ಈರುಳ್ಳಿ ಅನ್ನೋದು ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಇದನ್ನು ಹಸಿಯಾಗಿ ತಿನ್ನುವುದರಿಂದ ಕೂಡ ದೇಹಕ್ಕೆ ಪ್ರಯೋಜನವಿದೆ, ಅಷ್ಟೇ ಅಲ್ಲದೆ ಅಡುಗೆಯ ಹಲವು ಬಗೆಯ ಖ್ಯಾದ್ಯಗಳಲ್ಲಿ ಬಳಸಲಾಗುತ್ತದೆ. ಈರುಳ್ಳಿಯನ್ನು ಈ ರೀತಿಯಾಗಿ ಬಳಸಿದ್ದೆಯಾದಲ್ಲಿ ಇಲ್ಲಿ ತಿಳಿಸಿರುವಂತ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅವುಗಳು ಯಾವುವು ಅನ್ನೋದನ್ನ ಮುಂದೆ ತಿಳಿಯೋಣ.

ಮೊದಲನೆಯದಾಗಿ ಮೂರ್ಛೆ ರೋಗಕ್ಕೆ ಈರುಳ್ಳಿ ಹೇಗೆ ಸಹಕಾರಿ ಅನ್ನೋದನ್ನ ತಿಳಿಯುವುದಾದರೆ ಈರುಳ್ಳಿಯನ್ನು ಚನ್ನಾಗಿ ಜಜ್ಜಿ ಅದರಲ್ಲಿರುವಂತ ರಸವನ್ನು ಹಿಂಡಿ ರಸ ತಗೆದುಕೊಂಡು ಮೂರ್ಛೆ ಹೋದವನ ಮೂಗಿನಲ್ಲಿ ಒಂದೆರಡು ಹನಿ ಹಾಕಿದರೆ ಮೂರ್ಛೆ ಹೋದ ವ್ಯಕ್ತಿ ಎಚ್ಚೆತ್ತು ಕೊಳ್ಳುತ್ತಾನೆ. ಇನ್ನು ಹೊಟ್ಟೆ ನೋವು ಸಮಸ್ಯೆ ಏನಾದ್ರು ಇದ್ರೆ ಹಸಿ ಈರುಳ್ಳಿಯನ್ನು ಉಪ್ಪು ಸಮೇತ ಅಗಿದು ತಿಂದರೆ ಹೊಟ್ಟೆನೋವು ನಿವಾರಣೆಯಾಗುತ್ತದೆ.

ಕಣ್ಣಿನ ದೌರ್ಬಲ್ಯತೆ ಹಾಗೂ ನೆಗಡಿ ಸಮಸ್ಯೆಗೆ ಈರುಳ್ಳಿ ಪರಿಣಾಮಕಾರಿ ಹೇಗೆ ಅನ್ನೋದಾದರೆ ಪ್ರತಿದಿನ ಬೆಳಗ್ಗೆ ನಾಲ್ಕು ಚಮಚ ಈರುಳ್ಳಿ ರಸ ಒಂದು ಚಮಚ ಜೇನುತುಪ್ಪವನ್ನು ಬೆರಸಿ ಹಲವು ದಿನಗಳವರೆಗೆ ಬಿಡದೆ ಸೇವಿಸಿದರೆ ಉತ್ತಮ ಗುಣ ಕಂಡುಬರುವುದು, ಅತಿಯಾದ ಶೀತದಿಂದ ನೆಗಡಿಯಾಗಿದ್ದರೆ ಈರುಳ್ಳಿ ರಸವನ್ನು ಅಗ್ರಣಿಸುವುದರಿಂದ ಸಿಂಬಳ ಸುರಿಯುವುದು ಕಡಿಮೆಯಾಗುವದು.

ಇನ್ನು ಜೇನುನೊಣ ಚೇಳು ಅಥವಾ ಕಣಜ ಕಚ್ಚಿದರೆ ಈರುಳ್ಳಿ ರಸವೊಂದನ್ನು ಅಥವಾ ಈರುಳ್ಳಿ ರಸಕ್ಕೆ ಅಮೋನಿಯಾ ಕ್ಲೋರೈಡ್ ಸೇರಿಸಿ ಹಚ್ಚುವುದರಿಂದ ಕಡಿತದಿಂದ ಉಂಟಾದ ನೋವು ನಿವಾರಣೆಯಾಗುವುದು. ಹೀಗೆ ಅನೇಕ ಔಷದಿ ಗುಣಗಳನ್ನು ಈರುಳ್ಳಿಯಿಂದ ಪಡೆಯಬಹುದಾಗಿದೆ. ಹಸಿ ಈರುಳ್ಳಿಯನ್ನು ಪ್ರತಿದಿನ ಊಟದ ಜೊತೆಗೆ ಸೇವನೆ ಮಾಡುವ ಅಭ್ಯಾಸ ಇದ್ರೆ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.

By

Leave a Reply

Your email address will not be published. Required fields are marked *