ಸಾಮಾನ್ಯವಾಗಿ ಮನೆಯಲ್ಲಿಯೇ ಕೆಲವೊಂದು ಆಹಾರಗಳನ್ನು ತಯಾರಿಸಿ ಸವಿಯಬೇಕು ಅನ್ನೋ ಅಸೆ ಕೆಲವರಿಗೆ ಇದ್ದೆ ಇರುತ್ತದೆ, ಅಂತವರಿಗೆ ಈ ವಿಧಾನ ಸುಲಭ ಅನಿಸುತ್ತದೆ. ಎಗ್ ಬಿರಿಯಾನಿ ಅಂದ್ರೆ ಕೆಲವರಿಗೆ ಅಚ್ಚು ಮೆಚ್ಚಿನ ರೆಸಿಪಿಯಾಗಿದೆ ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ/
ಎಗ್ ಬಿರ್ಯಾನಿ ಗೆ ಬೇಕಾಗುವ ಸಾಮಗ್ರಿಗಳು:- ಮೊಟ್ಟೆ ೬ ಎಣ್ಣೆಖಾರದ ಪುಡಿ ಧನಿಯಾ ಪುಡಿ, ಕಾಳು ಮೆಣಸಿನ ಪುಡಿ ಮರಾಠಿ ಮೊಗ್ಗು, ಎರಡು ಚಕ್ಕೆ, ಐದರಿಂದ ಆರು ಲವಂಗ, ಅರ್ಧ ಸ್ಪೂನ್ ಅಷ್ಟು ಸೋಂಪು, ಎರಡು ಪುಲಾವ್ ಎಲೆ, ಎರಡು ನಕ್ಷತ್ರ ಮೊಗ್ಗು, ಒಂದು ಏಲಕ್ಕಿ, ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮೆಟೊ ಪೇಸ್ಟ್, ಶಂಠಿ ಬೆಳ್ಳುಳ್ಳಿ ಪೇಸ್ಟ್, ಬಿರ್ಯಾನಿ ಮಸಾಲ, ನಿಂಬೆ ಹಣ್ಣು, ಅರಿಶಿನ ಪುಡಿ, ಅಕ್ಕಿ, ಉಪ್ಪು
ತಯಾರಿಸುವ ವಿಧಾನ:- ಮೊದಲು ಒಂದು ಪ್ಯಾನ್ ಗೆ ೨ ಸ್ಪೂನ್ ಎಣ್ಣೆ ಹಾಕಿ ಬಿಸಿ ಆದಮೇಲೆ ಅದಕ್ಕೆ ಅರ್ಧ ಸ್ಪೂನ್ ಖಾರದ ಪುಡಿ ಕಾಲು ಚಮಚ ಧನಿಯಾ ಪುಡಿ ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ಸ್ವಲ್ಪ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಂಡು, ಉಪ್ಪು ಹಾಕಿ ಬೇಯಿಸಿದ ಮೊಟ್ಟೆಗಳನ್ನು ಸ್ವಲ್ಪ ಅಲ್ಲಲ್ಲಿ ಚಾಕುವಿನಿಂದ ಚುಚ್ಚಿಕೊಂಡು ಹಾಕಬೇಕು. ಒಂದೆರಡು ನಿಮಿಷ ಸಣ್ಣ ಉರಿಯಲ್ಲಿ ಮೊಟ್ಟೆಗಳನ್ನು ಬೇಯಿಸಿ ಇಟ್ಟುಕೊಳ್ಳಬೇಕು.
ನಂತರ ಒಂದು ಕುಕ್ಕರ್ ಗೆ ಎರಡು ಚಮಚ ಎಣ್ಣೆ ಹಾಕಿ ಕಾಯಿಸಿ ನಂತರ ನಾಲ್ಕು ಮರಾಠಿ ಮೊಗ್ಗು, ಎರಡು ಚಕ್ಕೆ, ಐದರಿಂದ ಆರು ಲವಂಗ, ಅರ್ಧ ಸ್ಪೂನ್ ಅಷ್ಟು ಸೋಂಪು, ಎರಡು ಪುಲಾವ್ ಎಲೆ, ಎರಡು ನಕ್ಷತ್ರ ಮೊಗ್ಗು, ಒಂದು ಏಲಕ್ಕಿ ಇವಿಷ್ಟನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ ೪/೫ಹಾಕಿ ನಂತರ ಈರುಳ್ಳಿ ಹಾಕಿ ಬಾಡಿಸಿಕೊಳ್ಳಬೇಕು. ನಂತರ ಒಂದು ಚಮಚ ಶಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು.
ನಂತರ ಅದಕ್ಕೆ ತೊಮ್ಯಾಟೋ ಪೇಸ್ಟ್ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ, ಖಾರ ಬೇಕಿದ್ರೆ ಮತ್ತೆ ಅರ್ಧ ಸ್ಪೂನ್ ಖಾರದ ಪುಡಿ ಸೇರಿಸಿ ಮುಕ್ಕಾಲು ಸ್ಪೂನ್ ಅಷ್ಟು ಬಿರ್ಯಾನಿ ಮಸಾಲ/ಗರಂ ಮಸಾಲ, ಕಾಲು ಚಮಚ ಧನಿಯಾ ಪುಡಿ, ಅರ್ಧ ಕಪ್ ಮೊಸರು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿ ನಂತರ ಅಕ್ಕಿ ತೆಗೆದುಕೊಂಡ ಲೋಟದಲ್ಲಿ ಅಕ್ಕಿಯ ಎರಡು ಭಾಗದಷ್ಟು ನೀರನ್ನು ಹಾಕಿ ಕುದಿಸಿ ಅಕ್ಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದು ಕುದಿ ಬರುವಾಗ ಅದಕ್ಕೆ ಅರ್ಧ ಸ್ಪೂನ್ ಅರಿಶಿನ, ಅರ್ಧ ಭಾಗ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಮೊದಲೇ ಫ್ರೈ ಮಾಡಿಟ್ಟ ಮೊಟ್ಟೆಗಳನ್ನು ಸೇರಿಸಿ ಎರಡು ವಿಸಿಲ್ ಕೋಗಿಸಿದರೆ ಬಿಸಿ ಬಿಸಿ ಎಗ್ ಬಿರ್ಯಾನಿ ರೆಡಿ.