ದೇಶದ ಬೆನ್ನೆಲುಬು ರೈತ. ಆದರೆ ಆತನ ಬೆನ್ನೆಲುಬು ಗಂಗಾದೇವಿ. ಗಂಗಾದೇವಿ ಅಂದರೆ ನೀರು. ನೀರಿಗಾಗಿ ಪರದಾಡುವ ರೈತ ಲಕ್ಷಗೆಟ್ಟಲೇ ಸಾಲ ಮಾಡಿ ಬೋರ್ವೆಲ್ ಹಾಕಿಸುತ್ತಾನೆ. ಆದರೆ ಬೋರ್ವೆಲ್ನಿಂದ ಒಂದೆರಡು ತಿಂಗಳು ಬರುವ ನೀರುನಂತರ ನಿಂತು ಹೋಗುತ್ತದೆ. ಆಗ ದಿಕ್ಕು ತೋಚದೆ ವರ್ಷಕ್ಕೆ ಸಾವಿರಾರು ಜನರು ವ್ಯವಸಾಯ ಬಿಟ್ಟು ಕೆಲಸ ಹುಡುಕಿಕೊಂಡು ನಗರಕ್ಕೆ ಹೋಗುತ್ತಾರೆ. ಆದರೆ ಈ ರೈತ ಒಂದು ಪ್ರಯೋಗಮಾಡಿ ವರ್ಷಪೂರ್ತಿ ನೀರು ಸ್ರಷ್ಟಿಸುವಂತೆ ಜಲಧಾರೆಯನ್ನು ಸ್ರಷ್ಟಿಸಿಕೊಂಡಿದ್ದಾನೆ. ಹಾಗಾದರೆ ಆ ಪ್ರಯೋಗ ಯಾವುದೆಂದು ತಿಳಿಯೋಣ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ಗ್ರಾಮದ ಶಂಕರ್ ತನಗಿದ್ದ ಸ್ವಲ್ಪ ಮಟ್ಟದ ಜಮೀನಿನಲ್ಲಿ ವ್ಯವಸಾಯ ಮಾಡೋಣ ಎಂದು ಹೇಳಿ ಒಂದು ಬೋರ್ವೆಲ್ ತೆಗಿಸಿದರು. ಆರಂಭದಲ್ಲಿ ಬೋರ್ವೆಲ್ ನಿಂದ 2ಇಂಚು ನೀರು ಬರುತ್ತಿತ್ತು. ದಿನಗಳು ಕಳೆದಂತೆ ನೀರಿನ ಮಟ್ಟ ಕಡಿಮೆ ಆಗುತ್ತಾ ಹೋಯಿತು. ಇರುವ ಸ್ವಲ್ಪ ಜಮೀನಿಗೂ ನೀರು ಸಾಕಾಗುತ್ತಿರಲಿಲ್ಲ. ಹೀಗಾದರೆ ಜೀವನ ಕಷ್ಟ ಎಂದು ತಿಳಿದ ಶಂಕರ್ ಕೃಷಿ ಅಧಿಕಾರಿಗಳಿಂದ ಮಾಹಿತಿ ತಿಳಿದು ಒಂದು ಪ್ರಯೋಗಕ್ಕೆ ಮುಂದಾದರು.
ಅದರ ಪ್ರಕಾರ ಬೋರ್ವೆಲ್ ಪಕ್ಕದಲ್ಲಿ 2ಮೀಟರ್ ಆಳ, 2ಮೀಟರ್ ಅಗಲದ 2 ಇಂಗು ಗುಂಡಿಗಳನ್ನು ನಿರ್ಮಿಸಿ ಶಂಕರ್ 3ಫೀಟ್ ವರೆಗೂ ಮರಳು, ಇದ್ದಿಲು, ದಪ್ಪದಾದ ಜಲ್ಲಿಕಲ್ಲುಗಳನ್ನು ತುಂಬಿಸಿ ಮಳೆಗಾಲದಲ್ಲಿ ವ್ಯರ್ಥವಾಗಿ ಹೋಗುವ ನೀರನ್ನು, ತಮ್ಮ
ಜಮೀನಿನ ಸುತ್ತ ಹರಿದು ಹೋಗುವ ನೀರನ್ನು ಇಂಗಿಸುತ್ತಿದ್ದಾರೆ ಶಂಕರ್. ಇದರ ಪ್ರತಿಫಲವಾಗಿ ಸರಿಯಾಗಿ 2ಇಂಚು ನೀರು ಕೂಡ ಬರದ ಬೋರ್ವೆಲ್ನಿಂದ 4ಇಂಚು ನೀರು ಬರುತ್ತಿದೆ. ಅಷ್ಟೇ ಅಲ್ಲದೆ ವರ್ಷ ಪೂರ್ತಿಯಾಗಿ ನೀರು ಬರುತ್ತಿದೆ. ಇಂಗುಗುಂಡಿಯಲ್ಲಿ ವರ್ಷಕ್ಕೆ ಸುಮಾರು 90ಲಕ್ಷ ಲೀಟರ್ ನೀರು ಸಿಗುತ್ತದೆ. ಇದರಿಂದ ವರ್ಷಕ್ಕೆ ಮೂರು ಬೆಳೆಯನ್ನು ಪಡೆದು ಲಾಭಪಡೆಯುತ್ತಿದ್ದಾರೆ ಶಂಕರ್.
ಎಲ್ಲಾರೂ ಇಸ್ರೇಲ್ ಪದ್ಧತಿಯ ಹಿಂದೆ ಬಿದ್ದಿರುವ ಸಮಯದಲ್ಲಿ ಶಂಕರ್ ಅವರ ಈ ಹೊಸ ಪ್ರಯೋಗದ ಬಗ್ಗೆ ತಿಳಿಯಲು ಆಸ್ಟ್ರೇಲಿಯಾ, ಇಸ್ರೇಲ್, ಕೆನಡಾ ಸೇರಿದಂತೆ ಈ ದೇಶದ ಕೃಷಿ ಪ್ರತಿನಿಧಿಗಳು ಶಂಕರ್ ಅವರ ತೋಟಕ್ಕೆ ಬಂದು ಮಾಹಿತಿ ಪಡೆದಿದ್ದಾರೆ. ಒಂದು ಪ್ರಯೋಗ ಇವರ ಜೀವನವನ್ನೇ ಬದಲಾಯಿಸಿದ್ದು ವ್ಯವಸಾಯ ಮಾಡುವವರಿಗೆ ಇವರು ಉತ್ತಮ ಉದಾಹರಣೆ ಆಗಿದ್ದಾರೆ. ನಿಮ್ಮ ತಮಿಯ ರೈತ ಬಂದವರಿಗೂ ಈ ವಿಚಾರವನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.