ಅಂದಿನ ದಿನಗಳಲ್ಲಿ ಬಟ್ಟೆ ತೊಳೆಯುವುದು, ಪಾತ್ರೆ ತೊಳೆಯುವುದರ ಬೂಟ್ ಪಾಲಿಶ್ ಮಾಡುವ ಕೆಲಸಕ್ಕೆ ಮುಂದಾಗುತ್ತಾರೆ, ಹೀಗೆ ತಾನು ಕೆಲಸ ಮಾಡುತ್ತ ಮುಂದೊಂದಿನ ತಾನು ರಸ್ತೆ ಬದಿಯಲ್ಲಿ ತರಕಾರಿ ಮಾರುವ ಕೆಲಸಕ್ಕೆ ಮುಂದಾಗುತ್ತಾರೆ ಇದರಿಂದ ಬರುವಂತ ಹಣವನ್ನು ಕೂಡಿಟ್ಟು ಅಸ್ಪ್ರತೆ ಕಟ್ಟಲು ಮುಂದಾಗುತ್ತಾರೆ, ಮಗ ವೈದ್ಯನಾಗಿರುತ್ತಾನೆ ಮೊದಲ ಬಾರಿಗೆ ಒಂದು ಗುಡಿಸಲಿನ ನೆರಕೆ ಕಟ್ಟಿ ಆಸ್ಪತ್ರೆ ಪ್ರಾರಂಭಿಸುತ್ತಾರೆ ಮೊದಲ ದಿನಕ್ಕೆ ೨೦೦ ಕ್ಕೂ ಹೆಚ್ಚು ಪೇಶಂಟ್ ಗಳು ಆಸ್ಪತ್ರೆಗೆ ಬಂದಿರುತ್ತಾರೆ ಹೀಗೆ ಕಾಲ ಕಳೆಯುತ್ತಾ ಮುಂದಿನ ದಿನಗಳಲ್ಲಿ ಅಂದರೆ 1995ರ ಫೆಬ್ರವರಿ 5ರಂದು ಹ್ಯುಮ್ಯಾನಿಟಿ ಹಾಸ್ಪಿಟಲ್ ಕಟ್ಟಡ ನಿರ್ಮಾಣವಾಗುತ್ತೆ.

ಇನ್ನುಕಾಲ ಕಳೆಯುತ್ತಾ ಆಸ್ಪತ್ರೆಯನ್ನು ಇನ್ನು ಅನುಕೂಲವಾಗಿ ಕಟ್ಟಲು ದಾನಿಗಳು ಹುಟ್ಟಿ ಕೊಳ್ಳುತ್ತಾರೆ ಹಾಗೆಯೆ 1996ರ ಮಾರ್ಚ್ 03ರಂದು ಎರಡು ಅಂತಸ್ತಿನ ಹಾಸ್ಪೆಟಲ್ ಇದಾಗಿ ಬೆಳೆಯುತ್ತದೆ ಅಂದಿನಿಂದ್ ಐಂಡಿನವರೆಗೂ ಬಡವರ ಪಾಲಿನ ಸಂಜೀವಿನಿ ಈ ಆಸ್ಪತ್ರೆ. ಹೌದು ಇಲ್ಲಿ ಸಾಮಾನ್ಯ ಸಮಸ್ಯೆಗಳಿಗೆ ಬರಿ ೧೦ ರೂಗಳನ್ನು ಪಡೆಯಲಾಗುತ್ತಿದೆ ಇನ್ನು ಸರ್ಜರಿ ವಿಷಯಕ್ಕೆ ಬಂದ್ರೆ 5000 ಸಾವಿರ ರೂಗಳಲ್ಲಿಉತ್ತಮ ಚಿಕಿತ್ಸೆ ನೀಡಲಾಗುತ್ತದೆ.

ಅಂದಿನ ದಿನದಲ್ಲಿ ತನ್ನ ಗಂಡನಿಗೆ ಒಳ್ಳೆಯ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಾರೆ ಅನಂತಹ ಪರಿಸ್ಥಿತಿ ಬೇರೆಯವರುಗೂ ಕೂಡ ಬರ ಬಾರದು ಅನ್ನೋ ಉದ್ದೇಶದಿಂದ ಬಡವರಿಗಾಗಿ ಅನುಕೂಲತೆ ಮಾಡಲು ಮುಂದಾಗುತ್ತಾರೆ ಈ ಮಹಿಳೆ. ಇವರಿಗೆ ಇದೀಗ ೬೭ ವರ್ಷಗಳಾಗಿವೆ ಮಕ್ಕಳೊಂದಿಗೆ ತಮ್ಮ ಜೀವನ ನಡೆಸುತ್ತಿದ್ದಾರೆ. ಅದೇನೇ ಇರಲಿ ಯಾವುದೇ ಸ್ವಾರ್ಥವಿಲ್ಲದೆ ಬಡವರಿಗಾಗಿ ಈ ಮಹಿಳೆ ಪಟ್ಟ ಕಷ್ಟ ಹಾಗೂ ಮಾಡಿರಿವ ಕೆಲಸಕ್ಕೆ ನಿಜಕ್ಕೂ ಮೆಚ್ಚಲೇ ಬೇಕು ಅಲ್ಲವೇ?

Leave A Reply

Your email address will not be published.