ಬೆಳ್ಳುಳ್ಳಿ ಅನ್ನೋದು ಒಂದು ಅಡುಗೆಯ ಪದಾರ್ಥವಾಗಿದೆ, ಇದರಲ್ಲಿ ಅಡುಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ದೆ ಕೆಲವೊಂದು ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಔಷಧಿ ಗುಣಗಳನ್ನು ಕಾಣಬಹುದಾಗಿದೆ, ಬೆಳ್ಳುಳ್ಳಿಯ ಉಪಯೋಗಗಳನ್ನು ಅಡುಗೆಯಲ್ಲಿ ಮಾತ್ರವಲ್ಲದೆ ಸಮನಿವಾಗಿ ಕಾಡುವಂತ ಈ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಮನೆಮದ್ದನ್ನು ಈ ಮೂಲಕ ತಿಳಿದುಕೊಳ್ಳೋಣ.
ಹುಕುಕಡ್ಡಿ ಸಮಸ್ಯೆಗೆ ಬೆಳ್ಳುಳ್ಳಿ ಮದ್ದು ಹೇಗೆ ಅನ್ನೋದನ್ನ ನೋಡುವುದಾದರೆ, ಬೆಳ್ಳುಳ್ಳಿ ಹಳಕುಗಳನ್ನು ಮೆಂಥಾಲ್ ಜೊತೆ ಸೇರಿಸಿ ಅರೆದು ಹುಳುಕಡ್ಡಿಯಾಗಿರುವಂತ ಜಾಗಕ್ಕೆ ೩ ರಿಂದ ನಾಲ್ಕು ದಿನಗಳು ಲೇಪಿಸಿದರೆ ಹುಳುಕಡ್ಡಿ ನಿವಾರಣೆಯಾಗುವುದು. ಇನ್ನು ಉಬ್ಬಸ ಸಮಸ್ಯೆಗೆ ಬೆಳ್ಳುಳ್ಳಿ ಹೇಗೆ ಸಹಕಾರಿ ಅನ್ನೋದನ್ನ ಹೇಳುವುದಾದರೆ ಹಾಲಿನಲ್ಲಿ ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುತ್ತಿದ್ದರೆ ಉಬ್ಬಸ ನಿಯಂತ್ರಣವಾಗುದು.
ಅಷ್ಟೇ ಅಲ್ಲದೆ ನರ ದೌರ್ಬಲ್ಯ ಸಮಸ್ಯೆ ಇರೋರಿಗೆ ಬೆಳ್ಳುಳ್ಳಿ ಹೇಗೆ ಪರಿಣಾಮಕಾರಿ ಅಂದರೆ ಬೆಳ್ಳುಳ್ಳಿಯನ್ನು ನುಣ್ಣಗೆ ಗೋಲಿ ಗಾತ್ರದಷ್ಟು ಅರೆದು ಒಂದು ಬಟ್ಟಲು ಹಾಲಿನಲ್ಲಿ ಕದಡಿ ಚನ್ನಾಗಿ ಕಾಯಿಸಿ ಇದನ್ನು ಪ್ರತಿದಿನ ಸೇವಿಸುವುದರಿಂದ ನರ ದೌರ್ಬಲ್ಯದಿಂದ ಪ್ರಾಪ್ತವಾಗುವ ರೋಗಗಳಿಂದ ಮುಕ್ತರಾಗಬಹುದು. ಇನ್ನು ಬೆಳ್ಳುಳ್ಳಿ ಕ್ಷಯ ರೋಗಿಗಳಿಗೆ ಹೇಗೆ ಉಪಯೋಗಕಾರಿ ಅನ್ನೋದನ್ನ ತಿಳಿಯುವುದಾದರೆ ಪ್ರತಿದಿನ ಬೆಳ್ಳುಳ್ಳಿ ಸೇವಿಸುತ್ತಿದ್ದರೆ ಕ್ಷಯ ರೋಗದಿಂದ ಮುಕ್ತರಾಗಿರುವಂತವರಿಗೆ ಈ ಕ್ಷಯ ರೋಗ ಮರುಕಳಿಸೋದಿಲ್ಲ.
ಪಾರ್ಶ್ವವಾಯು ರಾತ್ರಿ ಮಲಗುವ ಮುನ್ನ ಹತ್ತು ಗ್ರಾಂ ಬೆಳ್ಳುಳ್ಳಿಯನ್ನು ಅರೆದು ಹಾಲಿನಲ್ಲಿ ಹಾಕಿ ಚನ್ನಾಗಿ ಕಾಯಿಸಿ ಹಲವು ದಿನಗಳ ಕಾಲ ಸೇವಿಸಿದರೆ ಪಾರ್ಶ್ವವಾಯು ಭಾಗಗಳಲ್ಲಿ ಸ್ವಲ್ಪ ಚೇತರಿಕೆ ಕಂಡುಬರುವುದು. ಇನ್ನು ಕೆಮ್ಮು ಸಮಸ್ಯೆಗೆ ಬೆಳ್ಳುಳ್ಳಿ ಹೇಗೆ ಉಪಯೋಗಕಾರಿ ಅಂದರೆ ಕೆಮ್ಮು ಹಾಗು ನೆಗಡಿಯಿಂದ ಬಳಲುವವರು ಪ್ರತಿಸಿನ ಒಂದೆರಡು ಬೆಳ್ಳುಳ್ಳಿಯನ್ನು ಸೇವಿಸಿದರೆ ಕೆಮ್ಮು ಶಮನವಾಗುವುದು.