ಸಾಮಾನ್ಯವಾಗಿ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಯಾವುದೇ ಬೇಧವಿಲ್ಲದೆ ಯಾವುದೇ ವಯೋಮಾನದ ಬೇದವಿಲ್ಲದೆ ಜನರನ್ನು ಕಾಡುವ ಒಂದು ದೊಡ್ಡ ಚರ್ಮದ ಸಮಸ್ಯೆ ಎಂದರೆ ಅದು ಸ್ಕಿನ್ ಟ್ಯಾಗ್ ಅಥವಾ ನರುಳ್ಳೆ ರೀತಿಯಾದ ನರಹುಲಿ ಎಲ್ಲ ವರ್ಗದ ಜನರಲ್ಲಿ ಮುಖದ ಮೇಲೆ ಕಣ್ಣಿನ ಮೇಲ್ಭಾಗದಲ್ಲಿ ಕುತ್ತಿಗೆಯ ಭಾಗದಲ್ಲಿ ಬೆನ್ನಿನ ಮೇಲೆ ಹೀಗೆ ಹಲವಾರು ದೇಹದ ಭಾಗಗಳಲ್ಲಿ ಉಂಟಾಗಿರುತ್ತವೆ, ಅದರಲ್ಲಿ ಮುಖದ ಮೇಲೆ ಮತ್ತು ಕಣ್ಣಿನ ಮೇಲೆ ಉಂಟಾಗುವ ಸ್ಕಿನ್ ಟ್ಯಾಗ್ ಜನರಿಗೆ ಬಹಳ ಕಿರಿ ಕಿರಿಯನ್ನು ಉಂಟುಮಾಡುತ್ತದೆ. ಅಲ್ಲದೇ ಬೇರೆಯವರಿಗೆ ಅದನ್ನು ತೋರಿಸಿಕೊಳ್ಳಲು ಮುಜುಗರವನ್ನು ಉಂಟುಮಾಡುತ್ತದೆ.
ದೇಹದ ಹಲವಾರು ಭಾಗಗಳಲ್ಲಿ ಉಂಟಾಗುವ ಈ ರೀತಿಯಾದ ಸ್ಕಿನ್ ಟ್ಯಾಗ್ ಗಳು ಇದೇ ಕಾರಣಕ್ಕೆ ಬಂದಿರಬಹುದು ಎಂದು ನಾವು ಸ್ಪಷ್ಟಪಡಿಸಲು ಸಾಧ್ಯವಿಲ್ಲ, ಈ ರೀತಿಯಾದ ಸ್ಕಿನ್ ಟ್ಯಾಗ್ ಕೆಲವೊಮ್ಮೆ ದೇಹದಲ್ಲಿನ ವಿಟಮಿನ್ ಗಳ ಕೊರತೆಯಿಂದಲೂ ಕೆಲವೊಮ್ಮೆ ಅನುವಂಶೀಯವಾಗಿ ಮತ್ತು ಹೆಣ್ಣು ಮಕ್ಕಳು ಗರ್ಭ ದರಿಸುವ ಸಂದರ್ಭದಲ್ಲಿ ದೇಹದಲ್ಲಿನ ಹಾರ್ಮೋನ್ ಗಳ ವ್ಯತ್ಯಾಸದಿಂದಲೋ ಉಂಟಾಗಿರುತ್ತದೆ, ಇದಕ್ಕೆ ಹಲವಾರು ಪರಿಹಾರಗಳೂ ಸಹ ಇವೆ ಮತ್ತು ಶಸ್ತ್ರ ಚಿಕಿತ್ಸೆಯನ್ನೂ ಸಹ ಮಾಡಿಸಿಕೊಳ್ಳಬಹುದು. ಆದರೆ ಹೀಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಿಂತ ಮನೆ ಮದ್ಧು ಉತ್ತಮ ಉಪಾಯವಾಗಿದೆ ಸ್ಕಿನ್ ಟ್ಯಾಗ್ ಅನ್ನು ನಿವಾರಿಸಿಕೊಳ್ಳಲು ಉಪಯೋಗಿಸಬಹುದಾದ ಮನೆ ಮದ್ಧುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಹೆಣ್ಣು ಮಕ್ಕಳ ಒಂದು ಉದ್ದವಾದ ಕೂದಲನ್ನು ತೆಗೆದುಕೊಂಡು ಅದರಿಂದ ಚರ್ಮದ ಮೇಲೆ ಉಂಟಾಗಿರುವ ನರಹುಲಿಯನ್ನು ಸೇರಿಸಿ ಗಂಟು ಹಾಕಿ ಅದನ್ನು ಮೆದುವಾಗಿ ಅದುಮುತ್ತ ಬರಬೇಕು, ಹೀಗೆ ಪ್ರತಿ ದಿನವೂ ಮಾಡುವುದರಿಂದ ಮೂರರಿಂದ ನಾಲ್ಕು ದಿನಗಳಲ್ಲಿ ಆ ನರಹುಲಿಯು ಉದುರಿ ಹೋಗುವ ಸಾದ್ಯತೆ ಇರುತ್ತದೆ. ಇನ್ನು ಎರಡನೆಯದಾಗಿ ಆಪಲ್ ವಿನೇಗಾರ್ ದ್ರವವನ್ನು ಒಂದು ಚಿಕ್ಕ ಹತ್ತಿಯಲ್ಲಿ ಅದ್ದಿ ಅದನ್ನು ಸ್ಕಿನ್ ಟ್ಯಾಗ್ ಇರುವ ಜಾಗದ ಮೇಲೆ ರಾತ್ರಿ ಇಡೀ ಇಟ್ಟುಕೊಂಡು ಮಲಗುವುದರಿಂದ ನಾಲ್ಕರಿಂದ ಐದು ದಿನಗಳಲ್ಲಿ ಸ್ಕಿನ್ ಟ್ಯಾಗ್ ಉದುರುವ ಸಾದ್ಯತೆ ಇರುತ್ತದೆ.
ಮೂರನೆಯದಾಗಿ ಮತ್ತು ಬಹಳ ಪರಿಣಾಮಕಾರಿ ಮನೆ ಮದ್ಧು ಎಂದರೆ ಒಂದು ಬೌಲ್ ನಲ್ಲಿ ಒಂದು ಚಮಚ ಅಡುಗೆ ಸೊಡವನ್ನು ಹಾಕಿ ಅದಕ್ಕೆ ಸ್ವಲ್ಪ ಕ್ಯಾಸ್ಟರ್ ಆಯಿಲ್ ಅನ್ನು ಹಾಕಿ ನಂತರ ಅದಕ್ಕೆ ಸ್ವಲ್ಪವೇ ಹಲ್ಲು ಉಜ್ಜಲು ಬಳಸುವ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಹೀಗೆ ಮಾಡಿಕೊಂಡ ಮಿಶ್ರಣವನ್ನು ಸ್ಕಿನ್ ಟ್ಯಾಗ್ ಇರುವ ಜಾಗದ ಮೇಲೆ ಲೇಪಿಸಿ ರಾತ್ರಿ ಇಡೀ ಬಿಡುವುದರಿಂದ ಕೇವಲ ಒಂದೇ ದಿನದಲ್ಲಿ ಸ್ಕಿನ್ ಟ್ಯಾಗ್ ಉದುರಿ ಹೋಗುವ ಸಾಧ್ಯತೆ ಇರುತ್ತದೆ.