ಕೆಮ್ಮು ಎಂಬುದು ಮನುಷ್ಯ ಹುಟ್ಟಿದಾಗಿನಿಂದ ಆತನ ಸಾವಿನ ವರೆಗೂ ಸಹ ಆಗಾಗ್ಗೆ ಮನುಷ್ಯನನ್ನು ಬಾದಿಸುತ್ತಲೇ ಇರುತ್ತದೆ ಕೆಮ್ಮು ಅತಿಯಾದರೆ ಒಣ ಕೆಮ್ಮು ನಾಯಿ ಕೆಮ್ಮು ಹೀಗೆ ಹಲವಾರು ರೀತಿಯಲ್ಲಿ ನಾವು ನೋಡಬಹುದಾಗಿದೆ ಅಲ್ಲದೇ ಅತಿಯಾದ ಕೆಮ್ಮು ಮನುಷ್ಯನ ದೇಹದಲ್ಲಿ ಉಸಿರಾಟ ಕ್ರಿಯೆಗೆ ತೊಂದರೆಯುಂಟುಮಾಡುತ್ತದೆ ಎಷ್ಟೋ ಜನರು ಕೆಮ್ಮಿನಿಂದ ಉಸಿರಾಟದ ತೊಂದರೆಗೆ ಒಳಗಾಗಿ ಕೊನೆಗೆ ಕೆಮ್ಮೀ ಕೆಮ್ಮೀ ಸತ್ತವರಿದ್ದಾರೆ ಆದ್ರಿಂದ ನಾವು ಒಂದು ಚಿಕ್ಕ ಕೆಮ್ಮನ್ನೂ ಸಹ ನಿರ್ಲಕ್ಷಿಸುವ ಹಾಗಿಲ್ಲ ಯಾಕಂದ್ರೆ ಒಂದು ಚಿಕ್ಕ ಕೆಮ್ಮು ನಿಮ್ಮ ಜೀವನವನ್ನೇ ಅಂತ್ಯಗೊಳಿಸಬಹುದಾಗಿದೆ.
ಸಾಮಾನ್ಯವಾಗಿ ಈ ಕೆಮ್ಮು ಎಂಬುದು ನಮ್ಮ ಆಹಾರ ಕ್ರಮದಲ್ಲಿ ನಿರ್ಲಕ್ಷ್ಯ ತೋರುವುದರಿಂದಲೂ ಅತಿಯಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದರಿಂದಲೂ ನೀರಿನ ವ್ಯತ್ಯಾಸದಿಂದಲೂ ಅತಿ ಹೆಚ್ಚು ಧೂಳಿನಲ್ಲಿ ಕಾಲ ಕಳೆಯುವುದರಿಂದಲೂ ಅಲ್ಲದೇ ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡಲೂಬಹುದು ಆದ್ದರಿಂದ ಕೆಮ್ಮು ಬಂದಾಗ ಅದನ್ನು ನಿರ್ಲಕ್ಷಿಸದೆ ಶೀಘ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು
ಸಾಮಾನ್ಯವಾಗಿ ನಾವು ಕೆಮ್ಮನ್ನು ಗುಣಪಡಿಸಿಕೊಳ್ಳಲು ಡಾಕ್ಟರ್ ಗಳ ಮೊರೆ ಹೋಗುತ್ತೇವೆ ಅಲ್ಲದೇ ಮಾರುಕಟ್ಟೆಯಲ್ಲಿನ ಕೆಲವು ಸಿರಪ್ ಗಳನ್ನು ಕುಡಿದೂ ಕೂಡ ನಮ್ಮ ಕೆಮ್ಮನ್ನು ಹತೋಟಿಗೆ ತಂದುಕೊಳ್ಳಲು ಬಯಸುತ್ತೇವೆ ಆದರೆ ಕೆಲವೊಂದು ಪ್ರಯೋಗಗಳನ್ನು ನಾವು ಮನೆಯಲ್ಲಿಯೇ ಮಾಡುವುದರ ಮೂಲಕ ನಮ್ಮ ಕೆಮ್ಮನ್ನು ಬಹಳ ಬೇಗನೆ ನಿವಾರಿಸಿಕೊಳ್ಳಬಹುದು ಅಂತಹ ಕೆಮ್ಮನ್ನು ನಿವಾರಿಸುವ ಮನೆ ಮದ್ಧುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನೊಂದಿಗೆ ಸ್ವಲ್ಪವೇ ಅರಿಶಿನದ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ ಹೀಗೆ ಮಾಡುವುದರಿಂದ ಅರಿಶಿನದಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣವು ನಿಮ್ಮ ಗಂಟಲಿನಲ್ಲಿ ಕೆಮ್ಮು ಉಂಟು ಮಾಡುತ್ತಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ನಿಮ್ಮ ಕೆಮ್ಮನ್ನು ನಿಯಂತ್ರಣಕ್ಕೆ ತರಲು ಇದು ನೆರವಾಗುತ್ತದೆ
ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ಬಿಸಿ ನೀರಿನೊಂದಿಗೆ ಸೇರಿಸಿ ಕುಡಿಯುವುದರಿಂದಲೂ ನಿಮ್ಮ ಕೆಮ್ಮನ್ನು ಸುದಾರಿಸಿಕೊಳ್ಳಬಹುದು ಯಾಕಂದ್ರೆ ಜೇನು ತುಪ್ಪವು ಕೆಮ್ಮಿಗೆ ರಾಮಬಾಣವಾಗಿದೆ ಜೊತೆಗೆ ಮಲಗುವ ಮುನ್ನ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿ ಮಲಗುವುದರಿಂದಲೂ ಕೂಡ ಕೆಮ್ಮು ಕ್ರಮೇಣ ಸುಧಾರಾಣೆಗೆ ಬರುತ್ತದೆ